ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್: ಗಮನ ಸೆಳೆದ ಉಜ್ವಲ್ ನಾಯ್ಡು

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಧಾರವಾಡ: ಬೆಂಗಳೂರಿನ ಉಜ್ವಲ್ ನಾಯ್ಡು ಇಲ್ಲಿ ಶುಕ್ರವಾರ ಆರಂಭಗೊಂಡ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಮ್ನಾಸ್ಟಿಕ್ಸ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಲ್ಲಸಜ್ಜನ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಮೊದಲ ದಿನದ ಎಕ್ಸಸೈಜ್ ವಿಭಾಗದಲ್ಲಿ ಉಜ್ವಲ್ ಮೊದಲ ಸ್ಥಾನ ಗಳಿಸಿದರು.

ಫಲಿತಾಂಶ: ಫ್ಲೋರ್ ಎಕ್ಸಸೈಜ್ ವಿಭಾಗ: ಉಜ್ವಲ್ ನಾಯ್ಡು-ಬೆಂಗಳೂರು (1), ಸಿದ್ಧಾರೂಢ ಕೈನಡಗ-ಧಾರವಾಡ (2), ಅಮೃತ ಮುದ್ರಾಬೆಟ್ಟು- ಧಾರವಾಡ (3).

ಟೇಬಲ್ ವಾಲ್ಟ್: ಶಶಿಧರ ಗುಡಗೂರ-ಧಾರವಾಡ (1), ಸಿದ್ಧಾರೂಢ ಕೈನಡಗ (2), ಉಜ್ವಲ್ ನಾಯ್ಡು (3). ರಿಂಗ್ಸ್ ವಿಭಾಗ: ಸಿದ್ಧಾರೂಢ ಕೈನಡಗ (1), ಅಮೃತ ಮುದ್ರಾಬೆಟ್ಟು (2), ಉಜ್ವಲ್ ನಾಯ್ಡು (3). ಪ್ಯಾರಲೆಲ್ ಬಾರ್ ವಿಭಾಗ: ಅಮೃತ ಮುದ್ರಾಬೆಟ್ಟು (1), ಸಿದ್ಧಾರೂಢ ಕೈನಡಗ (2), ಉಜ್ವಲ್ ನಾಯ್ಡು (3).
ಹೈ ಬಾರ್ ವಿಭಾಗ: ಉಜ್ವಲ್ ನಾಯ್ಡು (1), ಮೆಹಬೂಬ ಹಂಚಿನಾಳ-ಧಾರವಾಡ (2), ಅಮೃತ ಮುದ್ರಾಬೆಟ್ಟು (3). ಪೊಮೆಲ್ ಹಾರ್ಸ್ ವಿಭಾಗ: ಉಜ್ವಲ್ ನಾಯ್ಡು (1), ಮೆಹಬೂಬ್ ಹಂಚಿನಾಳ-ಧಾರವಾಡ (2), ಸಿದ್ಧಾರೂಢ ಕೈನಡಗ (3).

ಸೆಮಿಫೈನಲ್‌ಗೆ ಬೆಂಗಳೂರು ದಕ್ಷಿಣ: ಇದೇ ವೇಳೆ ನಡೆದ ರಾಜ್ಯ ಮಟ್ಟದ ನೆಟ್‌ಬಾಲ್ ಟೂರ್ನಿಯ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ದಾವಣಗೆರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಸೆಮಿಫೈನಲ್ ಪ್ರವೇಶಿಸಿದವು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ದಾವಣಗೆರೆ, ಧಾರವಾಡ, ಹಾಸನ ಜಿಲ್ಲೆಯ ತಂಡಗಳು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟವು.

ಬಾಲಕಿಯರ ವಿಭಾಗ: 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಾವಣಗೆರೆ, ಹಾಸನ, ಬೆಂಗಳೂರು ದಕ್ಷಿಣ, ದಕ್ಷಿಣ ಕನ್ನಡ, 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಧಾರವಾಡ, ಹಾಸನ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ತಂಡಗಳು ಸೆಮಿಫೈನಲ್‌ಗೆ ತಲುಪಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT