ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಮೇಲೆ ಶಿಕ್ಷಣ ಸಚಿವರ ಕೆಂಗಣ್ಣು!

ವರ್ಗವಾದ ಶಿಕ್ಷಕರನ್ನು ಬಿಡುಗಡೆ ಮಾಡದಿದ್ದರೆ ಶಿಸ್ತು ಕ್ರಮ: ಎಚ್ಚರಿಕೆ
Last Updated 17 ಸೆಪ್ಟೆಂಬರ್ 2013, 7:50 IST
ಅಕ್ಷರ ಗಾತ್ರ

ಕುಷ್ಟಗಿ: ತೆರವಾದ ಸ್ಥಾನಗಳು ಭರ್ತಿ ಆಗುವವರೆಗೆ ಬೇರೆ ಜಿಲ್ಲೆಗಳಗೆ ವರ್ಗವಾಗುವ ಶಿಕ್ಷಕರನ್ನು ಬಿಡುಗಡೆ ಮಾಡಬೇಡಿ ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಾಕೀತು ಮಾಡಿದ್ದಾರೆ.

ಆದರೆ, ಇತ್ತ ಸರ್ಕಾರದ ಆದೇಶದಂತೆ ಕೊಪ್ಪಳ ಜಿಲ್ಲೆಯಿಂದ ವರ್ಗವಾಗಿರುವ ಶಿಕ್ಷಕರನ್ನು ಬಿಡುಗಡೆ ಮಾಡದ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆದೇಶ ಹೊರಡಿಸಿದಾ್ದರೆ. ಹೀಗಾಗಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದಾ್ದರೆ.

ಶಿಕ್ಷಣ ಸಚಿವರ ಈ ಆದೇಶ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗಿರುವುದು ಅಚ್ಚರಿಗೆ ಕಾರಣವಾಗಿದ್ದು, ತೆರವಾದ ಸ್ಥಾನ ಭರ್ತಿ ಆಗುವವರೆಗೂ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆಗೊಳಿಸಬಾರದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಮೊದಲಿನ ಆದೇಶದಂತೆ ನಡೆದು ಕೊಳ್ಳಬೇಕು ಎಂದು ಸಾರ್ವಜನಿಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಒತ್ತಡ ಹೇರುತ್ತಿರುವುದರಿಂದ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಅಂತಿಮವಾಗಿ ಶಿಕ್ಷಣ ಸಚಿವರು     ಆ. 20 ರಂದು ನೀಡಿದ ಆದೇಶವನ್ನು ಪಾಲಿಸಿರುವ ಅಧಿಕಾರಿಗಳು ಕಳೆದ ಎರಡು ವಾರದ ಅವಧಿಯಲ್ಲಿ ತಾಲ್ಲೂಕಿನಿಂದ 12 ಜನ ಶಿಕ್ಷಕರನ್ನು ಅಂತರ ಜಿಲ್ಲೆಗಳಿಗೆ ಬಿಡುಗಡೆ ಮಾಡಿದ್ದಾರೆ. ಮೊದಲೇ ಶಿಕ್ಷಕರ ಕೊರತೆ ಎದುರಿಸುತ್ತಿರುವ ತಾಲ್ಲೂಕಿ ನಲ್ಲಿ ಮತ್ತಷ್ಟು ಸ್ಥಾನಗಳು ತೆರವಾಗಿ ರುವುದು ಸಮಸ್ಯೆಗೆ ಕಾರಣವಾಗಿದೆ.

ತಾಲ್ಲೂಕಿನ ಕನಕೊಪ್ಪ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರನ್ನು ಬಿಡುಗಡೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅಲ್ಲಿಯ ಎಸ್‌ಡಿಎಂಸಿ ಅಧ್ಯಕ್ಷ ಯಮನೂರಪ್ಪ ಕಟ್ಟಿಮನಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಬಿಇಓ ಬಿ.ಎಚ್‌.ಗೋನಾಳ, ‘ಮೊದಲು ನಾವೂ ಬಿಡುಗಡೆ ಮಾಡಿ ರಲಿಲ್ಲ. ಆದರೆ, ನಮ್ಮ ಮೇಲೆಯೇ ಕ್ರಮ ಜರುಗಿಸಲಾಗುವುದು ಎಂದು ಸ್ವತಃ ಶಿಕ್ಷಣ ಸಚಿವರು ಲಿಖಿತ ಆದೇಶ ನೀಡಿರುವುದರಿಂದ ಅಸಹಾಯಕ ರಾಗಿದ್ದೇವೆ.

ಅಲ್ಲದೇ, ತೆರವಾದ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆಯೂ ಶಿಕ್ಷಣ ಸಚಿವರು ಸೂಚಿಸಿದ್ದಾರೆ’ ಎಂದರು.
ಕನಕೊಪ್ಪ ಶಾಲೆಯ ಮುಖ್ಯ ಶಿಕ್ಷಕಿಯಾಗಿದ್ದ ದುರಗವ್ವ ಚನ್ನದಾಸರ ಅವರು ಶಿಕ್ಷಕರ ಅಂತರ ಜಿಲ್ಲಾ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಬಾಗಲಕೋಟೆ ಜಿಲ್ಲೆ ಬಾದರದಿನ್ನಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಆದರೆ, ವರ್ಗಾವಣೆಗೊಂಡರೂ ಸಹ ಪಿ.ಟಿ.ಆರ್‌ ಪ್ರಮಾಣ 30ಕ್ಕಿಂತ ಹೆಚ್ಚು ಇರುವ ವಲಯಗಳಲ್ಲಿ ವರ್ಗಾವಣೆ ಹೊಂದಿರುವ ಶಿಕ್ಷಕರ ಜಾಗಕ್ಕೆ ನೇರ ನೇಮಕಾತಿ ಅಥವಾ ವರ್ಗಾವಣೆ ಮೂಲಕ ಹುದ್ದೆ ಭರ್ತಿಯಾದಲ್ಲಿ ಮಾತ್ರ ಅಂತಹ ಶಿಕ್ಷಕರನ್ನು ಬಿಡುಗಡೆ ಮಾಡಬೇಕು.

ಈ ಸೂಚನೆ ಉಲ್ಲಂಘಿಸುವ ಬಿಇಓ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗು ವುದು ಎಂದು ಡಿಡಿಪಿಐ ಜಿ.ಎಚ್‌. ವೀರಣ್ಣ ಅವರು ನೀಡಿರುವ ಆದೇಶ ದಲ್ಲಿ ಸ್ಪಷ್ಟಪಡಿಸಿದ್ದರೂ ಬಿಇಒ ಅದನ್ನು ಕಡೆಗಣಿಸಿದ್ದಾರೆ ಎಂದು ಯಮನೂ ರಪ್ಪ ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT