ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಬರಪೀಡಿತ ಘೋಷಣೆ: ಸಿ.ಎಂ

ಕೃಷಿ, ಆಹಾರ ಇಲಾಖೆ ಅಧಿಕಾರಿಗಳಿಗೆ ಅಮಾನತು ಎಚ್ಚರಿಕೆ
Last Updated 11 ಡಿಸೆಂಬರ್ 2013, 5:22 IST
ಅಕ್ಷರ ಗಾತ್ರ

ವಿಜಾಪುರ: ಜಂಟಿ ಕೃಷಿ ನಿರ್ದೇಶಕ ಲಿಂಗಮೂರ್ತಿ, ಆಹಾರ ಮತ್ತು ನಾಗ ರಿಕ ಪೂರೈಕೆ ಇಲಾಖೆಯ ಉಪ ನಿರ್ದೇ ಶಕ ಸೋಮಲಿಂಗ ಗೆಣ್ಣೂರ, ವಿಜಾಪುರ ಒಳಚರಂಡಿ ಯೋಜನೆಯ ಉಸ್ತುವಾರಿ ಅಧಿಕಾರಿ ಪವಾರ ಕಾರ್ಯನಿರ್ವಹಣೆ ಕುರಿತು ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಎಚ್ಚರಿಕೆ ನೀಡಿದರು.

ಮಂಗಳವಾರ ಇಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿ ಶೀಲನೆಯ ವೇಳೆ ಅವರು ಈ ಎಚ್ಚರಿಕೆ ನೀಡಿದರು.
‘ವಿಜಾಪುರ ನಗರದಲ್ಲಿ ₨200 ಕೋಟಿ ಹಣ ಬಂದರೂ ಒಳಚರಂಡಿ ಕೆಲಸ ಆಗಿಲ್ಲ. ಇಡೀ ನಗರದ ರಸ್ತೆಗಳನ್ನು ಅಗೆದು ಹಾಳು ಮಾಡಿದ್ದಾರೆ’ ಎಂದು ಬಸವನ ಬಾಗೇವಾಡಿ ಶಾಸಕ ಶಿವಾ ನಂದ ಪಾಟೀಲ ದೂರಿದರು.

‘ಗುತ್ತಿಗೆದಾರರ ಬಳಿ ಯಂತ್ರೋ ಪಕರಣ ಹಾಗೂ ಮಾನವ ಸಂಪ ನ್ಮೂಲದ ಕೊರತೆ ಇದೆ. ಇದರಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಪ್ರಭಾರ ಕಾರ್ಯನಿರ್ವಾಹಕ ಎಂಜಿನಿ ಯರ್‌ ಪವಾರ ನೀಡಿದ ಮಾಹಿತಿಯಿಂದ ಕೆರಳಿದ ಮುಖ್ಯಮಂತ್ರಿಗಳು, ‘ಗುತ್ತಿಗೆದಾ ರರಿಂದ ಕೆಲಸ ಮಾಡಿಸಿಕೊಳ್ಳುವುದು ನಿನ್ನ ಕೆಲಸ.

ವಿಳಂಬ ಆಗಿದೆ ಎಂದು ಹೇಳಲು ನಿನ್ನನ್ನು ನೇಮಿಸಿಲ್ಲ. ವಿಳಂಬ ಆಗದಂತೆ ನೋಡಿಕೊಳ್ಳಬೇಕು. ಇಲ್ಲದಿ ದ್ದರೆ ನಿನ್ನ ಮೇಲೆಯೇ ಶಿಸ್ತು ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಸಿದರು. ಗುತ್ತಿಗೆ ರದ್ದು ಪಡಿಸಿ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆಯೂ ನಿರ್ದೇಶನ ನೀಡಿದರು.

ಬರ ಘೋಷಣೆ: ‘ಜಿಲ್ಲೆಯಲ್ಲಿ ಹಿಂಗಾರು ಮಳೆಯ ಅಭಾವದಿಂದ ಬೆಳೆ ನಷ್ಟ ಹೊಂದಿ ರೈತರು ಸಂಕಷ್ಟದಲ್ಲಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತೀವ್ರ ವಾಗಿದೆ. ಸರ್ಕಾರ ವಿಜಾಪುರ ತಾಲ್ಲೂ ಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಉಳಿದ ತಾಲ್ಲೂಕುಗಳನ್ನೂ ಬರ ಪೀಡಿತವೆಂದು ಘೋಷಿಸಬೇಕು’ ಎಂದು ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ,  ಮುದ್ದೇಬಿ ಹಾಳ ಶಾಸಕ ಸಿ.ಎಸ್. ನಾಡಗೌಡ ಅವರ  ಮನವಿ ಪುರಸ್ಕರಿಸಿದ ಮುಖ್ಯ ಮಂತ್ರಿಗಳು, ವಿವರವಾದ ವರದಿ ಸಲ್ಲಿ ಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ನಾಗಠಾಣ ಶಾಸಕ ರಾಜು ಆಲ ಗೂರ, ‘ವಿಜಾಪುರ ವಿಮಾನ ನಿಲ್ದಾಣ ನಿರ್ಮಿಸಬೇಕು. ಲೋಕಸಭೆ ಚುನಾವಣೆ ಒಳಗಾಗಿಯೇ ಹೊಸ ತಾಲ್ಲೂಕುಗಳನ್ನು ರಚಿಸಬೇಕು’ ಎಂದು ಕೋರಿದರು.

ಆಸರೆಗೆ ಹಣ: ಜಿಲ್ಲೆಯ ಆಸರೆ ಯೋಜ ನೆಗೆ ಬಾಕಿ ಉಳಿದಿರುವ ₨18 ಕೋಟಿ  ಹಾಗೂ 39 ಆಸರೆ ಬಡಾವಣೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಅಗತ್ಯ ವಿರುವ ₨16 ಕೋಟಿಗಳನ್ನು ಮಂಜೂರು ಮಾಡುವುದಾಗಿ ಸಿಎಂ ಹೇಳಿದರು. ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಮಗಳಿಗೆ ಶಾಶ್ವತ ಪರಿಹಾರಕ್ಕಾಗಿ ರೂಪಿಸಿರುವ ₨24 ಕೋಟಿಗಳ ಯೋಜನೆ ಹಾಗೂ ಕಾರ್ಯಪಡೆ ಅಡಿ ₨18 ಕೋಟಿ  ಬಾಕಿ ಹಣ ಬಿಡುಗಡೆ ಗೊಳಿಸಲು, ಕಾಲುವೆ ಮೂಲದಿಂದ 146 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ₨ 800 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ನೀಡಬೇಕು ಎಂಬ  ಮನವಿಗೆ ಸ್ಪಂದಿಸಿದ ಮುಖ್ಯ ಮಂತ್ರಿಗಳು ವಿವರವಾದ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸಲು ಸೂಚಿಸಿ, ಎಲ್ಲ ಯೋಜನೆಗಳಿಗೆ ಹಣ ಬಿಡುಗಡೆ ಗೊಳಿಸುವುದಾಗಿ ಹೇಳಿದರು. ಸಿಆರ್ ಎಫ್ ಅಡಿ ಹೆಚ್ಚುವರಿಯಾಗಿ ₨5 ಕೋಟಿ ಹಣ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

ನಿಯಮಿತವಾಗಿ ಕೆಡಿಪಿ ಸಭೆ ನಡೆಸಬೇಕು. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಸಿಇಒಗೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ಮಾಡದ, ಸರಿಯಾಗಿ ಮಾಹಿತಿ ಸಂಗ್ರಹಿ ಸದ ಅಧಿಕಾರಿಗಳನ್ನು ಅಮಾ ನತುಗೊಳಿಸಲಾಗುವುದು ಎಂದು ಎಚ್ಚರಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ಬಗೆಗೆ ಜಿಲ್ಲಾ ಮಂತ್ರಿಗಳು ದೂರು ಸಲ್ಲಿಸಿದರೆ ತಕ್ಷಣ ಅಂತಹ ಅಧಿಕಾರಿಗಳ ಮೇಲೆ ಕ್ರಮ ವಹಿಸಲಾಗುವುದೆಂದು ಎಚ್ಚರಿಸಿದರು.

ಕೃಷಿ ಜಂಟಿ ನಿರ್ದೇಶಕ ಡಾ.ಲಿಂಗ ಮೂರ್ತಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಮುಂದಿನ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದಿ ದ್ದರೆ ಅಮಾನತುಗೊಳಿಸ ಲಾಗುವು ದೆಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಅನ್ನಭಾಗ್ಯ, ಪಿಂಚಣಿ ಅದಾಲತ್ ಯೋಜನೆಗಳ ಮಾಹಿತಿ ಪಡೆದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಚಿವ ಎಸ್.ಆರ್. ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯ ದೇಸಾಯಿ,  ಶಾಸಕರಾದ ಮಕ್ಬೂಲ್‌ ಬಾಗವಾನ, ಸಿ.ಎಸ್. ನಾಡಗೌಡ, ಎ.ಎಸ್. ಪಾಟೀಲ ನಡಹಳ್ಳಿ, ಶಿವಾ ನಂದ ಪಾಟೀಲ, ರಮೇಶ ಭೂಸನೂರ, ರಾಜು ಆಲಗೂರ, ಯಶವಂತ್ರಾಯ ಗೌಡ ಪಾಟೀಲ, ಅರುಣ ಶಹಾಪುರ, ಜಿ.ಎಸ್.ನ್ಯಾಮಗೌಡ, ಮಹಾಂತೇಶ ಕೌಜಲಗಿ, ಜಿ.ಪಂ. ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT