ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯಾ ಅಭಿನಯ ಸೊನ್ನೆಯಂತೆ...

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

`ಮಹಾರಾಣಿ~ ಚಿತ್ರದಿಂದ ಜಿಯಾ ಖಾನ್ ಹೊರಬಿದ್ದಿದ್ದಾರೆ. ಜಿಯಾಗೆ ಅಭಿನಯ ಬರುವುದಿಲ್ಲ ಎನ್ನುವುದು ನಿರ್ದೇಶಕರ ದೂರು.

`ನಿಶ್ಶಬ್ದ್~ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಮೂಲಕ ಬಾಲಿವುಡ್ ಪ್ರವೇಶಿಸಿದ ಜಿಯಾಗೆ ಹೇಳಿಕೊಳ್ಳುವಂಥ ಅವಕಾಶಗಳು ಬರಲೇ ಇಲ್ಲ. `ಘಜಿನಿ~ಯಲ್ಲಿ ಎರಡನೇ ನಾಯಕಿ ಮತ್ತು `ಹೌಸ್‌ಫುಲ್~ ಚಿತ್ರದಲ್ಲಿ ಬಹುತಾರಾಗಣದೊಂದಿಗೆ ಜೊತೆಗಿದ್ದರು, ಅಷ್ಟೇ.

ವಿಲಿಯಂ ಡಾಲ್‌ರಿಂಪಲ್ ಅವರ `ಸೀಕ್ರೆಟ್ ಡೈರೀಸ್~ ಕಾದಂಬರಿ ಆಧರಿಸಿದ `ಮಹಾರಾಣಿ~ ಸಿನಿಮಾಗೆ ಜಿಯಾ ಆಯ್ಕೆಯಾಗಿದ್ದರಷ್ಟೇ. 17ನೇ ಶತಮಾನದಲ್ಲಿ ನಡೆಯುವ ಈ ಕತೆಯನ್ನು ನಿರ್ದೇಶಕಿ ಮಧುರಿತಾ ಆನಂದ್, ಚಿತ್ರವಾಗಿ ರೂಪಿಸುವ ಹೊಣೆ ಹೊತ್ತಿದ್ದಾರೆ.
 
ಚಿತ್ರದ ತಾಲೀಮಿನ ಸಂದರ್ಭದಲ್ಲಿ, ಜಿಯಾರ ನಿಸ್ಸಾರ ಅಭಿನಯ ಕಂಡು ನಿರ್ದೇಶಕರು ಆಕೆಯನ್ನು ಚಿತ್ರದಿಂದ ಹೊರಹಾಕಿದ್ದಾರೆ. ಆ ಕುರಿತು ಕೇಳಿದರೆ ಜಿಯಾ ಹೇಳುವುದು- `ನಾನು `ಮಹಾರಾಣಿ~ ಹೆಸರಿನ ಸಿನಿಮಾವನ್ನೇ ಒಪ್ಪಿಕೊಂಡಿರಲಿಲ್ಲ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT