ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಉತ್ಸವ ಯಶಸ್ವಿಗೆ ಅಧಿಕಾರಿಗಳಿಗೆ ಸೂಚನೆ

Last Updated 12 ಡಿಸೆಂಬರ್ 2013, 6:20 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ-–--ಹುಬ್ಬಳ್ಳಿ ಅವಳಿ ನಗರಗಳಲ್ಲಿ ಡಿಸೆಂಬರ್ 13ರಿಂದ 15ರವರೆಗೆ ಜರುಗ­ಲಿರುವ ಜಿಲ್ಲಾ ಉತ್ಸವದ ಯಶಸ್ವಿಗೆ ನೋಡಲ್ ಅಧಿಕಾರಿಗಳ ಕರ್ತವ್ಯ ಅತೀ ಮುಖ್ಯ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜವಾಬ್ದಾರಿ­ಯಿಂದ ಕಾರ್ಯ ನಿರ್ವಹಿಸಿ ಯಶಸ್ವಿಗೊಳಿಸ­ಬೇಕು ಎಂದು ಉತ್ಸವ ಸಮಿತಿಯ ಅಧ್ಯಕ್ಷ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ನಗರದಲ್ಲಿ ಜರುಗಿದ ಧಾರವಾಡ ಜಿಲ್ಲಾ ಉತ್ಸವದ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಅವಳಿ ನಗರದ 15 ವೇದಿಕೆಗಳಲ್ಲಿ ನಡೆಯಲಿ­ರುವ ಕಾರ್ಯಕ್ರಮಗಳ ಸಿದ್ಧತೆ ಹಾಗೂ ಯಶ­ಸ್ವಿಗೆ ನೋಡಲ್ ಅಧಿಕಾರಿಗಳು ಜವಾಬ್ದಾರಿ­ಯಿಂದ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು ಕಲಾವಿದರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಇಂತಹ ಸಂದರ್ಭದಲ್ಲಿ ಏನಾದರೂ ಸಮಸ್ಯೆಗಳು ಬಂದರೆ ನನ್ನ ಗಮನಕ್ಕೆ ತರಬೇಕು.

ಅವಳಿ ನಗರದ 15 ವೇದಿಕೆಗಳ ಪೈಕಿ 10 ವೇದಿಕೆಗಳಲ್ಲಿ ಸಂಪೂರ್ಣ ವ್ಯವಸ್ಥೆ ಇದ್ದು, ಇನ್ನುಳಿದ 5 ವೇದಿಕೆಗಳಲ್ಲಿ ವಿದ್ಯುತ್, ಧ್ವನಿವರ್ಧಕ ಹಾಗೂ ಜನ­ರೇಟರ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳ­ಲಾಗಿದೆ. ಈ ವೇದಿಕೆಗಳಲ್ಲಿ ಕಲಾವಿದರಿಗೆ ಸಾರ್ವಜನಿಕರಿಗೆ ನೀರಿನ ಹಾಗೂ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗು­ವುದು’ ಎಂದು ತಿಳಿಸಿದರು. ಕಲಾವಿದರಿಗೆ ನೀಡಲಾಗುವ ಗೌರವಧನವನ್ನು ಚೆಕ್ ಮೂಲಕ ನೀಡಲು ಸೂಚಿಸಲಾಗಿದೆ.

ನೋಡಲ್ ಅಧಿಕಾರಿಗಳು ಕಾರ್ಯಕ್ರಮ ಮುಗಿದ ತಕ್ಷಣ ಪಾವತಿ ಮಾಡುವಂತೆ ತಿಳಿಸಿದರು. ಕಲಾವಿದರ ತಂಡಗಳ ಮೇಲ್ವಿಚಾರಣೆಗಾಗಿ ನೇಮಕ ಮಾಡಿದಂತಹ ಲೈಸನ್ ಅಧಿಕಾರಿಗಳು ಕಲಾವಿದರನ್ನು ಸೌಜನ್ಯದಿಂದ ಬರಮಾಡಿ­ಕೊಂಡು ಅವರ ವ್ಯವಸ್ಥೆಯನ್ನು ನೋಡಿಕೊಳ್ಳು­ವುದರ ಜೊತೆಗೆ ಸರಿಯಾದ ಸಮಯಕ್ಕೆ ವೇದಿಕೆಗೆ ಕರೆದುಕೊಂಡು ಬಂದು ಕಾರ್ಯಕ್ರಮ ವ್ಯವಸ್ಥೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ.

ಈ 15 ವೇದಿಕೆ ಕಾರ್ಯಕ್ರಮಗಳಿಗಾಗಿ ಒಟ್ಟು 16 ಸಾಂಸ್ಕೃ­ತಿಕ ಸಮಿತಿ ಸೇರಿದಂತೆ ಒಟ್ಟು 15 ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಗಳ ಅಧ್ಯಕ್ಷರು ಕಾರ್ಯಕ್ರಮಗಳ ರೂಪರೇಷೆಗಳನ್ನು ಸಹ ಸಿದ್ಧಪಡಿಸಿದ್ದಾರೆ ಎಂದು ಹೇಳಿದರು. ಅವಳಿ ನಗರದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವದ ಯಶಸ್ವಿಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ.

ನೀವು ನಿಮ್ಮ ಕರ್ತವ್ಯವನ್ನು ಚೆನ್ನಾಗಿ ನಿಯಮಬದ್ಧವಾಗಿ ಮತ್ತು ಸಂಯಮದಿಂದ ನಿರ್ವಹಿಸಿ ಉತ್ಸವವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು. ಈ ವ್ಯವಸ್ಥೆ ಸಂದರ್ಭದಲ್ಲಿ ಅಡಚಣೆಗಳು ಬಂದರೆ ಆಯಾ ಸಮಿತಿಯ ಅಧ್ಯಕ್ಷರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು, ಉಪವಿಭಾಗಾಧಿ­ಕಾರಿ­ಗಳನ್ನು ಸಂಪರ್ಕಿಸಬೇಕು ಎಂದರು.

ಕೆಯುಐಡಿಎಫ್‌ಸಿ ಉಪಯೋಜನಾ ನಿರ್ದೇಶಕ ಮಹಾಂತೇಶ ಬೀಳಗಿ, ಉಪವಿಭಾ­ಗಾಧಿ­ಕಾರಿ ಮಹೇಶ ಕರ್ಜಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ.­ಹಿರೇಗೌಡರ, ರಂಗಾಯಣ ಆಡಳಿತಾಧಿಕಾರಿ ಕೆ.ಎಚ್. ಚೆನ್ನೂರ, ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಚಲವಾದಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿದ್ಧಲಿಂಗಯ್ಯ ಹಿರೇಮಠ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT