ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಮಳೆ ಜೋರು

Last Updated 19 ಜುಲೈ 2013, 7:10 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಕರವಾಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುರುವಾರ ಮಳೆ ಜೋರಾಗಿತ್ತು ಹಾಗೂ  ಅರೆಬಯಲುಸೀಮೆಯ ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ.

ಕರಾವಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ದಿನವಿಡಿ ಬಿಟ್ಟು ಬಿಟ್ಟು ಮಳೆ ಸುರಿದಿದೆ.  ಹಳಿಯಾಳ, ದಾಂಡೇಲಿ, ಮುಂಡಗೋಡದಲ್ಲಿ ತುಂತುರು ಮಳೆಯಾಗಿದೆ. ಮಲೆನಾಡು ಪ್ರದೇಶಗಳಾದ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರದಲ್ಲಿ ಮಳೆ ಜೋರಾಗಿತ್ತು. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡಲು ಪರದಾಡಿದರು.

ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಿತ್ತು. ಕದ್ರಾ 30.8 ಮೀ (ಗರಿಷ್ಠ 34.50) ಹಾಗೂ ಕೊಡಸಳ್ಳಿ ಜಲಾಶಯ 72 ಮೀ (ಗರಿಷ್ಠ 75.50)ಇತ್ತು.

ಜಿಲ್ಲೆಯಲ್ಲಿ  43.0 ಮಿ.ಮೀ. ಮಳೆ: ಜುಲೈ 18 ರಂದು ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 43 ಮಿ.ಮೀ ಮಳೆಯಾಗಿದೆ. ಅಂಕೋಲಾ 33.4 ಮಿ.ಮೀ, ಭಟ್ಕಳ 74 ಮಿ.ಮೀ, ಹಳಿಯಾಳ 11.8 ಮಿ.ಮೀ, ಹೊನ್ನಾವರ 14.3 ಮಿ.ಮೀ, ಕಾರವಾರ 18 ಮಿ.ಮೀ, ಕುಮಟಾ 23.5 ಮಿ.ಮೀ, ಮುಂಡಗೋಡ 9.2 ಮಿ.ಮೀ, ಸಿದ್ದಾಪುರ 51.4 ಮಿ.ಮೀ, ಶಿರಸಿ 97.5 ಮಿ.ಮೀ, ಜೋಯಿಡಾ 110.2 ಮಿ.ಮೀ, ಯಲ್ಲಾಪುರ 30.2 ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ ಇಂದಿನವರೆಗೆ 652.2 ಮಿ.ಮೀ ಮಳೆಯಾಗಿದೆ.

ಆರ್ಭಟಿಸಿದ ವರುಣ
ಸಿದ್ದಾಪುರ:
ತಾಲ್ಲೂಕಿನಲ್ಲಿ ಗುರುವಾರ ಮಳೆ ಮತ್ತೊಮ್ಮೆ ಆರ್ಭಟಿಸಿತು. ಇಡೀ ದಿನವೂ ದೊಡ್ಡ ದೊಡ್ಡ ಹನಿಗಳೊಂದಿಗೆ ರಭಸದಿಂದ ಸುರಿದ ಮಳೆ, ಮಧ್ಯೆ ಮಧ್ಯೆ ಬಿಡುವು  ನೀಡಿತು.  
    
ಗುರುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದಲ್ಲಿ 51.4 ಮಿ.ಮೀ., ನಿಲ್ಕುಂದದಲ್ಲಿ 168.4 ಮಿ.ಮೀ, ತ್ಯಾಗಲಿಯಲ್ಲಿ  84.2 ಮಿ.ಮೀ., ಹಲಗೇರಿಯಲ್ಲಿ 77.0 ಮಿ.ಮೀ, ಅರೆಂದೂರಿನಲ್ಲಿ 64.4 ಮಿ.ಮೀ. ಮಳೆ ದಾಖಲಾಗಿದೆ. ಇದುವರೆಗೆ ಪಟ್ಟಣದಲ್ಲಿ ಒಟ್ಟು 1579.6 ಮಿ.ಮೀ. ಮಳೆ ಸುರಿದಿದೆ.ಕಳೆದ ವರ್ಷ ಇದೇ ಅವಧಿಯವರೆಗೆ ಒಟ್ಟು 682.6 ಮಿ.ಮೀ. ಮಳೆ ಸುರಿದಿತ್ತು.

ಶಿರಸಿ ವರದಿ
ತಾಲ್ಲೂಕಿನಲ್ಲಿ ಬುಧವಾರದಿಂದ ಬಿರುಸುಗೊಂಡಿದ್ದ ಮಳೆ ಗುರುವಾರವೂ ಮುಂದುವರಿಯಿತು. ಒಂದೆರಡು ತಾಸಿನ ಬಿಡುವು ಕೊಡುವ ಮಳೆ ಮತ್ತೆ ಜೋರಾಗಿ ಸುರಿಯುತ್ತಿದೆ.

ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಇಲ್ಲಿನ ಮಳೆ ಮಾಪನ ಕೇಂದ್ರದಲ್ಲಿ 97ಮಿ.ಮೀ. ಮಳೆ ದಾಖಲಾಗಿದ್ದು, ಈ ವರೆಗೆ ಒಟ್ಟು 1490ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT