ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯದ ಬೊರ್ ಧಾಮ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದಟ್ಟಕಾಡಿನ ನಡುವೆ ತೊರೆಗಳ ನಿನಾದ. ಹೆಜ್ಜೆಹೆಜ್ಜೆಗೂ ಕಾಣಸಿಗುವ ವಿವಿಧ ಪ್ರಾಣಿಗಳು. ಧುತ್ತನೆ ಎದುರಾಗುವ ಕ್ರೂರ ಮೃಗಗಳು. ಇದು  ಮಹಾರಾಷ್ಟ್ರದ ಬೊರ್ ಧಾಮ. ವಾರ್ಧಾ ಜಿಲ್ಲೆಯ ಸೆಲು ತಾಲ್ಲೂಕಿಗೆ ಸೇರಿದ ಬೊರ್ ಧಾಮದಲ್ಲಿ ವನ್ಯಜೀವಿ ಸಂರಕ್ಷಣಾ ವಲಯ ಇದೆ.

1970ರಲ್ಲಿ ಈ ಕಾಡನ್ನು ರಕ್ಷಿತ ಅರಣ್ಯ ಎಂದು ಗುರುತಿಸಿ ಸರ್ಕಾರದ ಒಡೆತನಕ್ಕೆ ತೆಗೆದುಕೊಳ್ಳಲಾಯಿತು. ಇಲ್ಲಿ ಹರಿಯುವ ಬೊರ್ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿದೆ.
 
ಅದರ ಎದುರು ಸುಂದರ ಉದ್ಯಾನವನ ಇದೆ. ಅದನ್ನು ಪ್ರವಾಸಿಸ್ನೇಹಿಯಾಗಿ ರೂಪಿಸಲಾಗಿದ್ದು, ಸುತ್ತಮುತ್ತ ಇರುವ ರಕ್ಷಿತ ಅರಣ್ಯ ಪ್ರದೇಶಕ್ಕೂ ಪ್ರವಾಸಿಗರು ಭೇಟಿ ನೀಡಲು ಅನುವು ಮಾಡಿಕೊಡಲಾಗಿದೆ.

ಜಲಾಶಯ ನೋಡಿಕೊಂಡು, ಉದ್ಯಾನವನದಲ್ಲಿ ಸುತ್ತಿ, ಕಾಡಿನ ಸೌಂದರ್ಯವನ್ನು ನೋಡಲು ಹೋದವರಿಗೆ ಬೊಗಳುವ ಜಿಂಕೆಯ ದರ್ಶನವಾಗುತ್ತದೆ. ಈ ಕಾಡಿನಲ್ಲಿ ವಿಶೇಷವಾಗಿ ಕಾಣಸಿಗುವ ವಿಶೇಷ ಪ್ರಾಣಿ, ಈ ಬೊಗಳುವ ಜಿಂಕೆ. ಇದರೊಂದಿಗೆ ಚುಕ್ಕೆ ಜಿಂಕೆ, ನೀಲಗಾಯ್‌ಗಳು ಕೂಡ ಅಲ್ಲಿವೆ. ಚಿರತೆ, ಹುಲಿ, ಲೆಪಾರ್ಡ್, ಕಾಡು ನಾಯಿ, ಕಾಡು ಹಂದಿ, ಕಾಡು ಬೆಕ್ಕುಗಳಷ್ಟೇ ಅಲ್ಲದೇ ನವಿಲುಗಳ ಹಿಂಡೂ ಕಾಣಸಿಗುತ್ತದೆ.

ಮಳೆಗಾಲ ಹೊರತುಪಡಿಸಿ ಉಳಿದೆಲ್ಲಾ ಕಾಲದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸರ್ಕಾರಿ ವಸತಿ ಗೃಹಗಳೊಂದಿಗೆ ಖಾಸಗಿ ರೆಸಾರ್ಟ್‌ಗಳು  ಸಾಕಷ್ಟಿವೆ. ಇಲ್ಲಿಗೆ ನಾಗ್ಪುರ ಹತ್ತಿರದ ವಿಮಾನ ನಿಲ್ದಾಣ (80 ಕಿ.ಮೀ.). ವಾರ್ಧಾ ಹತ್ತಿರದ ರೈಲ್ವೆ ನಿಲ್ದಾಣ (35 ಕಿ.ಮೀ.).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT