ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಮೊಳಗಿದ ಪ್ರತಿಭಟನೆ ಧ್ವನಿ

Last Updated 18 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘ, ಕಾಂಗ್ರೆಸ್,  ಸ್ತ್ರಿಶಕ್ತಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಕಾರ್ಯಕರ್ತರು, ವಾಲ್ಮೀಕಿ ಸಮುದಾಯದ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.

ಕಡೂರು: ಕಾಂಗ್ರೆಸ್ ರಸ್ತೆ ತಡೆ
ಕಡೂರು:
ಚಿಕ್ಕಮಗಳೂರು-ಕಡೂರು ರಸ್ತೆ ಕಾಮಗಾರಿಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯ ಕರ್ತರು ಸೋಮವಾರ ಪ್ರತಿಭಟನೆ ನಡೆಸಿ ದರು. ರಸ್ತೆ ತಡೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ  ಕಾಂಗ್ರೆಸ್ ಮುಖಂ ಡರು ಸೇರಿದಂತೆ ಕಾರ್ಯಕರ್ತರನ್ನು ಪೊಲೀಸ್ ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಪಟ್ಟಣದ ಮರವಂಜಿ ವೃತ್ತದಿಂದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತ, ಎಲ್‌ಐಸಿ, ದೇವರಾಜು ಅರಸ್ ರಸ್ತೆಗಳ ಮೂಲಕ ಪ್ರತಿಭಟನಾ ಮೆರ ವಣಿಗೆ ಸಾಗಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮೂರ್ತಿ ಮಾತನಾಡಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಏಪ್ರಿಲ್ ಒಳಗೆ ಕಡೂರು -ಚಿಕ್ಕಮಗಳೂರು ರಸ್ತೆ ದುರಸ್ತಿ ಮಾಡಿ ಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡು ವುದಾಗಿ ತಿಳಿಸಿದ್ದರು. ಏಪ್ರಿಲ್ ಮುಗಿದು ಅಕ್ಟೋಬರ್ ಬಂದರೂ ದುರಸ್ತಿ ಆಗಿಲ್ಲ. ಆದ್ದರಿಂದ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ, ನಾಗರಿಕರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿರುವ ಕಡೂರು, ಚಿಕ್ಕಮಗಳೂರು ಶಾಸಕರಿಗೆ  ತಿಂಗಳ ಕಾಲ ಗಡುವು ನೀಡಿದ್ದು, ಅಷ್ಟರಲ್ಲಿ ಕಾಮಗಾರಿ ಆರಂಭಿಸ ದಿದ್ದರೆ ಕಾಂಗ್ರೆಸ್ ಉಗ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ, ಬೀರೂರು ಬ್ಲಾಕ್ ಅಧ್ಯಕ್ಷ ವಿನಾಯಕ, ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಆನಂದ್,ಕೆ.ಎಂ.ಕೆಂಪ ರಾಜು, ಡಿ.ಲಕ್ಷ್ಮಣ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಚ್ಚಿನ್‌ಮೀಗ, ಪುರಸಭೆ ಸದಸ್ಯ ರೇಣುಕರಾಧ್ಯ, ಕೆ.ಜಿ.ಲೋಕೇಶ್, ಸಾವಿತ್ರಿ ಗಂಗಣ್ಣ ಹಾಗೂ ನೂರಾರು ಕಾರ್ಯಕರ್ತರನ್ನು ಪೊಲೀಸ್ ಅಧಿಕಾರಿ ರೇವಣ್ಣ ಬಂಧಿಸಿ ವಾಹನಗಳಲ್ಲಿ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿರು ವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು. 

`ಸರ್ಕಾರ ಎಚ್ಚೆತ್ತುಕೊಳ್ಳಲಿ~
ಶೃಂಗೇರಿ:
ಮಲೆನಾಡಿನಲ್ಲಿ ಅಡಿಕೆಗೆ ಕಾಡುತ್ತಿ ರುವ ಹಳದಿ ಎಲೆ ರೋಗ, ಅತಿ ವೃಷ್ಟಿ ಯಂತಹ ಪ್ರಕೃತಿ ವಿಕೋಪಗಳು, ಮೀಸಲು ಅರಣ್ಯ ನೀತಿಗಳಿಂದ ರೈತ ಸಂಕಷ್ಟದಲ್ಲಿದ್ದಾನೆ. ಇದೆಲ್ಲದರಿಂದ ಗುಳೆಹೋಗುವುದು ಮತ್ತು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳು ತ್ತಿದ್ದಾರೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತು ರೈತ ಪರ ಒಲವು ತೋರ ಬೇಕೆಂದು ತಾಲ್ಲೂಕು ಹಳದಿ ಎಲೆ ರೋಗ ಹೋರಾಟ ಸಮಿತಿಯ ಅಧ್ಯಕ್ಷ ಮಾರನ ಕೊಡಿಗೆ ನಟರಾಜ್ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಪಕ್ಷಗಳ ನೇತೃತ್ವದಲ್ಲಿ ಸೋಮವಾರ ನಡೆದ  ಪ್ರತಿಭಟನಾ ಸಭೆಯಲ್ಲಿ ಅವರು ಮಾತ ನಾಡಿದರು.

ರೈತ ಆರ್ಥಿಕ ಸಂಕಷ್ಟದಲ್ಲಿದ್ದು, ಬ್ಯಾಂಕ್‌ಗಳು ಕಡ್ಡಾಯ ಸಾಲ ವಸೂಲು ನಿಲ್ಲಿಸಬೇಕು. ರಾಜ್ಯ ಸರ್ಕಾರ ಹೊಂದಾಣಿಕೆ ಅನುದಾನ ವನ್ನು ಪ್ರಕಟಿಸುವುದರ ಮೂಲಕ ಡಾ. ಗೊರಕ್ ಸಿಂಗ್ ವರದಿಯ ಅನುಷ್ಟಾನದಂತೆ ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಘೋಷಿಸುವ ಬೇಡಿಕೆಗೆ ಒತ್ತಾಯ ಹೇರ ಬೇಕು ಎಂದರು.

ರಾಜ್ಯ ರೈತ ಸಂಘದ ಶೃಂಗೇರಿ ತಾಲ್ಲೂಕು ಘಟಕದ ಅಧ್ಯಕ್ಷ ಬಂಡ್ಲಾಪುರ ಶ್ರೀಧರರಾವ್ ಮಾತನಾಡಿ,  ಸರ್ಕಾರಿ ಭೂಮಿಯನ್ನು ಸೊಪ್ಪಿನಬೆಟ್ಟ ಮತ್ತು ಗೋಮಾಳ ಎಂದು ಘೋಷಿಸಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಮುಖೇನ ರೈತರಿಗೆ ಮಾರಕವಾದ ಮೀಸಲು ಅರಣ್ಯ ಘೋಷಣೆಯನ್ನು ಕೈಬಿಡುವಂತೆ ಒತ್ತಾಯಿಸಿದರು.

ಶೃಂಗೇರಿ ಬಸ್‌ನಿಲ್ದಾಣದಿಂದ ಆರಂಭ ಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಎಂ.ಆರ್. ಜಗದೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಎಂ. ಗೋಪಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೌಭಾಗ್ಯ ಗೋಪಾಲನ್, ಜೆಡಿಎಸ್ ಮುಖಂಡ ಕೆ.ಎಸ್. ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಗೀತಾ ಶ್ರೀನಿವಾಸ ನಾಯ್ಕ, ರೈತಸಂಘದ ಕರುವಾನೆ ನವೀನ, ತಾಲ್ಲೂಕು ರೈತ ಸಂಘದ ಕಾರ್ಯ ದರ್ಶಿ ಚಂದ್ರಶೇಖರ್, ಕಾರ್ಯಧ್ಯಕ್ಷ ಗೋಪಾಲನಾಯ್ಕ ಮಾಗಲು ಅಚ್ಯುತ ಹಸಿರು ಸೇನೆ ಅಧ್ಯಕ್ಷ ಮಾರನಕೊಡಿಗೆ ಮಂಜುನಾಥ್, ಪೂರ್ಣೇಶ್, ಶ್ರೀನಿವಾಸ ಮೂರ್ತಿ ಮುಂತಾದವರು ಇದ್ದರು. 

 `ಮದ್ಯ ಮಾರಾಟ ನಿಲ್ಲಿಸಿ~
ಕೊಪ್ಪ:
ತಾಲ್ಲೂಕಿನ ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿ ಹಾಗೂ ಮನೆ ಮನೆಗಳಲ್ಲಿ ಮದ್ಯ ಮಾರಾಟ ನಿರ್ಬಂಧಿಸಲು ಒತ್ತಾಯಿಸಿ ಗ್ರಾಮಸ್ಥರು, ಸ್ತ್ರಿಶಕ್ತಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಭಂಡಿಗಡಿ ಗ್ರಾ.ಪಂ. ಆವರಣದಲ್ಲಿ ಸಭೆ ಸೇರಿದ ಗ್ರಾಮಸ್ಥರು, ಮನೆಗಳಲ್ಲಿ ಪರವಾನಗಿ ಇಲ್ಲದೆ ಮಾರಾಟವಾಗುತ್ತಿರುವ ಮದ್ಯ ದಿಂದಾಗಿ ಕೂಲಿ ಕಾರ್ಮಿಕರ ಬದುಕು ದುಃಸ್ಥಿತಿ ತಲುಪಿದೆ ಎಂದು ದೂರಿದರು.
ನಕಲಿ ಮದ್ಯ ತಯಾರಿಸಿ ದುಬಾರಿ ಬೆಲೆ ಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸ್ತ್ರಿಶಕ್ತಿ ಸಂಘದ ಅಧ್ಯಕ್ಷೆ ಪ್ರೇಮಾ ಮಾತನಾಡಿ, ಬ್ರಾಂಡಿಯಿಂದ ಕುಟಂಬದ ನೆಮ್ಮದಿ ನಾಶವಾಗಿದೆ. ಮಕ್ಕಳ ವಿದ್ಯಾಭ್ಯಾ ಸಕ್ಕು ಹಣ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ದುಡಿಮೆ ಹಣವನ್ನೆಲ್ಲ ಮದ್ಯಕ್ಕೆ ಸುರಿಯುತ್ತಿರುವ ಕುಟುಂಬದ ಯಜಮಾನರನ್ನು ಪ್ರಶ್ನಿಸಿದರೆ ಹೊಡೆದಾಟವಾಗುತ್ತಿದೆ ಎಂದು ನೋವು ತೋಡಿಕೊಂಡರು.

ಜೆಡಿಎಸ್ ಮುಖಂಡರಾದ ಎಚ್.ಡಿ.ಶ್ರೀನಿವಾಸ್, ಬಿ.ಎಚ್.ದಿವಾಕರ್  ಮಾತನಾಡಿ, ಗ್ರಾಮದಲ್ಲಿ ಮದ್ಯಮಾರಾಟ ತಡೆಗೆ ಇಲಾಖೆಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರಲ್ಲದೆ ಮದ್ಯ ಮಾರಾಟ ನಿಲ್ಲದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ಹಾಕಿಕೊಳ್ಳುವ ಎಚ್ಚರಿಕೆ ನೀಡಿದರು.

ಗ್ರಾ.ಪಂ.ಉಪಾಧ್ಯಕ್ಷ ಕವಡೆಕಟ್ಟೆ ಪ್ರದೀಪ್ ಮಾತನಾಡಿ, ಗ್ರಾ.ಪಂ.ಈಗಾಗಲೆ ಮದ್ಯಮಾರಾಟ ನಿಷೇಧಿಸಲು ನಿರ್ಣಯ ಕೈಗೊಂಡಿದೆ. ಅಕ್ರಮ ಮದ್ಯಮಾರಾಟ ಕಂಡು ಬಂದಲ್ಲಿ ಅಬಕಾರಿ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತರಬೇಕು. ಇಲಾಖಾ ದೂರವಾಣಿ ಸಂಖ್ಯೆಯನ್ನು ಸೂಚನಾ ಫಲಕದಲ್ಲಿ ಹಾಕಿಸಲಾಗುವುದು ಎಂದರು.

ಸ್ಥಳಕ್ಕೆ ಆಗಮಿಸಿದ ಅಬಕಾರಿ ಇಲಾಖೆ ಅಧಿಕಾರಿಗಳಾದ ಪ್ರದೀಪ್ ಹಾಗೂ ಚಂದ್ರನಾಯಕ್ ಗ್ರಾಮಸ್ಥರ ಅಹವಾಲು ಅಲಿಸಿ ಮದ್ಯ ಮಾರಾಟ ತಡೆಗೆ ಗ್ರಾಮಸ್ಥರ ಸಹಕಾರ ಕೋರಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮ, ಸದಸ್ಯರಾದ ಮಹಮದ್ ಹುಸೇನ್, ನಬಿಸಾಬಾನು, ಬಿಶೇಜ, ಗ್ರಾಮಸ್ಥರಾದ ಪ್ರಸನ್ನ, ದೇವೇಂದ್ರ, ಮಲ್ಲೇಶ್, ಸುರೇಶ್ ಇದ್ದರು.

ಸಖರಾಯಪಟ್ಟಣ ಬಂದ್
ಸಖರಾಯಪಟ್ಟಣ:
ಹದಗೆಟ್ಟಿರುವ ಕಡೂರು- ಚಿಕ್ಕಮಗಳೂರು ರಸ್ತೆ ಅಭಿ ವೃದ್ಧಿಗೆ ಆಗ್ರಹಿಸಿ ಜೆಡಿಎಸ್ ಸೋಮವಾರ ಸಖರಾಯಪಟ್ಟಣ ಬಂದ್ ನಡೆಸಿತು.


ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವರ್ತಕರು ಅಂಗಡಿ ಮುಂಗಟ್ಟು ಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ, ಬಂದ್‌ಗೆ ಬೆಂಬಲ ನೀಡಿದರು. ಅಂಗಡಿಗಳು ಮುಚ್ಚಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ದೇವರಾಜ್ ಮತ್ತು ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ  ನೇತೃತ್ವದಲ್ಲಿ  ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು, ಹದಗೆಟ್ಟಿರುವ ಕಡೂರು-ಚಿಕ್ಕಮಗಳೂರು ರಸ್ತೆಯ ಗುಂಡಿಗಳಲ್ಲಿ ಬಾಳೆಗಿಡ ನೆಟ್ಟು, ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದರು.
ಕಡೂರು-ಚಿಕ್ಕಮಗಳೂರು ರಸ್ತೆಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ರಸ್ತೆ ನಡೆಸಿ, ರಸ್ತೆ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದರು.

ಕಡೂರು-ಚಿಕ್ಕಮಗಳೂರು ರಸ್ತೆ  ಹದಗೆಟ್ಟು ದಶಕಗಳೇ ಕಳೆದಿದ್ದರೂ ಸ್ಥಳೀಯ ಶಾಸಕರು ಅಭಿವೃದ್ಧಿಪಡಿಸದೇ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ ಹದಗೆಟ್ಟ ರಸ್ತೆ ಯಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾ ಗುತ್ತಿದ್ದು, ಗುಂಡಿ-ಗೊಟರುಗಳ ನಡುವೆ ಸಂಚಾರ ಕಷ್ಟ ಸಾಧ್ಯವಾಗಿದೆ. ಪ್ರಯಾಣಿಕರು ಮತ್ತು ವಾಹನ ಚಾಲಕರು ಪರದಾಡು ತ್ತಿದ್ದಾರೆ.
 
ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹಣ ತರಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಶಾಸಕ ಸಿ.ಟಿ.ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಒತ್ತಾಯಿಸಿದರು.

ಸಖರಾಯಪಟ್ಟಣ ಹೋಬಳಿಯಲ್ಲಿ ನಡೆದಿರುವ ಬಹುತೇಕ ಎಲ್ಲ ಕಾಮಗಾರಿಗಳ ಗುತ್ತಿಗೆಯನ್ನು ಶಾಸಕರ ಸಂಬಂಧಿಕರು ನಿರ್ವಹಿಸಿದ್ದು, ಸಂಪೂರ್ಣ ಕಳಪೆಯಾಗಿವೆ. ಅಭಿವೃದ್ಧಿ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ. ಅಯ್ಯನಕೆರೆ ಅಭಿವೃದ್ಧಿ ಮತ್ತು ಫೀಡರ್ ಚಾನೆಲ್‌ಗಳನ್ನು ಕಾಂಕ್ರಿಟ್ ಹಾಕಿ ನಿರ್ಮಿಸಲು ವಿದರ್ಭ ಪ್ಯಾಕೇಜಿನಲ್ಲಿ 4.75 ಕೋಟಿ ರೂ. ಮಂಜೂರಾಗಿದೆ.
 
ಈ ಕಾಮ ಗಾರಿಯೂ ಸಹ ಸಂಪೂರ್ಣ ಕಳಪೆಯಾಗಿದೆ. ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರ ಮೇಲೆ ಹಾಗೂ ಸಂಬಂಧಪಟ್ಟ ಇಲಾಖೆ ಎಂಜಿನಿಯರ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಸ್ತೆ ಅಭಿವೃದ್ಧಿ ಪಡಿಸದಿದ್ದಲ್ಲಿ ಸಖರಾಯ ಪಟ್ಟಣದಿಂದ ಚಿಕ್ಕಮಗಳೂರಿನವರೆಗೆ ಪಾದಯಾತ್ರೆ ಜಾಥಾ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆ ಅಭಿವೃದ್ಧಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸಿ, ಸ್ಥಳೀಯ ಶಾಸಕರನ್ನು ಮನೆಗೆ ಕಳುಹಿಸುವ ಕೆಲಸ ಮಾಡಲಾ ಗುವು ದು ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್.ದೇವರಾಜ್ ಹೇಳಿದರು.

ರಸ್ತೆ ತಡೆ ನಡೆಸಿದ್ದರಿಂದ ರಸ್ತೆ ಎರಡೂ ಬದಿ ಒಂದು ಗಂಟೆ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಜೆಡಿಎಸ್ ಬ್ಲಾಕ್ ಸಮಿತಿ ಅಧ್ಯಕ್ಷ ಮಹಡಿ ಮನೆ ಸತೀಶ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಕಾರ್ಯದರ್ಶಿ ರೆಹಮಾನ್, ಎಸ್.ಆರ್.ಯೋಗೀಂದ್ರಗೌಡ, ಎಸ್.ಎಸ್.ಉಮೇಶ್, ಧರ್ಮರಾಜ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT