ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಯಶಸ್ವಿ

Last Updated 6 ಜುಲೈ 2012, 7:20 IST
ಅಕ್ಷರ ಗಾತ್ರ

ಗದಗ: ಉಚಿತ ಹಾಗೂ ಕಡ್ಡಾಯ ಶಿಕ್ಷಣ ಎಲ್ಲ ಮಕ್ಕಳಿಗೂ ದೊರೆಯಲು ಶಿಕ್ಷಕರು ಹಾಗೂ ಪೋಷಕರು ಶ್ರಮಿಸ ಬೇಕು ಎಂದು ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.ನಗರದ ಎಸ್.ಎಂ.ಕೃಷ್ಣ ಬಡಾ ವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂ. 12ರಲ್ಲಿ ಶಾಲೆಗಾಗಿ ನಾವು -ನೀವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ ಮುಖ್ಯವಾಹಿನಿಗೆ ಕರೆತರುವ ಹೊಣೆಗಾರಿಕೆ ಶಿಕ್ಷಕರ ಮತ್ತು ಪಾಲಕರ ಮೇಲಿದೆ ಎಂದು ತಿಳಿಸಿದರು.ಶಿಕ್ಷಣ ಹಕ್ಕು ಕಾಯಿದೆಯ ಉಪ ಯೋಗವನ್ನು ಪಾಲಕರು ಮತ್ತು ಮಕ್ಕಳು ಪಡೆದುಕೊಳ್ಳಬೇಕು ಎಂದು ಶಹರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆಯ್.ಬಿ.ಬೆನಕೊಪ್ಪ ತಿಳಿಸಿದರು.

ಮಕ್ಕಳ ಶಿಕ್ಷಣದ ಹಕ್ಕು ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸುವುದಾಗಿ ಮತ್ತು ಗುಣಾತ್ಮಕ ಶಿಕ್ಷಣಕ್ಕೆ ಬದ್ಧತೆ ವ್ಯಕ್ತಪಡಿಸುವ ಸಲುವಾಗಿ ಜನಪ್ರತಿನಿಧಿ, ಪಾಲಕ-ಪೋಷಕ, ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ನಗರಸಭೆ ಸದಸ್ಯೆ ಶಕುಂತಲಾ ಅಕ್ಕಿ, ಎಸ್‌ಡಿಎಂಸಿ ಅಧ್ಯಕ್ಷ ಮಾಲತೇಶ ಮಣ್ಣಮ್ಮನವರ, ಮುಖ್ಯ ಶಿಕ್ಷಕಿ ಎಸ್.ಎಂ.ಕಿನ್ನಾಳ, ಎಚ್.ಆರ್.ಕೋಣಿಮನಿ, ಎಸ್.ಟಿ.ಕುಲಕರ್ಣಿ, ಪಿ.ಎಸ್.ಮಣ್ಣೂರ ಹಾಜರಿದ್ದರು. ಎಂ.ಕೆ.ಹುಯಿಲಗೋಳ ಸ್ವಾಗತಿಸಿದರು. ಎಚ್.ಆರ್.ಕೋಣಿಮನಿ ನಿರೂಪಿಸಿದರು.

`ಸರ್ಕಾರಿ ಯೋಜನೆ ಸದುಪಯೋಗ ಅಗತ್ಯ~
ಗಜೇಂದ್ರಗಡ: ಮಕ್ಕಳ ಶೈಕ್ಷಣಿಕ ಅಭಿ ವೃದ್ದಿ ದೃಷ್ಟಿಯಿಂದ ಸರ್ಕಾರ ಜಾರಿಗೊಳಿ ಸಿದ ಮಹತ್ವದ ಯೋಜನೆಗಳನ್ನು ಸದು ಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿ ಗಳು, ಪಾಲಕರು ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದು ಸಂಯುಕ್ತಾ ಬಂಡಿ ಹೇಳಿದರು.

ಇಲ್ಲಿನ ಕಮ್ಮಾರ ಓಣಿಯ ಸರ್ಕಾರಿ ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಲಾ ಗಿದ್ದ `ಶಾಲೆಗಾಗಿ ನಾವು-ನೀವು~ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಶೈಕ್ಷಣಕ ಅಭಿವೃದ್ದಿ ದೃಷ್ಟಿಯನ್ನಿಟ್ಟುಕೊಂಡು ಉಚಿತ ಪ್ರವೇಶ, ಬಿಸಿಯೂಟ, ಶೈಕ್ಷಣಿಕ ಪರಿ ಕರಗಳ ವಿತರಣೆ, ಉಚಿತ ಸೈಕಲ್, ಸಮವಸ್ತ್ರ ಸೇರಿದಂತೆ ಹತ್ತಾರು ಉಚಿತ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಿದ್ದರೂ ಸರ್ಕಾರಿ ಶಾಲೆಗಳು ಹಾಜ ರಾತಿ ಸಮಸ್ಯೆಗಳನ್ನು ಎದುರಿಸುತ್ತಿರು ವುದು ಬೇಸರದ ಸಂಗತಿಯಾಗಿದೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತಲ್ಲೂ ಸರ್ಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ದೊರೆಯುತ್ತದೆ. ಹೀಗಿದ್ದರೂ ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಆಕರ್ಷಿತರಾಗಿರುವುದು ಸರ್ಕಾರಿ ಶಾಲೆ ಗಳಲ್ಲಿ ಹಾಜರಾತಿ ಕೊರತೆಯನ್ನುಂಟು ಮಾಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ಹಣ ಮಾಡುವ ಉದ್ದೇಶದಿಂದ ಶಿಕ್ಷಣವನ್ನು ನೀಡುತ್ತವೆಯೋ ಹೊರತು ನೈಜ ಶಿಕ್ಷಣವನ್ನು ಕೊಡುವ ಉದ್ದೇಶ ಹೊಂದಿಲ್ಲ ಎಂದರು.

ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪರಿಣಾಮ ಸರ್ಕಾರದ ಹತ್ತಾರು ಉಪಯುಕ್ತ ಯೋಜನೆಗಳ ಮಧ್ಯೆಯೂ ಗ್ರಾಮೀಣರು ಶಿಕ್ಷಣದಿಂದ ಬಹು ದೂರ ಉಳಿಯುವಂತಾಗಿದೆ.

ಪಾಲಕರು ತಮ್ಮ ಕೌಟುಂಬಿಕ ಸಮಸ್ಯೆಗಳ ನಿವಾರಣೆಗಾಗಿ ಮುಗ್ದ ಮಕ್ಕಳನ್ನು ಬಳಸಿಕೊಳ್ಳು ತ್ತಿದ್ದಾರೆ. ಓದಬೇಕಾದ ದಿನಗಳಲ್ಲಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸದೆ, ಕೃಷಿ ಕೂಲಿ ಕಾರ್ಯಗಳಿಗೆ ಕಳುಹಿಸುವುದರ ಮೂಲಕ ಶಿಕ್ಷಣದಿಂದ ವಂಚಿತಗೊಳಿ ಸುತ್ತಿದ್ದಾರೆ ಎಂದರು.

ಹೊಳೆ ಆಲೂರ ಎ.ಪಿ.ಎಂ.ಸಿ ಅಧ್ಯಕ್ಷ ಅಂಬರೀಶ ಅರಳಿ `ಮಕ್ಕಳ ಹಕ್ಕುಗಳ ಗೋಡೆ ಬರಹ~ ಅನಾವರಣಗೊಳಿಸಿ ಮಾತನಾಡಿದರು.ಜಿಲ್ಲಾ ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ ದೀಪಾ ಗೋಯಲ್, ಸಹರಿ ರೋಜಗಾರ ಯೋಜನೆಯ ಅಧ್ಯಕ್ಷೆ ಬಸಮ್ಮ ಸಾಲಿಮಠ ಪುರಸಭೆ ಸದಸ್ಯ ರಾಜೇಸಾಬ ಡಾಲಾಯತ, ನೇಕಾರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಕೋಟ್ರೇಶ ಚಿಲಕಾ, ಡಾ.ಪಾರ್ವತಿ ಬಾಯಿ ಭಾಂಡಗೆ, ಟಿ.ಡಿ.ಶೀಂಗ್ರಿ, ಭರಮಪ್ಪ ಕುಂಬಾರ, ನಾಗನಳ್ಳಿ ಮುಂತಾದವರು ಉಪಸ್ಥಿತರಿದ್ದರು.

`ಶಾಲೆಗಾಗಿ ಪಾಲಕರು ಕಾಳಜಿ ವಹಿಸಲಿ~
ಲಕ್ಷ್ಮೇಶ್ವರ: ಶಾಲೆಗಾಗಿ ನಾವು-ನೀವು ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡ್ರ ಅವರು ಗುರುವಾರ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಡ್ರಮ್ ಬಾರಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು ಎಲ್ಲ ಮಕ್ಕಳಿಗೂ ಶಿಕ್ಷಣ ದೊರೆಯಲಿ ಎಂಬ ಉದ್ಧೇಶದಿಂದ ಹಲ ವಾರು ಯೋಜನೆಗಳನ್ನು ಜಾರಿಗೆ ತರು ತ್ತಿದೆ. ಆದರೆ ಯೋಜನೆಗಳ ಉಪ ಯೋಗ ಸರಿಯಾಗಿ ಆಗುತ್ತಿಲ್ಲ. ಕಾರಣ ಸರ್ಕಾರದೊಂದಿಗೆ ಪಾಲಕರೂ ಕೈ ಜೋಡಿಸಿದರೆ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ಆಗಾಗ ಶಾಲೆಗಳಿಗೆ ಭೇಟಿ ನೀಡಿ ಕಾರ್ಯವೈಖರಿ ಗಮನಿಸಬೇಕು ಎಂದರು.

ಜಿಲ್ಲಾ ಟಿಎಸ್‌ಇಆರ್‌ಟಿ ನೋಡಲ್ ಅಧಿಕಾರಿ ರಾಮದಾಸ, ಬಿ.ಜಿ. ಕನವಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಕೋರದಾಳ, ಉಪಾಧ್ಯಕ್ಷೆ ಚೈತ್ರಾ ಹಣಗಿ, ಬಸವರಾಜ ರೋಣದ, ಅನ್ನಪೂರ್ಣ ಮತ್ತೂರ, ಗಣೇಶ ಮಿಸ್ಕಿನ್, ಮುಖ್ಯ ಶಿಕ್ಷಕಿ ಕೆ.ಆರ್.ಪಾಟೀಲ ಸೇರಿದಂತೆ ಮತ್ತಿತರರು ಹಾಜರಿದ್ದರು.

ಕಲಿಕೆಗೆ ಆದ್ಯತೆ ನೀಡಿ: ಸಿ.ಸಿ.ಪಾಟೀಲ
ನರಗುಂದ: ರಾಜ್ಯ ಸರ್ಕಾರವು ಶಿಕ್ಷಣದ ಬೆಳವಣಿಗೆಗಾಗಿ ಹಲವಾರು ಕಾರ್ಯ ಕ್ರಮಗಳನ್ನು ಜಾರಿ ಮಾಡಿದೆ. ಅವು ಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಕರು ಮಕ್ಕಳ ಕಲಿಕೆಗೆ ಆದ್ಯತೆ  ನೀಡು ವಂತೆ ಶಾಸಕ ಸಿ.ಸಿ.ಪಾಟೀಲ ಕರೆ ನೀಡಿದರು.

ಪಟ್ಟಣದಲ್ಲಿ ಗುರುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 3ರಲ್ಲಿ ನಡೆದ ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ ದರು.ಮಕ್ಕಳು ಉತ್ತಮ ಜ್ಞಾನ ಹೊಂದ ಬೇಕಾದರೆ ಅವರಿಗೆ ಗುಣಾತ್ಮಕ ಶಿಕ್ಷಣ ಅವಶ್ಯವಾಗಿದೆ. ಅದರತ್ತ ಲಕ್ಷ ವಹಿಸ ಬೇಕು ಎಂದರು.

ಪ್ರಾಸ್ತಾವಿಕವಾಗಿ  ಡಿಡಿಪಿಐ ಉದಯ ನಾಯಕ ಮಾತನಾಡಿದರು. ಅತಿಥಿ ಗಳಾಗಿ ವಸಂತ  ಜೋಗಣ್ಣವರ ಮಾತ ನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಬಿ. ತಿಪ್ಪನಗೌಡ್ರ, ಪುರಸಭೆ ಉಪಾಧ್ಯಕ್ಷ ಉಮೇಶ ಯಮೋಜಿ, ಮಲ್ಲವ್ವ ಗುಂಜಳ, ಎಸ್.ರಾಜಶೇಖರ ಮೊದಲಾದವರು ಉಪಸ್ಥಿತರಿದ್ದರು. ಬಿ. ಎಂ.ಗಾಣಿಗೇರ ಸ್ವಾಗತಿಸಿದರು. ಎಸ್. ಎಚ್.ದ್ಯಾವನಗೌಡ್ರ ನಿರೂಪಿಸಿದರು. ವಿ.ಎಸ್.ಚಿಕ್ಕಮಠ ವಂದಿಸಿದರು.

ಗುಣಮಟ್ಟದ ಶಿಕ್ಷಣ:  ಖಮರಸುಲ್ತಾನ ಸಲಹೆ
ಗದಗ:  ಗುಣಮಟ್ಟದ ಶಿಕ್ಷಣದಿಂದ ಶಾಲಾ ಮಕ್ಕಳ ಭವಿಷ್ಯ ಉಜ್ವಲ ವಾಗಲು ಸಾಧ್ಯ.  ಈ ನಿಟ್ಟಿನಲ್ಲಿ ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಖಮರಸುಲ್ತಾನ ನಮಾಜಿ ಹೇಳಿದರು. 

ನಗರದ ಗಂಗಿಮಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಾಲೆಗಾಗಿ ನಾವು ನೀವು   ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದರು. ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆ 2009 ರಡಿಯಲ್ಲಿ 6 ರಿಂದ 14 ವರ್ಷದೊಳಗಿನ ಪ್ರತಿಯೊಂದು ಮಗುವಿಗೆ ಮೂಲಭೂತ ಹಕ್ಕುಗಳಲ್ಲಿ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನ ನೀಡಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣದಿಂದ ವಂಚಿತರಾಗ ದಂತೆ ಜಾಗೃತಿ ವಹಿಸಬೇಕು ಎಂದು ಅವರು ಹೇಳಿದರು.   

ಮುಖ್ಯ ಶಿಕ್ಷಕಿ ಎಂ.ಎ ನಮಾಜಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವುದು, ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.ನಗರಸಭೆಯ ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ, ಶಿಕ್ಷಣ ದಿಂದ ಮಕ್ಕಳು ವಂಚಿತರಾಗಬಾರದು. ಸುಶಿಕ್ಷಿತ ಮಕ್ಕಳಿಂದ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. 

ಶಿಕ್ಷಕ  ಎಸ್.ಎಸ್.ಹಿರೇಮಠ ಮಾತ ನಾಡಿದರು. ಗಣ್ಯರಾದ ಹುಸೇನಸಾಬ ಪಲ್ಲೆೀದ, ಗಂಗಿಮಡಿ ಅಧ್ಯಕ್ಷ ಎಂ.ಎಂ. ನಾಯ್ಕರ್, ಎಸ್.ಡಿ.ಎಂ.ಸಿ. ಸದಸ್ಯರಾದ ಇಸ್ಮಾಯಿಲಸಾಬ ಹೊಸಮನಿ,  ಎಸ್. ಎಸ್.ಚಿಕ್ಕೊಪ್ಪ, ರಫೀಕಸಾಬ ಬೇಲೇರಿ , ಮಹಬೂಬಿ ಧಾರವಾಡ,  ಎಸ್.ಡಿ. ಎಂ.ಸಿ. ಸದಸ್ಯ ಎನ್.ಎಸ್. ಮೆಹರ ವಾಡೆ, ವಿಠಲದಿವಟೆ, ಉರ್ದು ಶಾಲೆಯ  ಎಸ್ ಡಿ ಎಂಸಿ ಅಧ್ಯಕ್ಷ ಇಶುಬ ಮುಲ್ಲಾ, ಲಾಲಸಾಬ ನದಾಫ್,  ಇರ್ಪಾದ ಬಸ್ತಿ, ಗೌಸುಸಾಬ ಪಲ್ಲೆೀದ, ಜಂತ್ಲಿಸಾಬ ಪಲ್ಲೆೀದ  ಹಾಜರಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಪರಶುರಾಮ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಸ್.ಬಿ. ಖೊಕಲೆ ವಂದಿಸಿದರು. ಶಿಕ್ಷಕ ಬಿ.ವಿ. ಹುಡೇದ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT