ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಭಾರಿ ಮಳೆ: ಮನೆ ಕುಸಿತ

Last Updated 21 ಸೆಪ್ಟೆಂಬರ್ 2013, 7:59 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಚುರುಕುಗೊಂಡಿರುವ ಮಳೆ ಶುಕ್ರವಾರ ಜೋರಾಗಿ ಸುರಿಯಿತು. ಮಳೆಯಿಂದಾಗಿ ಶಿರಸಿ ತಾಲ್ಲೂಕಿನ ಕಲ್ಕುಣಿಯಲ್ಲಿ ಹಾಗೂ ಭಟ್ಕಳ  ತಾಲೂ್ಲಕಿನ ಶಿರಾಲಿಯಲಿ್ಲ ಒಂದೊಂದು ಮನೆ ಹಾನಿಯಾಗಿದೆ.
ಕುಸಿದ ಗೋಡೆ

ಶಿರಸಿ:ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಕಲ್ಕುಣಿಯಲ್ಲಿ ಮನೆಯೊಂದರ ಕೊಠಡಿ ಕುಸಿದು ಸುಮಾರು ₨ 60ಸಾವಿರ ಹಾನಿ ಸಂಭವಿಸಿದೆ. ಯಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಕುಣಿ ಮಂಜುನಾಥ ರಾಮಚಂದ್ರ ಹೆಗಡೆ ಎಂಬುವವರಿಗೆ ಸೇರಿದ ಮನೆಯ ಕೊಠಡಿ ಕುಸಿದು ಬಿದ್ದಿದೆ.

ತಾಲ್ಲೂಕಿನಲ್ಲಿ ಶುಕ್ರವಾರ ಇಡಿ ದಿನ ನಿರಂತರ ಮಳೆ ಸುರಿದಿದ್ದು, ಮತ್ತೊಮ್ಮೆ ಮಳೆಗಾಲದ ವಾತಾವರಣ ಸೃಷ್ಟಿಯಾಗಿದೆ. ಬೆಳಿಗ್ಗೆ ದಟ್ಟ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಮಳೆ ಮತ್ತಷ್ಟು ಜೋರಾಗಿ ಸುರಿಯತೊಡಗಿತು. ಮಳೆಯಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದು, ತುಸು ನಿಯಂತ್ರಣಕ್ಕೆ ಬಂದಿರುವ ಕೊಳೆರೋಗ ಅಡಿಕೆಗೆ ಮತ್ತೆ ವ್ಯಾಪಿಸಬಹುದೆಂಬ ಭೀತಿಯಲ್ಲಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಐದು ದಿನಗಳಲ್ಲಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದೇ  21ರಂದು 45ಮಿ.ಮೀ, 22ರಿಂದ 25ರ ಅವಧಿಯಲ್ಲಿ 10–15ಮಿಮೀ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಇದೇ 13ರಿಂದ 20ರ ಅವಧಿಯಲ್ಲಿ 97 ಮಿ.ಮೀ. ಮಳೆಯಾಗಿದ್ದು, ಗರಿಷ್ಟ ಉಷ್ಣಾಂಶ 27ರಿಂದ 32 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ಉಷ್ಣಾಂಶ 20ರಿಂದ 22 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು ಕೃಷಿ ಹವಾಮಾನ ಮುನ್ಸೂಚನಾ ಘಟಕ ಕೃಷಿ ಸಂಶೋಧನಾ ಕೇಂದ್ರ (ಭತ್ತ) ತಿಳಿಸಿದೆ.

ಮನೆಗೆ ಹಾನಿ
ಭಟ್ಕಳ: ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಪುನಃ ಚುರುಕು ಪಡೆದುಕೊಂಡಿದು್ದ, ಗುರುವಾರ ರಾತಿ್ರಯಿಂದ ಒಂದೇ ಸಮನೆ ಧಾರಾಕಾರ ಮಳೆ ಸುರಿಯುತ್ತಿದೆ.

ಮಳೆಗೆ ತಾಲೂ್ಲಕಿನ ಶಿರಾಲಿಯಲಿ್ಲ ವಿಮಲಾ ಮಾದೇವ ನಾಯ್ಕ ಎಂಬುವರ ಮನೆ ಕುಸಿದು ಬಿದು್ದ ಹಾನಿಯಾಗಿದೆ. ಘಟನೆಯ ಸ್ಥಳಕೆ್ಕ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಹಾನಿಯ ಅಂದಾಜು ಮಾಡಿದಾ್ದರೆ. ಮಳೆಯ ಕೆಂಪು ನೀರು ನಿಧಾನವಾಗಿ ಪುನಃ ಕೆರೆ, ಬಾವಿ, ಹಳ್ಳಕೊಳ್ಳ, ನದಿಗಳಲಿ್ಲ ತುಂಬುತಿ್ತದೆ. ಒಮ್ಮೆಲೆ ಪುನಃ ಆರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲೆ್ಲಡೆ ತಂಪಿನ, ಚಳಿಯ ವಾತಾವರಣ ಉಂಟಾಗಿದೆ. ತಾಲೂ್ಲಕಿನಲಿ್ಲ ಈವರೆಗೆ ಒಟೂ್ಟ 4219.4 ಮಿ.ಮೀ ಮಳೆಯಾಗಿದೆ.

ಉರುಳಿದ ಮರ
ಹೊನ್ನಾವರ: ತಾಲ್ಲೂಕಿನಲ್ಲಿ ಮತ್ತೆ ಮಳೆಯ ಪ್ರಮಾಣ ಹೆಚ್ಚಿದ್ದು ಮಳೆ–ಗಾಳಿಯಿಂದ ತೆಂಗಿನಮರ ಉರುಳಿದ ಪರಿಣಾಮವಾಗಿ ಕಾಸರಕೋಡ ರಾಮನಗರದ ಸಾವೇರ ಅಂತೋನ್ ಫರ್ನಾಂಡಿಸ್ ಎಂಬವರ ಮನೆ ಭಾಗಶಃ ಹಾನಿಗೊಳಗಾಗಿದೆ. ಘಟನೆಯಲ್ಲಿ 20 ಸಾವಿರ ರೂಪಾಯಿ ನಷ್ಟ ಉಂಟಾಗಿದೆಯೆಂದು ಕಂದಾಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT