ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್ಸ್ ಸ್ಪರ್ಧಿಗೆ ತಾತ್ಕಾಲಿಕ ನಿಷೇಧ

Last Updated 29 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಉಜ್ಬೇಕಿಸ್ತಾನದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಸ್ಪರ್ಧಿ ಲುಯಿಜಾ ಗಾಲಿಯುಲಿನಾ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಇಪ್ಪತ್ತು ವರ್ಷ ವಯಸ್ಸಿನ ಲುಯಿಜಾ ಅವರು ನಿಷೇಧಿತ ಮದ್ದು ತೆಗೆದುಕೊಂಡಿದ್ದು ಖಚಿತವಾಗಿರುವ ಕಾರಣ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ)ಯು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಬುಧವಾರ ಸ್ಯಾಂಪಲ್ ಪಡೆಯಲಾಗಿತ್ತು. ಅದರಲ್ಲಿ ಮದ್ದಿನ ಅಂಶ ಪತ್ತೆಯಾಗಿದೆ ಎಂದು ಕೂಡ ವಿವರಿಸಲಾಗಿದೆ.

ಈ ಕೂಟದಲ್ಲಿ ಉದ್ದೀಪನ ಮದ್ದು ತೆಗೆದುಕೊಂಡು ಸಿಕ್ಕಿಬಿದ್ದ ಎರಡನೇ ಕ್ರೀಡಾಪಟುವಾಗಿದ್ದಾರೆ ಲುಯಿಜಾ. ಇದಕ್ಕೂ ಮುನ್ನ ಶನಿವಾರದಂದು ಅಲ್ಬೇನಿಯಾದ ವೇಟ್‌ಲಿಫ್ಟರ್ ಹಿಸೆನ್ ಪುಲಾಕು ಸ್ಟೀರಾಯ್ಡ ತೆಗೆದುಕೊಂಡಿದ್ದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT