ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಕ್ಕೆ ರಕ್ತ ಜೀವನಕ್ಕೆ ಭರವಸೆ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

`ಗಿ ವ್ ಎ ಡ್ರಾಪ್ ಆಫ್ ಹೋಪ್~ ಎಂಬ ಫಲಕಗಳು  ಫೋರಂ ಮಾಲ್‌ನಲ್ಲಿ ಎಲ್ಲೆಲ್ಲೂ ಕಾಣಿಸಿಕೊಂಡಿದ್ದವು. ಜೀವ ಉಳಿಸುವ ಭರವಸೆ ನೀಡಿ ಎಂಬ ಘೋಷಣೆಯೊಂದಿಗೆ ಒಂದು ವಿಭಿನ್ನ ಕಾರ್ಯಕ್ರಮವನ್ನು ಕೋರಮಂಗಲದ ಫೋರಂ ಮಾಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಕ್ತದಾನದ ಮಹತ್ವವನ್ನು ಸಾರಲು ಮತ್ತು ಈ ಕುರಿತು ಜನರಲ್ಲಿ ಅರಿವು ಮೂಡಿಸಲು, ಸ್ವಯಂಪ್ರೇರಿತವಾಗಿ ಜನರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಲು ಲಯನ್ಸ್ ಇಂಟರ್‌ನ್ಯಾಷನಲ್ ಸಹಯೋಗದೊಂದಿಗೆ ಫೋರಂ ಮಾಲ್ ರಕ್ತದಾನ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ರಕ್ತದಾನ ಹೇಗೆ ಸಹಕಾರಿ, ಜೀವ ಉಳಿಸುವಲ್ಲಿ ಅದರ ಪಾತ್ರವೇನು? ಹೀಗೆ ರಕ್ತದಾನದ ಕುರಿತ ಹಲವು  ಪ್ರಶ್ನೆಗಳಿಗೆ ಉತ್ತರ ನೀಡಿತ್ತು ಈ ಕಾರ್ಯಕ್ರಮ.

ಬೆಂಗಳೂರಿನ ಸುಮಾರು 150 ಮಂದಿ ಅಂದು ರಕ್ತದಾನ ಮಾಡಿದ್ದರು. ಫೋರಂ ಮಾಲ್‌ನ ಸಿಬ್ಬಂದಿಗಳು ಮೊದಲು ರಕ್ತದಾನ ಮಾಡಿದ ನಂತರ ಅಲ್ಲಿಗೆ ಭೇಟಿ ನೀಡಿದ ಜನರೊಂದಿಗೆ ರಕ್ತದಾನದ ಕುರಿತು ಚರ್ಚೆಯೂ ನಡೆಯಿತು. ಅಲ್ಲಿಗೆ ಬಂದ ಜನರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಹಲವು ಆಸ್ಪತ್ರೆಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ. ಇದರಿಂದಾಗಿಯೇ ಹಲವರು ಪ್ರಾಣ ಕಳೆದುಕೊಂಡಿರುತ್ತಾರೆ. ಬ್ಲಡ್ ಬ್ಯಾಂಕ್‌ಗಳಲ್ಲಿಯೂ ರಕ್ತದ ಕೊರತೆಯಿರುವುದರಿಂದ ಇದು ಎಷ್ಟೋ ಜನರ ಜೀವದ ಪ್ರಶ್ನೆಯಾಗಿದೆ. ಆದ್ದರಿಂದ ರಕ್ತದಾನ ಮಾಡುವುದು ನಮ್ಮ ಸಾಮಾಜಿಕ ಹೊಣೆ ಎಂದರು ಫೋರಂ ಮಾಲ್‌ನ ಜನರಲ್ ಮ್ಯಾನೇಜರ್ ರಾಮರಾಜು.

104 ಎಫ್ ಎಂನ ಆರ್‌ಜೆಗಳಾದ ಶ್ರದ್ಧಾ ಮತ್ತು ರುಬೀನಾ ಅವರೂ ರಕ್ತದಾನದಲ್ಲಿ ಭಾಗವಹಿಸಿ ಇಂತಹ ಕಾರ್ಯಗಳಿಂದ ಜನರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ರಕ್ತದಾನದ ಬಗ್ಗೆ ಇರುವ ತಪ್ಪು ಕಲ್ಪನೆಗಳಿಗೂ ಉತ್ತರ ದೊರಕುತ್ತದೆ, ಗಿವ್ ಎ ಡ್ರಾಪ್ ಆಫ್ ಹೋಪ್ ಎಂಬ ಹೆಸರೇ ರಕ್ತದಾನದ ಮಹತ್ವವನ್ನು ಸಾರುತ್ತದೆ ಎಂದರು.

ರಕ್ತದಾನ ಮಾಡಿದ ಜನರಿಗೆ ಲಯನ್ಸ್ ಕ್ಲಬ್ ಬ್ಲಡ್ ಡೋನರ್ ಕಾರ್ಡ್‌ಗಳನ್ನೂ ನೀಡಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT