ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ಗೆ `ಆವಿಷ್ಕಾರ ನಿಧಿ' ಅಸ್ತಿತ್ವಕ್ಕೆ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಪ್ರಸ್ತಾವಿತ ರೂ 5,500 ಕೋಟಿ ಮೊತ್ತದ `ಸಮಗ್ರ ಆವಿಷ್ಕಾರ ನಿಧಿ' ಜೂನ್ ವೇಳೆಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರದ `ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ' (ಎಂಎಸ್‌ಎಂಇ) ಸಚಿವಾಲಯ ಹೇಳಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ಪ್ರಮಾಣದ ಉದ್ಯಮ ಸಂಸ್ಥೆಗಳನ್ನು `ಆವಿಷ್ಕಾರ ನಿಧಿ' ಮೂಲಕ ಪ್ರೋತ್ಸಾಹಿಸಲಾಗುವುದು. ಇಂತಹ ಘಟಕಗಳಿಗೆ ಬೇಕಿರುವ ಆರ್ಥಿಕ ನೆರವು ನೀಡಲಾಗುವುದು. ಮುಖ್ಯವಾಗಿ ಉದ್ಯೋಗಾವಕಾಶ ಸೃಷ್ಟಿ, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಪ್ರಗತಿ ಇದರ ಮುಖ್ಯ ಉದ್ದೇಶ. ಈ ಪ್ರಸ್ತಾವವನ್ನು ಇನ್ನೆರಡು ದಿನಗಳಲ್ಲಿ ಸಂಪುಟಕ್ಕೆ ಕಳುಹಿಸಲಾಗುತ್ತದೆ ಎಂದು `ಎಂಎಸ್‌ಎಂಇ' ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಆವಿಷ್ಕಾರ ಮಂಡಳಿಯ ಸಹಭಾಗಿತ್ವದಲ್ಲಿ `ಎಂಎಸ್‌ಎಂಇ' ಸಚಿವಾಲಯ ಈ ವಿಶೇಷ ನಿಧಿಯನ್ನು ಸ್ಥಾಪಿಸಲಿದೆ. ಇದಕ್ಕೆ ಬೇಕಿರುವ ಶೇ  20ರಷ್ಟು ಮೂಲಧನವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಉಳಿದ ಮೊತ್ತವನ್ನು ಬ್ಯಾಂಕುಗಳು, ಮತ್ತಿತರ ಹಣಕಾಸು ಸಂಸ್ಥೆಗಳಿಂದ ಸಂಗ್ರಹಿಸಲಾಗುತ್ತದೆ.
ಸದ್ಯ ದೇಶದಲ್ಲಿ 2.60 ಕೋಟಿ  `ಎಂಎಸ್‌ಎಂಇ' ಘಟಕಗಳಿದ್ದು 6 ಕೋಟಿ ಜನರಿಗೆ ಉದ್ಯೋಗ ಒದಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT