ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ರಾಜ್ಯಾಧ್ಯಕ್ಷರು: ಇಂದು ತೀರ್ಮಾನ

Last Updated 10 ಸೆಪ್ಟೆಂಬರ್ 2013, 19:40 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ ಕುರಿತು ಬುಧವಾರ ನಡೆಯುವ ಪಕ್ಷದ ಪ್ರಮುಖರ ಸಭೆಯಲ್ಲಿ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ.

ಪ್ರಮುಖ ತೀಮಾರ್ನಗಳನ್ನು ತೆಗೆದು­ಕೊಳ್ಳಲು ಕೋರ್‌ ಕಮಿಟಿ (ಪ್ರಮುಖರ ಸಮಿತಿ) ಅಗತ್ಯ ಇದ್ದು, ಅದರ ರಚನೆಗೂ ಈ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಮೂಲಗಳು ತಿಳಿಸಿವೆ.   ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.­ದೇವೇಗೌಡ ಅವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಕೋರ್‌ ಕಮಿಟಿ ರಚನೆಯಾಗಲಿದೆ. ಬುಧವಾರವೇ ಹೊಸ ಅಧ್ಯಕ್ಷರ ನೇಮಕ ಆಗಬಹುದು ಎನ್ನಲಾಗಿದೆ.

ಕೋರ್‌ ಕಮಿಟಿ ರಚನೆಗೆ ಸಂಬಂಧಿ­ಸಿದಂತೆ ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯ ಅವರು 50 ಜನ ಪ್ರಮುಖರ ಪಟಿ್ಟ­ಯೊಂದನ್ನು ನೀಡಿದ್ದಾರೆ. ಅದರಲ್ಲಿ ಎಲ್ಲ ಜಾತಿ, ಪ್ರದೇಶ ವಾರು ಮುಖಂಡರ ಹೆಸರಿದೆ.  ಆ ಪಟಿ್ಟಯನ್ನು ಪರಿಶೀಲಿಸಿದ ನಂತರ 15ಕ್ಕೆ ಸೀಮಿತಗೊಳಿಸಿ ಕೋರ್‌ ಕಮಿಟಿ ರಚಿಸಲಾಗುತ್ತದೆ. ಕಮಿಟಿ ಸಭೆಯಲ್ಲೇ ಅಧ್ಯಕ್ಷರ ಆಯೆ್ಕಯಾ­ಗ­ಬಹುದು. ಇಲ್ಲವೇ ಅಧ್ಯಕ್ಷರ ಆಯೆ್ಕ ಅಧಿ­ಕಾರವನ್ನು ದೇವೇಗೌಡರಿಗೆ ನೀಡ­ಬಹುದು ಎಂದು ಮೂಲಗಳು ತಿಳಿಸಿವೆ.

ಮಾಜಿ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ, ಎ.ಕೃಷ್ಣಪ್ಪ, ಪಿ.ಜಿ.­ಆರ್‌.ಸಿಂಧ್ಯ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಮುಂಬರುವ ಲೋಕ
ಸಭಾ ಚುನಾ­ವಣೆ­ಯಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲುವ ಉದ್ದೇಶವನ್ನು ಜೆಡಿಎಸ್‌ ಹೊಂದಿದ್ದು, ಕೋರ್‌ ಕಮಿಟಿ ಮುಖಂ­ಡರಿಗೆ ತಲಾ ಒಂದು ಲೋಕ­ಸಭಾ ಕ್ಷೇತ್ರಗಳ ಉಸು್ತವಾರಿ ನೀಡಲಾ­ಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷ ಸಂಘಟನೆ ಉದ್ದೇಶದಿಂದ ದೇವೇ ಗೌಡ ಅವರು ಮಂಗಳವಾರ ಅಲ್ಪ ಸಂಖ್ಯಾತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT