ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲೇ ಜಾನಪದ ವಿವಿ ಸ್ಥಾಪಿಸಿ

Last Updated 17 ಫೆಬ್ರುವರಿ 2011, 9:55 IST
ಅಕ್ಷರ ಗಾತ್ರ

ಸಿಂದಗಿ: ಪಟ್ಟಣದ ಸಾರಂಗಮಠದ ಮೈದಾನದಲ್ಲಿನ ಹೈದ್ರಾಬಾದ ಕರ್ನಾಟಕ ಗಾಂಧಿ ರಮಾನಂದ ತೀರ್ಥರ ಮಹಾಮಂಟಪದ ಕಲಾ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ಮಹಾವೇದಿಕೆಯಲ್ಲಿ ಬುಧವಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೂರು ನಿರ್ಣಯಗಳನ್ನು ಮಂಡಿಸಲಾಯಿತು.

ಗದಗ-ಡಂಬಳ ತೋಂಟದಾರ್ಯಮಠದ ಡಾ.ಸಿದ್ಧಲಿಂಗ ಸ್ವಾಮಿಗಳವರ ಸಾನ್ನಿಧ್ಯದಲ್ಲಿ, ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಸಮ್ಮುಖದಲ್ಲಿ ಈ ನಿರ್ಣಯಗಳನ್ನು ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಎಸ್. ಖಾದ್ರಿ ಇನಾಮದಾರ ಹಾಗೂ ಅಶೋಕ ಮನಗೂಳಿ ಮಂಡಿಸಿದರು.

ಮೊದಲನೇ ನಿರ್ಣಯ: ವಿಜಾಪುರ ಜಿಲ್ಲೆಯು ಜಾನಪದ ತವರೂರು. ಆದ್ದರಿಂದ ನಿಯೋಜಿತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ವಿಜಾಪುರ ಜಿಲ್ಲೆಯಲ್ಲಿಯೇ ಸ್ಥಾಪಿಸಬೇಕು ಎಂಬ ನಿರ್ಣಯವನ್ನು ಡಾ.ಎಂ.ಎಂ. ಪಡಶೆಟ್ಟಿ ಸೂಚಿಸಿದರು. ಈರಣ್ಣ ಕಲಬುರ್ಗಿ ತಾಳಿಕೋಟೆ ಅನುಮೋದಿಸಿದರು.

ಎರಡನೇ ನಿರ್ಣಯ:
ಕೃಷ್ಣಾಜಲ ನ್ಯಾಯಾಧೀಕರಣದ ತೀರ್ಪಿನಂತೆ ಕರ್ನಾಟಕದ ಪಾಲಿನ ನೀರನ್ನು ಸಂಪೂರ್ಣ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಸದ್ಯ ಮಂಡಿಸಲಿರುವ ಮುಂಗಡ ಬಜೆಟ್‌ನಲ್ಲಿ ಮೂರು ವರ್ಷಗಳ ಕಾಲಮಿತಿನಿಗದಿ ಪಡಿಸಬೇಕು ಎಂಬ ನಿರ್ಣಯವನ್ನು ಮಕ್ಕಳ ಸಾಹಿತಿ ಹ.ಮ. ಪೂಜಾರ ಸೂಚನೆ ನೀಡಿದರು. ರೈತ ಮುಖಂಡ ಅಶೋಕ ಅಲ್ಲಾಪೂರ ಅನುಮೋದಿಸಿದರು.

ಮೂರನೇ ನಿರ್ಣಯ:
ಕಲಾ ಸಾರ್ವಭೌಮ ಹಂದಿಗನೂರ ಸಿದ್ರಾಮಪ್ಪ ಅವರ ಹೆಸರಿನಲ್ಲಿ ಸುಸಜ್ಜಿತ, ಭವ್ಯವಾದ ರಂಗಮಂದಿರನ್ನು ಸಿಂದಗಿಯಲ್ಲಿ ನಿರ್ಮಿಸಬೇಕು ಎಂಬ ನಿರ್ಣಯಕ್ಕೆ ಪ್ರಾಧ್ಯಾಪಕ ಎಂ.ವಿ. ಗಣಾಚಾರಿ ಸೂಚಿಸಿದರು. ಸಿದ್ದರಾಮ ಉಪ್ಪಿನ ಅನುಮೋದಿಸಿದರು.ಈ ನಿರ್ಣಯಗಳಿಗೆ ಸಮ್ಮೇಳನದಲ್ಲಿ ಸಮಾವೇಶಗೊಂಡ ಸಹಸ್ರಾರು ಸಂಖ್ಯೆಯ ಕನ್ನಡಿಗರು ಚಪ್ಪಾಳೆ ಮೂಲಕ ಒಪ್ಪಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT