ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉತ್ಸವ ಮುಗಿದರೂ ನಿಲ್ಲದ ವಿವಾದ

Last Updated 18 ಡಿಸೆಂಬರ್ 2013, 4:16 IST
ಅಕ್ಷರ ಗಾತ್ರ

ಧಾರವಾಡ: ಮೂರು ದಿನಗಳ ಧಾರವಾಡ ಜಿಲ್ಲಾ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಪ್ರಮುಖ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಸಿಗಲಿಲ್ಲ. ಮೊದಲು ನೀಡಿದ್ದ ಅವಧಿಯನ್ನು ಕಾರ್ಯಕ್ರಮ ದಿನದಂದು ಮೊಟಕು­ಗೊಳಿಸ­ಲಾಯಿತು ಎಂಬ ಆರೋಪಗಳು ಕೇಳಿ ಬಂದಿವೆ.

ಅಲ್ಲದೇ, ಕಳೆದ ಬಾರಿ ಉತ್ಸವ ನಡೆದಾಗ ಕಲಾವಿದರಿಗೆ ನೀಡಲಾದ ಸಂಭಾವನೆಯ ಅರ್ಧದಷ್ಟೂ ಈ ಬಾರಿ ನೀಡಿಲ್ಲ ಎಂಬ ಅಸಮಾಧಾನಗಳೂ ಕೇಳಿ ಬಂದಿವೆ.

ಅಲ್ಲದೇ, ವಿವಿಧ ಉಪಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡುವಾಗ ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ಅಲ್ಲದೇ, ಕಾರ್ಯಕ್ರಮ ನೀಡಲಿರುವ ತಂಡಗಳನ್ನು ಸರಿಯಾದ ಸಭೆ­ಯನ್ನೂ ನಡೆಸಲಿಲ್ಲ ಎಂದು ಹಲವು ಕಲಾವಿದರು ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲ. ಕಾರ್ಯಕ್ರಮ ಪಟ್ಟಿಯಲ್ಲಿ ಹೆಸರು ಹಾಕು­ವಾಗಲೂ ಅವರನ್ನು ಸಂಪರ್ಕಿಸಿಲ್ಲ. ಎಷ್ಟೋ ಕಲಾವಿದರಿಗೆ ಕಾರ್ಯಕ್ರಮ ಪಟ್ಟಿ ನೋಡಿ­­­ದಾಗಲೇ ತಾವು ಕಾರ್ಯಕ್ರಮ ನೀಡ­ಬೇಕು ಎದು ಗೊತ್ತಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಕಲಾವಿದರ ಮಧ್ಯದ ಸಮನ್ವಯತೆಯೇ ಕಾರಣ ಎಂದು ಆ ಕಲಾವಿದರು ಆರೋಪಿಸಿದ್ದಾರೆ.

ಡಿ 13ರಂದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸಂಗೀತ ಕಾರ್ಯಕ್ರಮ ನೀಡಿದ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಹಾಗೂ ಹಿಂದೂಸ್ತಾನಿ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರಿಗೆ ತಲಾ ಅರ್ಧ ಗಂಟೆ ಕಾಲ ಕಾರ್ಯಕ್ರಮ ನೀಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಸಮನ್ವಯದ ಕೊರತೆಯಿಂದಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳು ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಈ ಇಬ್ಬರೂ ಕಲಾವಿದರ ಸಮಯವನ್ನು ಅರ್ಧ ಗಂಟೆಯ ಬದಲು 15 ನಿಮಿಷಕ್ಕೆ ಇಳಿಸಲಾಯಿತು.

‘ಅಬ್ಬರದ ಸಂಗೀತದ ಮಧ್ಯೆ ಹಾಡಿದ ಕೆಲ ಕಲಾವಿದರಿಗೆ ಲಕ್ಷಾಂತರ ರೂಪಾಯಿ ಸಂಭಾವನೆ ನೀಡಲಾಗಿದ್ದು, ನಮಗೆ ಮಾತ್ರ ಕೇವಲ ₨ 8 ಸಾವಿರ ನೀಡಲಾಗಿದೆ. ಹಲವು ಜನಪದ ಕಲಾ ತಂಡಗಳಿಗೆ ಕೇವಲ ₨ 3 ಸಾವಿರ ಮಾತ್ರ ನೀಡಲಾಗಿದೆ’ ಎಂದು ಬಸವಲಿಂಗಯ್ಯ ಹಿರೇಮಠ ಆರೋಪಿಸಿದರು.

ಕಲಾವಿದರಿಗೆ ಅಗೌರವ: ಅಂತರರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್‌ ವಾದಕ ಹಾಗೂ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪಂ.ನರಸಿಂಹಲು ವಡವಾಟಿ ಅವರಿಗೆ ಕನಿಷ್ಟ ಒಂದು ಕಪ್‌ ಚಹಾ ಕೂಡಾ ಕೊಡಲಿಲ್ಲ. ಅಂತಹ ಹಿರಿಯ ಸಂಗೀತಗಾರರನ್ನು ಸ್ವಾಗತಿಸುವವರೂ ಇರಲಿಲ್ಲ ಎಂದು ಹಿರಿಯ ಕಲಾವಿದೆಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಭಾವನೆ ಕಡಿಮೆ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಕೆಲ ಕಲಾವಿದರಿಗೆ ನೀಡಲಾದ ಚೆಕ್ಕನ್ನು ವಾಪಸ್‌ ಪಡೆದು ಇನ್ನಷ್ಟು ಹೆಚ್ಚಿನ ಮೊತ್ತ ನೀಡಲಾಗುವುದು ಎಂಬ ಮಾತು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಅಧಿಕಾರಿಯೊಬ್ಬರಿಂದ ಬಂದಿದೆ. ಆದರೆ, ಎಲ್ಲವನ್ನೂ ಕೇಳಿಯೇ ಪಡೆಯಬೇಕೇ. ಕಳೆದ ಬಾರಿಯೂ ಉತ್ಸವ ನಿಂತು ಹೋಗಿತ್ತು. ಈ ಉತ್ಸವದಲ್ಲಾದರೂ ಕಲೆಗಾಗಿ ತಮ್ಮನ್ನು ಸಮರ್ಪಿಸಿಕೊಂಡ ಕಲಾವಿದರಿಗೆ ಉತ್ತಮ ಸಂಭಾವನೆ ನೀಡಬೇಕಿತ್ತು ಎಂದು ಜಾನಪದ ಉಪಸಮಿತಿಯ ಹಿರಿಯ ಸದಸ್ಯರೊಬ್ಬರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT