ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ನಲ್ಲಿ ರೈಲು ಸಂಚಾರ ಆರಂಭ

Last Updated 1 ನವೆಂಬರ್ 2011, 10:35 IST
ಅಕ್ಷರ ಗಾತ್ರ

ಶಿಡಘ್ಲಟ್ಟ: ಜೂನ್ 2012ರ ವೇಳೆಗೆ ಚಿಕ್ಕಬಳ್ಳಾಪುರ- ಚಿಂತಾಮಣಿ ನಡುವೆ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಶಾಸಕ ವಿ.ಮುನಿಯಪ್ಪ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಪಟ್ಟಣ ದಲ್ಲಿ ನಡೆಯುತ್ತಿರುವ ರೈಲ್ವೆ ನಿಲ್ದಾಣ, ಅಂಡರ್‌ಪಾಸ್ ಸೇರಿದಂತೆ ಮತ್ತಿತರರ ಕಾಮಗಾರಿಗಳನ್ನು ಈಚೆಗೆ ಪರಿಶೀಲಿಸಿ ಮಾತನಾಡಿ, ಚಿಕ್ಕಬಳ್ಳಾಪುರ- ಚಿಂತಾಮಣಿ ಮಾರ್ಗದಲ್ಲಿ ಬರುವ ಬಹುತೇಕ ಕೆಳಸೇತವೆಗಳ ಕಾಮಗಾರಿ ಮುಗಿದಿದ್ದು, ಜೂನ್ ವೇಳೆಗೆ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದರು.

ಕೊತ್ತನೂರು ಹಾಗೂ ತಲದುಮ್ಮನ ಹಳ್ಳಿ ಬಳಿ ನಿರ್ಮಿಸಲು ಉದ್ದೆೀಶಿಸಿದ್ದ ಕೆಳಸೇತುವೆ ನಿರ್ಮಾಣವನ್ನು ತಾಂತ್ರಿಕ ಕಾರಣಗಳಿಗೆ ಕೈಬಿಡಲು ಅಧಿಕಾರಿಗಳು ಶಿಪಾರಸು ಮಾಡಿದ್ದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಅಲ್ಲಿ ಅಗತ್ಯವಿರುವ ಭೂಮಿ ಒದಗಿಸುವ ಜೊತೆಗೆ ಎಲ್ಲ ರೀತಿಯ ನೆರವು ನೀಡುವು ದಾಗಿ ಹೇಳಿ ಕಾಮಗಾರಿ ಮುಂದುವರೆ ಸಲು ಸೂಚಿಸಿದರು.

ಮಾರ್ಗ ಮಧ್ಯೆ ಸಚಿವರನ್ನು ತಡೆದ ವೀರಾಪುರ ಗ್ರಾಮಸ್ಥರು, ಗ್ರಾಮದ ಬಳಿ ರೈಲ್ವೆ ಹಳಿ ಹಾದುಹೋಗಲಿದ್ದು ಗ್ರಾಮದ ಹೊರವಲಯದಲ್ಲಿರುವ ಹೊಸಬಡಾವಣೆ, ಗವಿಗಂಗಾಧರೇಶ್ವರ ದೇವಾಲಯ ಸೇರಿದಂತೆ ಹೊಲ ಗದ್ದೆಗಳಿಗೆ ಹೋಗುವ ರಸ್ತೆ ಮುಚ್ಚಿ ಹೋಗಲಿದೆ. ಬಂಡಿ, ದ್ವಿಚಕ್ರ ವಾಹನ ಗಳು ಹಾದು ಹೋಗುವಷ್ಟು ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಎಲ್.ಭೀಮಾ ನಾಯ್ಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎನ್.ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್. ಎಂ.ನಾರಾಯಣಸ್ವಾಮಿ, ಕಂಬದಹಳ್ಳಿ ಸತೀಶ್, ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸುಬ್ರ ಮಣಿ, ಪುರಸಭೆ ಸದಸ್ಯ ನಾರಾಯಣ ಸ್ವಾಮಿ, ಮುಖಂಡರಾದ ಮುನಿ ಕೃಷ್ಣಪ್ಪ, ಜಗ್ಗಪ್ಪ, ಅಪ್ಪಿರೆಡ್ಡಿ, ಅಶ್ವತ್ಥ ನಾರಾಯಣರೆಡ್ಡಿ, ಎನ್.ಮುನಿಯಪ್ಪ, ನಾಗರಾಜ್, ಟಿ.ಕೆ.ನಟರಾಜ್, ಗುಡಿಹಳ್ಳಿ ನಾರಾಯಣಸ್ವಾಮಿ, ಬಳೆ ರಘು, ಎಲ್.ಮದುಸೂಧನ್, ರೈಲ್ವೆ ಎಂಜಿನಿಯರ್‌ಗಳಾದ ಮುರುಳಿ, ಗಣೇಶ್, ಗುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT