ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಆರೋಪಿ ಸಂತೋಷ್‍ ಬಂಧನಕ್ಕೆ ಆಗ್ರಹ: 18ರಂದು ಬಂದ್‍
Last Updated 12 ಸೆಪ್ಟೆಂಬರ್ 2013, 5:36 IST
ಅಕ್ಷರ ಗಾತ್ರ

ಕೋಲಾರ: ಗೃಹಿಣಿ ವೀಣಾ ಮತ್ತು ಅವರ ಮಗಳು ದೀಪ್ತಿಯ ಸಾವಿಗೆ ಕಾರಣನಾದ ಪತಿ ಸಂತೋಷ್ ಕುಮಾರ್‌ನನ್ನು ಬಂಧಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೋಲಾರದ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.

ಗೃಹಿಣಿ ಸಾವಿನ ಹಿನ್ನೆಲೆಯಲ್ಲಿ ಜಾಮೀನು ಪಡೆದಿರುವ ಇತರೆ ಆರೋಪಿಗಳ ಆಸ್ತಿಯನ್ನು ಮುಟು್ಟ­ಗೋಲು ಹಾಕಿಕೊಳ್ಳಬೇಕು. ದೂರು­ದಾ­ರರ ಕಾರನ್ನು ದುರ್ಬಳಕೆ ಮಾಡಿ­ಕೊಂಡಿ­ರುವ ನಗರ ಸರ್ಕಲ್‍ ಇನ್ಸ್ ಪೆಕ್ಟರ್‍ ಕೆ.ಎನ್‍.ರಮೇಶ್‍ ಅವರನ್ನು ಸೇವೆ­ಯಿಂದ ಅಮಾನತ್ತು ಮಾಡಬೇಕು. ದೂರು ದಾಖಲಾಗಿ ಎರಡು ತಿಂಗಳಾ­ದರೂ ಕ್ರಮ ವಹಿಸಿದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂಘಟನೆಗಳ ನೂರಾರು ಕಾರ್ಯ­ಕರ್ತರು ಪ್ರಮುಖ ರಸೆ್ತಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿದರು. ಧರಣಿ ಸ್ಥಳಕ್ಕೆ ಬಂದವರೇ ಏಕಾಏಕಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಸಲುವಾಗಿ ಓಡಲಾ­ರಂಭಿಸಿದರು. ಆ ಸಂದರ್ಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಹೆಚ್ಚಿನ ಕಾರ್ಯಕರ್ತರನ್ನು ತಡೆಯಲು ಹರ­ಸಾಹಸ ಮಾಡಿದರು. ಪೊಲೀಸರನ್ನು ದಾಟಿ ಹೋದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯೊಳಕ್ಕೆ ನುಗ್ಗಿ ಧರಣಿ ಕುಳಿತರು.

ಪ್ರಕರಣದಲ್ಲಿ ಜಾಮೀನು ಪಡೆದಿ­ರು­ವವರು ನಾಪತ್ತೆಯಾಗಿರುವ ಪ್ರಮುಖ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದರಿಂದ ಅವರ ಜಾಮೀನನ್ನು ರದ್ದುಗೊಳಿಸಿ ಪೊಲೀಸ್‍ ವಶಕ್ಕೆ ನೀಡುವಂತೆ ನಾ್ಯಯಾಲಯಕ್ಕೆ ಜಿಲ್ಲಾಧಿಕಾರಿಗಳು ಪತ್ರ ಬರೆಯಬೇಕು ಎಂದು ಆಗ್ರಹಿಸಿದರು.

ಆರೋಪಿಗಳು ಮತ್ತು ಅವರ ಆಪ್ತರು, ಸಂಬಂಧಿಕರ ಆಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿ­ಕೊಳ್ಳಬೇಕು ಎಂದು ಒತ್ತಾಯಿಸಿದರು.

ಕ್ರಮಕ್ಕೆ ಆಗ್ರಹ: ಜು.10ರಂದು ನಗರ ಠಾಣೆಯಲ್ಲಿ ದೂರು ದಾಖಲಾದರೂ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿಲ್ಲ. ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೂ ಕೂಡಲೇ ಬಂಧಿ­ಸದೆ, ಅವರಿಗೆ ಜಾಮೀನು ಪಡೆಯುವ ಅವಕಾಶ ಸಿಗುವಂತೆ ಮಾಡಿ ಕರ್ತವ್ಯ­ಲೋಪ ಎಸಗಿದ್ದಾರೆ.  ಪ್ರಮುಖ ಆರೋಪಿ­ಯನ್ನು ಪತ್ತೆ ಮಾಡುವ ಭರ­ವಸೆ ನೀಡಿ ದೂರುದಾರರ ಕಾರಿನಲ್ಲೇ ನಗರ ಸರ್ಕಲ್‍ ಇನ್ಸ್ ಪೆಕ್ಟರ್‍ ಕೆ.ಎನ್‍.ರಮೇಶ್‍ ಸಂಚರಿಸಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು. ಕರ್ತವ್ಯ­ಲೋಪದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

18ರಂದು ಬಂದ್‍: ಒಂದು ವಾರ­ದೊಳಗೆ ಪ್ರಮುಖ ಆರೋಪಿಯನ್ನು ಬಂಧಿಸದಿದ್ದರೆ ಸೆ.18ರಂದು ಕೋಲಾರ ಬಂದ್‍ ನಡೆಸಲಾಗುವುದು. ಆ ಸಂದರ್ಭ­ದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ­ಯಾಗ­ಬೇಕಾ­ಗು­ತ್ತದೆ ಎಂದು ಎಚ್ಚರಿಕೆ ನೀಡಿದರು. ಮನವಿ ಪಡೆದ ಜಿಲ್ಲಾಧಿಕಾರಿ ಡಿ.ಕೆ.ರವಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಸಿಐಟಿಯು ಮುಖಂಡ ಗಾಂಧಿ­ನಗರ ನಾರಾಯಣಸ್ವಾಮಿ, ಸಿಪಿಐಎಂನ ಜಿ.ಸಿ.ಬಯ್ಯಾರೆಡ್ಡಿ, ಜಿ.­ಅರ್ಜು­ನನ್, ವೆಂಕಟರಮಣ, ಸಮತಾ ಸೈನಿಕ ದಳದ ಪಂಡಿತ್‍ ವೆಂಕಟ­ಮುನಿಯಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಜಯ­ಕುಮಾರ್, ಶ್ರೀನಿವಾಸನ್‍, ಮಹಿಳಾ ಸಂಘಟನೆಯ ಈಶ್ವರಮ್ಮ, ನಾಗರತ್ನಮ್ಮ, ಮುನಿರಾಜಮ್ಮ, ಗಂಗಮ್ಮ, ಜಯ­ಲಕ್ಷ್ಮಮ್ಮ, ಪ್ರಾಂತ ರೈತ ಸಂಘದ ನಾರಾಯಣರೆಡ್ಡಿ, ಪಿ.­ಆರ್‍.­ಸೂರ್ಯ­ನಾರಾ­ಯಣ, ಡಿವೈಎಫ್‍ಐನ ವಿಜಯ­ಕೃಷ್ಣ, ಮಂಜುನಾಥ, ಬಿ.ವಿ.ಸಂಪಂಗಿ. ಎಸ್‍ಎಫ್‍ಐನ ಅಂಬರೀಶ್‍, ಅಮರೇಶ್‍, ವಾಸುದೇವ ರೆಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT