ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಪ್ರೀತಿಯಿಂದ ಆರೋಗ್ಯ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಯಾವುದೇ ವೃತ್ತಿಯಲ್ಲಿರುವವರು ಜೀವನ ಪ್ರೀತಿಯನ್ನು ಅಗತ್ಯವಾಗಿ ಇಟ್ಟುಕೊಂಡಾಗ ಮಾತ್ರ ಆರೋಗ್ಯದಿಂದ ಇರಲು ಸಾಧ್ಯವಿದೆ. ಆರೋಗ್ಯ ಸಂರಕ್ಷಣೆಗೆ ಅಗತ್ಯವಿರುವ ಮನೆ ಮದ್ದುಗಳ ತಯಾರಿಕೆಯಲ್ಲಿ ಆರೋಗ್ಯ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ~ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಕಾಮಧೇನು ಪುಸ್ತಕ ಭವನವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ವಸುಂಧರಾ ಭೂಪತಿ ಅವರ `ಆರೋಗ್ಯ ಸಂಗಾತಿ~ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಈ ಪುಸ್ತಕದಲ್ಲಿ ತರಹೇವಾರಿ ಹಣ್ಣುಗಳು, ತರಕಾರಿಗಳು ಮತ್ತು ಸೊಪ್ಪಿನ ಔಷಧೀಯ ಗುಣಗಳನ್ನು ಸರಳವಾಗಿ ತಿಳಿಸಲಾಗಿದೆ. ಅನಾರೋಗ್ಯ ಕಂಡಾಗ ಆಸ್ಪತ್ರೆಗಳಿಗೆ ತೆರಳುವ ಮುನ್ನ ಇಂತಹ ಪುಸ್ತಕಗಳ ಪ್ರಯೋಜನ ಪಡೆಯಬೇಕು~ ಎಂದರು.

`ವಿವಿಧ ಸಾಹಿತ್ಯ ಪುಸ್ತಕಗಳಲ್ಲೂ ಉಲ್ಲೇಖಗೊಂಡಿರುವ ತರಕಾರಿ ಮತ್ತು ಹಣ್ಣುಗಳ ಮಾಹಿತಿಯನ್ನು ದಾಖಲಿಸಲಾಗಿದೆ. ಸುತ್ತಮುತ್ತ ದೊರೆಯುವ ಪ್ರಾಕೃತಿಕ ಸಂಪನ್ಮೂಲಗಳನ್ನು ದೇಹದ ಆರೈಕೆ ಮಾಡುವುದರ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ~ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, `ಕಥೆ ಮತ್ತು ಕಾದಂಬರಿಯಷ್ಟೆ ಆಸಕ್ತಿದಾಯಕವಾದ ಆರೋಗ್ಯ ಸಾಹಿತ್ಯವನ್ನು ಓದುವುದರಿಂದ ವಾಸ್ತವವಾಗಿ ಆರೋಗ್ಯ ವೃದ್ಧಿ ಮಾಡಿಕೊಳ್ಳಲು ಸಾಧ್ಯವಿದೆ~ ಎಂದು ಹೇಳಿದರು. ಲೇಖಕಿ ಪ್ರೊ.ಕಮಲಾ ಹಂಪನಾ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT