ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್: ಉದಯ್-ಋತುಜಾ ಚಾಂಪಿಯನ್

Last Updated 17 ಜನವರಿ 2012, 19:30 IST
ಅಕ್ಷರ ಗಾತ್ರ

ಧಾರವಾಡ: ಬೆಂಗಳೂರಿನ ಉದಯ್ ನಾಯ್ಡು ಮತ್ತು ಋತುಜಾ ಎನ್. ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಶಾಲೆ ಆವರಣದಲ್ಲಿ ಮಂಗಳವಾರ ಆರಂಭವಾದ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಕ್ರಮವಾಗಿ ಹತ್ತು ವರ್ಷದೊಳಗಿನ ಬಾಲಕ-ಬಾಲಕಿಯರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಉದಯ್ ಬಾಲಕರ ಫ್ಲೋರ್ ಎಕ್ಸರ್‌ಸೈಜ್ ಮತ್ತು ಟೇಬಲ್ ವಾಲ್ಟ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದರೆ, ಋತುಜಾ ಬಾಲಕಿಯರ ಬ್ಯಾಲೆನ್ಸಿಂಗ್ ಬೀಮ್‌ನಲ್ಲಿ ಚಿನ್ನ ಗೆದ್ದರೆ, ಫ್ಲೋರ್ ಎಕ್ಸರ್‌ಸೈಜ್‌ನಲ್ಲಿ ರಜತ ಸಂಭ್ರಮ ಆಚರಿಸಿಕೊಂಡರು. ರಾಜ್ಯ ಜಿಮ್ನಾಸ್ಟಿಕ್ಸ್ ಸಂಸ್ಥೆ, ಧಾರವಾಡ ಜಿಲ್ಲಾ ಜಿಮ್ನಾಸ್ಟಿಕ್ಸ್ ಸಂಸ್ಥೆ, ಪವನ್ ಜಿಮ್ನಾಸ್ಟಿಕ್ಸ್ ಕ್ಲಬ್ ಜಂಟಿಯಾಗಿ ಈ ಸ್ಪರ್ಧೆಯನ್ನು ಸಂಘಟಿಸಿವೆ.

ಫಲಿತಾಂಶ: ಬಾಲಕರು: 10 ವರ್ಷದೊಳಗಿನವರು: ಫ್ಲೋರ್ ಎಕ್ಸರ್‌ಸೈಜ್: ಉದಯ್ ಸಿ. ನಾಯ್ಡು-1, ಸುಭಾಷ ಗೌಡ-2, ಭಾರ್ಗವ ವಿ. ಸ್ವಾಮಿ, ಶರಣ್ ಕೆ.ಜೆ. (ಎಲ್ಲರೂ ಬೆಂಗಳೂರು)-3, ಪಾಯಿಂಟ್: 15.65, ಟೇಬಲ್ ವಾಲ್ಟ್: ಉದಯ್ ಸಿ. ನಾಯ್ಡು-1, ಭಾರ್ಗವ್ ವಿ. ಸ್ವಾಮಿ-2, ಶರಣ್ ಕೆ.ಜೆ. (ಮೂವರೂ ಬೆಂಗಳೂರು), ಕಿರಣ್ ಕರಿಕಟ್ಟಿ (ಧಾರವಾಡ)-3, ಪಾಯಿಂಟ್: 15.90; ವೈಯಕ್ತಿಕ ಚಾಂಪಿಯನ್: ಉದಯ್ ನಾಯ್ಡು-1, ಭಾರ್ಗವ್ ವಿ. ಸ್ವಾಮಿ-2, ಶರಣ್ ಕೆ.ಜೆ. (ಮೂವರೂ ಧಾರವಾಡ)-3, ಪಾಯಿಂಟ್: 31.55.

12 ವರ್ಷದ ಒಳಗಿನವರು: ಫ್ಲೋರ್ ಎಕ್ಸರ್‌ಸೈಜ್: ಉಜ್ವಲ್ ನಾಯ್ಡು (ಬೆಂಗಳೂರು)-1, ಅಮೃತ್ ಮುದ್ರಾಬೆಟ್-2, ಸಿದ್ಧಾರೂಢ ಕೈನಡಗು (ಇಬ್ಬರೂ ಧಾರವಾಡ)-3, ಪಾಯಿಂಟ್: 13.25; ಪ್ಯಾರಲಲ್ ಬಾರ್: ಅಮೃತ್ ಮುದ್ರಾಬೆಟ್-1, ಸಿದ್ಧಾರೂಢ ಕೈನಡಗು (ಇಬ್ಬರೂ ಧಾರವಾಡ)-2, ಉಜ್ವಲ್ ನಾಯ್ಡು (ಬೆಂಗಳೂರು)-3, ಪಾಯಿಂಟ್: 13.00; ಟೇಬಲ್ ವಾಲ್ಟ್: ಸಿದ್ಧಾರೂಢ ಕೈನಡಗು (ಧಾರವಾಡ)-1, ಉಜ್ವಲ್ ನಾಯ್ಡು (ಬೆಂಗಳೂರು)-2, ಅಮೃತ್ ಮುದ್ರಾಬೆಟ್ (ಧಾರವಾಡ)-3, ಪಾಯಿಂಟ್: 15.40;

ರೋಮನ್ ರಿಂಗ್ಸ್: ಸಿದ್ಧಾರೂಢ ಕೈನಡಗು -1, ಅಮೃತ್ ಮುದ್ರಾಬೆಟ್-2, ಮೆಹಬೂಬ್ ಹಂಚಿನಾಳ (ಮೂವರೂ ಧಾರವಾಡ)-3, ಪಾಯಿಂಟ್: 13.75; ಪೊಮೆಲ್ ಹಾರ್ಸ್: ಅಮರೇಂದ್ರನ್ (ಬೆಂಗಳೂರು)-1, ಮೆಹಬೂಬ್ ಹಂಚಿನಾಳ (ಧಾರವಾಡ)-2, ಪ್ರಜ್ವಲ್ ಕೋಲಾರ್ (ಧಾರವಾಡ)-3, ಪಾಯಿಂಟ್: 11.95; ಹೈಬಾರ್: ಉಜ್ವಲ್ ನಾಯ್ಡು (ಬೆಂಗಳೂರು)-1, ಮೆಹಬೂಬ್ ಹಂಚಿನಾಳ-2, ಪ್ರಜ್ವಲ್ ಕೋಲಾರ್ (ಇಬ್ಬರೂ ಧಾರವಾಡ)-3, ಪಾಯಿಂಟ್: 9.65; ವೈಯಕ್ತಿಕ ಚಾಂಪಿಯನ್: ಸಿದ್ಧಾರೂಢ ಕೈನಡಗು-1, ಮೆಹಬೂಬ್ ಹಂಚಿನಾಳ (ಇಬ್ಬರೂ ಧಾರವಾಡ)-2, ಉಜ್ವಲ್ ನಾಯ್ಡು (ಬೆಂಗಳೂರು)-3, ಪಾಯಿಂಟ್: 70.80.

ಬಾಲಕಿಯರು: ಹತ್ತು ವರ್ಷದೊಳಗಿನವರು: ಫ್ಲೋರ್ ಎಕ್ಸರ್‌ಸೈಜ್: ಅಂಕಿತಾ ಕುಲಕರ್ಣಿ (ಧಾರವಾಡ)-1, ಋತುಜಾ ಎನ್. (ಬೆಂಗಳೂರು)-2, ಅಕ್ಷತಾ ಕುಲಕರ್ಣಿ (ಧಾರವಾಡ)-3, ಪಾಯಿಂಟ್: 18.30; ಬ್ಯಾಲೆನ್ಸಿಂಗ್ ಬೀಮ್: ಋತುಜಾ ಎನ್. (ಬೆಂಗಳೂರು)-1, ಅಕ್ಷತಾ ಕುಲಕರ್ಣಿ-2, ಅಂಕಿತಾ ಕುಲರ್ಣಿ (ಇಬ್ಬರೂ ಧಾರವಾಡ), ಶ್ರೇಯಾ ಸಂದೀಪ್ (ಬೆಂಗಳೂರು)-3, ಪಾಯಿಂಟ್: 14.95; ವೈಯಕ್ತಿಕ ಚಾಂಪಿಯನ್: ಋತುಜಾ ಎನ್. (ಬೆಂಗಳೂರು)-1, ಅಂಕಿತಾ ಕುಲಕರ್ಣಿ -2, ಅಕ್ಷತಾ ಕುಲಕರ್ಣಿ (ಇಬ್ಬರೂ ಧಾರವಾಡ)-3, ಪಾಯಿಂಟ್: 33.20.

12 ವರ್ಷದ ಒಳಗಿನವರು: ಫ್ಲೋರ್ ಎಕ್ಸರ್‌ಸೈಜ್: ಲಕ್ಷ್ಮಿ ದೇಸಾಯಿ-1, ದಿವ್ಯಾ ತಳವಾರ-2, ವೀಣಾ ಬಾಬರ್ (ಮೂವರೂ ಧಾರವಾಡ)-3, ಪಾಯಿಂಟ್: 9.15; ಟೇಬಲ್ ವಾಲ್ಟ್: ವೀಣಾ ಬಾಬರ್-1, ಲಕ್ಷ್ಮಿ ದೇಸಾಯಿ-2, ನಾಗವೇಣಿ ಕಡಗದ (ಮೂವರೂ ಧಾರವಾಡ)-3, ಪಾಯಿಂಟ್: 11.85;

ಬ್ಯಾಲೆನ್ಸಿಂಗ್ ಬೀಮ್: ವೀಣಾ ಬಾಬರ್-1, ಲಕ್ಷ್ಮಿ ದೇಸಾಯಿ-2, ನಾಗವೇಣಿ ಕಡಗದ (ಮೂವರೂ ಧಾರವಾಡ)-3, ಪಾಯಿಂಟ್: 6.80; ಅನ್‌ಇವನ್ ಬಾರ್: ಲಕ್ಷ್ಮಿ ದೇಸಾಯಿ-1, ನಾಗವೇಣಿ ಕಡಗದ-2, ವೀಣಾ ಬಾಬರ್ (ಮೂವರೂ ಧಾರವಾಡ)-3, ಪಾಯಿಂಟ್: 4.90; ವೈಯಕ್ತಿಕ ಚಾಂಪಿಯನ್: ಲಕ್ಷ್ಮಿ ದೇಸಾಯಿ-1, ನಾಗವೇಣಿ ಕಡಗದ-2, ವೀಣಾ ಬಾಬರ್ ಮತ್ತು ದಿವ್ಯಾ ತಳವಾರ (ಎಲ್ಲರೂ ಧಾರವಾಡ)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT