ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನದಿ ಕಾವೇರಿಯ ಪಾವಿತ್ರ್ಯ ಕಾಪಾಡಿ

Last Updated 22 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಕುಶಾಲನಗರ: ಅಖಿಲ ಭಾರತ ಸನ್ಯಾಸಿ ಸಂಗಮ ತಂಡದ ಸಾಧುಗಳು ಜೀವನದಿ ಕಾವೇರಿಗೆ ಪೂಜೆ ಸಲ್ಲಿಸುವ ಮೂಲಕ ನದಿಯ ಪಾವಿತ್ರ್ಯತೆ ಕಾಪಾಡುವಂತೆ ಸಲಹೆ ನೀಡಿದರು.

ಶ್ರೀರಂಗಪಟ್ಟಣದ ಗಂಜಾಂನ ಆದಿಶಂಕರಮಠದ ಸ್ವಾಮಿ ಗಣೇಶ್ ಸ್ವರೂಪಾನಂದಗಿರಿ ಅವರ ನೇತತ್ವದಲ್ಲಿ ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ತೀರ್ಥಪೂಜೆ ಸಲ್ಲಿಸಿ, ಕಾವೇರಿ ನದಿ ಪಾತ್ರದ ಮೂಲಕ ಸಾಗಿ ಬಂದ ಸಾಧುಗಳಿಗೆ ಕುಶಾಲನಗರದಲ್ಲಿ ಕಾವೇರಿ ಪರಿಸರ ರಕ್ಷಣಾ ಬಳಗದ ವತಿಯಿಂದ ಅದ್ದೂರಿ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಯಿತು.

ಯಾತ್ರೆಯ ಸಂಯೋಜಕರಾದ ಸ್ವಾಮಿ ಗಣೇಶಸ್ವರೂಪನಂದಾಗಿರಿ ಮಾತನಾಡಿ, ತಲಕಾವೇರಿಯಿಂದ ಹರಿದು 800 ಕಿ.ಮೀ ದೂರದ ತನಕ ಹರಿಯುವ ಜೀವನದಿ ಕಾವೇರಿಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಅವಳಿ ಮಕ್ಕಳಿದ್ದಂತೆ. ಉಭಯ ರಾಜ್ಯಗಳ ನಡುವೆ ಉಂಟಾಗಿರುವ ನೀರಿನ ಸಮಸ್ಯೆಯನ್ನು ಒಗ್ಗಟ್ಟಿನಿಂದ ಬಗೆಹರಿಸಿಕೊಳ್ಳಿ ಎಂದರು.

ಕಾವೇರಿ ನದಿಗೆ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದ ನಂತರ ಸಾಧುಗಳ ತಂಡವನ್ನು  ಶ್ರೀರಂಗಪಟ್ಟಣ ಕಡೆಗೆ ಬೀಳ್ಕೊಡಲಾಯಿತು.

ಯಾತ್ರೆಯ ಕೊಡಗು ಜಿಲ್ಲಾ ಸಂಚಾಲಕರಾದ ಚಿ.ನಾ.ಸೋಮೇಶ್, ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಐ.ಎಂ.ಅಪ್ಪಯ್ಯ, ಉಪಾಧ್ಯಕ್ಷ ಎಂ.ಎಂ.ಬೋಪಯ್ಯ, ಹಂಸರಾಜ್,  ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖರಾದ ಚಂದ್ರಮೋಹನ್, ಬಬೀಂದ್ರ ಪ್ರಸಾದ್, ವನಿತಾ ಚಂದ್ರಮೋಹನ್, ವಿ.ಆರ್. ಶಿವಶಂಕರ್, ಟಿ.ಕೆ.ಸುಬ್ಬಯ್ಯ, ಡಿ.ಆರ್. ಸೋಮಶೇಖರ್, ಕೆ.ಆರ್. ಸುಬ್ರಮಣಿ, ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕಷ್ಣ, ವಾಸವಿ ಯುವ ಜನ ಸಂಘದ ಪ್ರಮುಖ ವೈಶಾಖ್, ಪ್ರವೀಣ್ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT