ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 6, 7ರಂದು ಕನ್ನಡ ಸಂಶೋಧನಾ ಕಮ್ಮಟ

Last Updated 11 ಜೂನ್ 2011, 6:05 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜುಲೈ 6 ಮತ್ತು 7ರಂದು ಕನ್ನಡ ಸಂಶೋಧನಾ ಕಮ್ಮಟ ನಡೆಯಲಿದೆ. ಕೊಡಗಿನ ಸಾಹಿತ್ಯ, ಇತಿಹಾಸ, ಜನಪದ ಮತ್ತಿತರ ವಿಷಯಗಳ ಕುರಿತು ಸಂಶೋಧನೆ ನಡೆಸಲು ಆಸಕ್ತಿ ಇರುವವರು ಈ ಕಮ್ಮಟದಲ್ಲಿ ಪಾಲ್ಗೊಳ್ಳಬಹುದೆಂದು ಪರಿಷತ್‌ನ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯುವ ಸಂಶೋಧನಾ ಕಮ್ಮಟ ದಲ್ಲಿ ಆರು ಅಧಿವೇಶನಗಳು ನಡೆಯಲಿವೆ ಎಂದರು. ಕೊಡಗಿನ ಸಾಹಿತ್ಯ, ಸಂಸ್ಕೃತಿ, ಜನಪದ ಕಲೆ, ಅರಸರ ಆಳ್ವಿಕೆ, ಭಾಷೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ಇಚ್ಛಿಸುವ ಸ್ನಾತಕೋತ್ತರ ಪದವೀಧರರು, ಎಂಪಿಎಲ್, ಪಿಎಚ್‌ಡಿ ಮಾಡಿದವರು ಮತ್ತು ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರು ಕಮ್ಮಟದಲ್ಲಿ ಭಾಗವಹಿಸಬಹುದಾಗಿದೆ.

ಎರಡು ದಿನಗಳ ಕಮ್ಮಟದಲ್ಲಿ ಸಂಶೋಧಕರಾದ ಹಂಪಿ ವಿಶ್ವ ವಿದ್ಯಾನಿಲಯದ ಡಾ.ಲಕ್ಷ್ಮಣ್ ತೆಲಗಾವಿ, ಡಾ. ಎಂ.ಜಿ.ನಾಗರಾಜ್ ಭಾಗವಹಿ ಸಲಿದ್ದಾರೆ. ಜನಪದ ವಿದ್ವಾಂಸ ಹಿರಿಯಣ್ಣ, ಡಾ. ಎಟ್ಟಿರ ಬಿದ್ದಪ್ಪ, ಬುಡಕಟ್ಟು ಅಧ್ಯಯನ ಶೀಲ ವ್ಯಕ್ತಿ ಪಿ.ಎನ್.ಹರೀಶ್ ಸೇರಿದಂತೆ ಎಂಟು ಮಂದಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಸಂವಾದಕಾರರಾಗಿ ಉಪನ್ಯಾಸಕ ಕಾಳೇಗೌಡ ನಾಗವಾರ ಮತ್ತು ಸಾಹಿತಿ ಪ್ರಭಾಕರ ಶಿಶಿಲ ಉಪಸ್ಥಿತರಿರುವರು. ಇದೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಸಂಶೋಧನ ಕಮ್ಮಟ ನಡೆಯುತ್ತಿದ್ದು ಜಿಲ್ಲೆಯ ಶಿಬಿರಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಟಿ.ಪಿ.ರಮೇಶ್ ತಿಳಿಸಿದರು.

2010-11ನೇ ಸಾಲಿನಲ್ಲಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ನಡೆಸದೆ ಇರುವುದರಿಂದ ಪ್ರಸ್ತುತ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಸಮ್ಮೇಳನವನ್ನು ನಡೆಸಲಾಗುವುದು ಎಂದು ತಿಳಿಸಿದರು. ಪ್ರತಿ ತಾಲ್ಲೂಕಿಗೆ ಸಮ್ಮೇಳನ ನಡೆಸಲು ತಲಾ ರೂ.50,000- ಗಳನ್ನು ನೀಡ ಲಾಗುತ್ತಿದೆ ಎಂದು ಹೇಳಿದರು. ಜುಲೈ 6 ಮತ್ತು 7ರಂದು ನಡೆಯುವ ಕನ್ನಡ ಸಂಶೋಧನಾ ಕಮ್ಮಟದಲ್ಲಿ ಭಾಗವಹಿ ಸುವವರು ಜೂನ್ 20ರ ಒಳಗೆ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೋಟೆ ಆವರಣ, ಮಡಿಕೇರಿ ಇಲ್ಲಿಗೆ ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್‌ಗೌರವ ಕಾರ್ಯದರ್ಶಿ ಬಿ.ಎ. ಷಂಶುದ್ದೀನ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯೂ ಮತ್ತು ಕಾರ್ಯದರ್ಶಿ ಭಾರತಿ ರಮೇಶ್ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT