ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ, 21, 22- ಶನಿವಾರ ಹಾಗೂ ಭಾನುವಾರದ ಕಾರ್ಯಕ್ರಮಗಳು

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಶನಿವಾರ ಹಾಗೂ ಭಾನುವಾರದ ಕಾರ್ಯಕ್ರಮಗಳು

ಸಿರಿಕಲಾ ಮೇಳ: ಪಾರ್ಥಸಾರಥಿ ಕಲಾಮಂದಿರ, ಕಾಶೀಮಠ, 18ನೇ ಅಡ್ಡರಸ್ತೆ, ಮಲ್ಲೇಶ್ವರ. ಶನಿವಾರ `ಕೃಷ್ಣಲೀಲೆ ಕಂಸವಧೆ~ ಯಕ್ಷಗಾನ ಪ್ರದರ್ಶನ. ಸಂಜೆ 5.
ಭಾನುವಾರ ಸಂಜೆ 5ಕ್ಕೆ ವರದಾಂಜನೇಯ ಸಭಾಂಗಣ, ಕೆಪಿಟಲ್ ಸ್ಕೂಲ್ ಹಿಂಭಾಗ, ಕೋಣನಕುಂಟೆಯಲ್ಲಿ `ದ್ರೌಪದಿ ಪ್ರತಾಪ~ ಯಕ್ಷಗಾನ ಪ್ರದರ್ಶನ.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ನಂ 6, ಎ.ಪಿ.ಕೆ. ರಸ್ತೆ, 2ನೇ ಬ್ಲಾಕ್, ತ್ಯಾಗರಾಜನಗರ. ಶನಿವಾರ ಹಾಗೂ ಭಾನುವಾರ ಡಾ. ಹೇಮಲತಾ ಅವರಿಂದ ಆತ್ಮಬೋಧ ಕುರಿತು ಪ್ರವಚನ. ಬೆಳಿಗ್ಗೆ 9.30.

ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಕುಚಲಾಂಬ ಸಾಂಸ್ಕೃತಿಕ ಮಂದಿರ, 9ನೇ ಬ್ಲಾಕ್ ಜಯನಗರ. ಶನಿವಾರ ಹಾಗೂ ಭಾನುವಾರ ಕಾಳಸರ್ಪದೋಷಹರ ಶಾಂತಿ ಹೋಮದ ಕಾರ್ಯಕ್ರಮಗಳು. ಸಂಜೆ 6.30.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಸುಂದರೇಶ್ವರ ಮೀನಾಕ್ಷಿ ದೇವಸ್ಥಾನ, ತಂಬುಚೆಟ್ಟಿಪಾಳ್ಯ, ಕೃಷ್ಣರಾಜಪುರಂ. ಶನಿವಾರ ಸ್ವಾಮಿ ಚಂದ್ರೇಶಾನಂದಜೀ ಅವರಿಂದ ಉಪನಿಷದ್ ಜ್ಞಾನಾಮೃತ ಭಾವಧಾರೆ. ಸಂಜೆ 5.30.

ಭಾನುವಾರ ಸ್ವಾಮಿ ಚಂದ್ರೇಶಾನಂದಜೀ ಅವರಿಂದ ಶ್ರೀರಾಮಕೃಷ್ಣ ಉಪದೇಶಾಮೃತ ಭಾವಧಾರೆ. ಸಂಜೆ 5.30.

ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಕ್ರಾಸ್, ಜೆ. ಪಿ. ನಗರ. ಶನಿವಾರ ಹಾಗೂ ಭಾನುವಾರ ಭಜನೆ, ಸಂಜೆ 6.15.

ಸತ್ಮಾತ್ಮತೀರ್ಥ ಶ್ರೀಪಾದಂಗಳವರ ಚಾತುರ್ಮಾಸ್ಯ ಸೇವಾ ಸಮಿತಿ: ಉತ್ತರಾದಿಮಠ. 17ನೇ ಚಾತುರ್ಮಾಸ್ಯ ಮಹೋತ್ಸವದಲ್ಲಿ ಶನಿವಾರ ಹಾಗೂ ಭಾನುವಾರ ಯುವಕರಿಗಾಗಿ ಸಂಧ್ಯಾವಂದನ ಕಾರ್ಯಾಗಾರ.

ಮಾರುತಿ ಭಕ್ತ ಮಂಡಳಿ ಟ್ರಸ್ಟ್: ಸಿ.ಎ.ನಂ1, 21ನೇ ಮುಖ್ಯರಸ್ತೆ, ವಿಜಯನಗರ. ಶ್ರಾವಣ ಶನಿವಾರ ಮತ್ತು ಗಣೇಶ ಚತುರ್ಥಿ ವಿಶೇಷ ಪೂಜೆ. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 9ರಿಂದ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ. ಸಂಜೆ 6. 30ಕ್ಕೆ ಫಲಪುಷ್ಪ ಅಲಂಕಾರ, ವಿಜಯನಗರದ ಮಾರುತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್: ನಂ. 49, ಅರಮನೆ ರಸ್ತೆ. ಶನಿವಾರ ಅನ್ನಪೂರ್ಣ ಗರಿಮೆಲ್ಲಾ ಅವರಿಂದ `ರಾಮ್ ಕಿಂಕರ್ ಬಾಜಿ ಅಂಡ್ ದಿ ಬಿಗಿನಿಂಗ್ ಆಫ್ ಮಾಡರ್ನ್ ಸ್ಕಲ್ಪ್ಚರ್ ಇನ್ ಇಂಡಿಯಾ~ ವಿಷಯ ಕುರಿತು ಉಪನ್ಯಾಸ. ಸಂಜೆ 4.30.
ಭಾನುವಾರ ಶಿವಾನಂದ ಬಸವಾಂತಪ್ಪ ಅವರಿಂದ `ಡ್ರಾವಥಾನ್~ (ಪೇಪರ್-ಪೆನ್ಸಿಲ್‌ಗಳ ಮ್ಯಾರಥಾನ್). ಬೆಳಿಗ್ಗೆ 10.

ಪಾತಾಳ ಪಂಚನಾಗೇಂದ್ರ ಸ್ವಾಮಿ ದೇವಸ್ಥಾನ ಸೇವಾ ಸಮಿತಿ: ಜೆ.ಸಿ. ನಗರ, ಮೈಕೋ ಬಡಾವಣೆ, ಮಹಾಲಕ್ಷ್ಮಿಪುರಂ, ಶಂಕರಮಠ. ಶನಿವಾರ ಬೆಳಿಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ವಾಸ್ತುಹೋಮ, ಕಂಕಣಪೂಜೆ, ಧ್ವಜಾರೋಹಣ,ಮಹಾಮಂಗಳಾರತಿ.
ಭಾನುವಾರ ಬೆಳಿಗ್ಗೆ 9ಕ್ಕೆ ಹಾಲಿನ ಕೊಡ ಮೆರವಣಿಗೆ, ಸ್ವಹಸ್ತದಿಂದ ಗಂಗಮ್ಮ ದೇವಿಗೆ ಹಾಲಿನ ಅಭಿಷೇಕ. ಸಂಜೆ 7ಕ್ಕೆ `ವನದೇವತೆ~ ಅಲಂಕಾರ.

ರಂಗಭೂಮಿ
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ
: ಸುಚಿತ್ರದ ನಾಣಿ ಅಂಗಳ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ. ಶನಿವಾರ ಹಾಗೂ ಭಾನುವಾರ ಅಭಿರುಚಿ ಚಂದ್ರು ನಿರ್ದೇಶನದ `ಕೊಡೆಗಳು~ ನಾಟಕ ಪ್ರದರ್ಶನ. ರಚನೆ- ಡಾ. ಚಂದ್ರಶೇಖರ ಪಾಟೀಲ. ಸಂಜೆ 7.30.
 

ಬನಶಂಕರಿ ದೇವಸ್ಥಾನ: ಕೆಂಪಣ್ಣ ಕ್ರಾಸ್, ದೊಡ್ಡಮಾವಳ್ಳಿ. ಅಮ್ಮನವರ 74ನೇ ವರ್ಷದ ಭೀಮನ ಅಮವಾಸ್ಯೆ ಮಹೋತ್ಸವ. ಶನಿವಾರ ಬೆಳಿಗ್ಗೆ 9.30ರಿಂದ ಪೂಜೆ ಹಾಗೂ ಮಹಾಮಂಗಳಾರತಿ. ಸಂಜೆ 7ರಿಂದ ಟಿ.ಎಂ. ದೇವಪ್ರಸಾದ್ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ.ಭಾನುವಾರ ಸಂಜೆ 7ಕ್ಕೆ ಆನಂದ್ ಹಾಗೂ ತಂಡದವರಿಂದ ಕರ್ನಾಟಕ ಸಂಗೀತ.

ಬಿಟಿಎಂ ಕಲ್ಚರಲ್ ಅಕಾಡೆಮಿ: ಶ್ರೀರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ಹಂತ, ಜೆ.ಪಿ. ನಗರ. ಶನಿವಾರ ಭಾಗ್ಯಲಕ್ಷ್ಮಿ ಚಂದ್ರಶೇಖರ್ ಅವರಿಂದ ವೀಣಾ ವಾದನ. ಎಂ.ಆರ್. ಸಾಯಿನಾಥ್ (ಮೃದಂಗ), ಎಂ.ಎ. ಕೃಷ್ಣಮೂರ್ತಿ (ಘಟ).

ಭಾನುವಾರ ಚೈತ್ರಾ ಬಿಲ್ವಂ ಅವರಿಂದ ಗಾಯನ. ಬಿ.ವಿಠಲ ರಂಗನ್ (ವಯಲಿನ್), ಆರ್.ಎಸ್.ಆರ್. ಶ್ರೀಕಾಂತ್ (ಮೃದಂಗ), ಭಾಗ್ಯಲಕ್ಷ್ಮಿ ಕೃಷ್ಣ (ಮೋರ್ಚಿಂಗ್). ಸಂಜೆ 5.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT