ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಯು ನಡೆ ಹಳ್ಳಿಗಳ ಕಡೆ-ನಾಡಗೌಡ

Last Updated 23 ಏಪ್ರಿಲ್ 2013, 8:15 IST
ಅಕ್ಷರ ಗಾತ್ರ

ಪಾವಗಡ: `ಜೆಡಿಯು ಪಕ್ಷದ ನಡೆ ಹಳ್ಳಿಗಳ ಕಡೆ' ಎಂಬ ಘೋಷವಾಕ್ಯದೊಂದಿಗೆ ಪಕ್ಷ ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುತ್ತದೆ ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಡಾ.ನಾಡಗೌಡ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ಪಕ್ಷದ ಚುನಾವಣಾ ಪ್ರಚಾರ ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಕೃಷ್ಣ ಹೆಗ್ಡೆ ಅವರು ರಾಜ್ಯದಲ್ಲಿ ಆಡಳಿತ ನಡೆಸಿದ ಸಂದರ್ಭ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದರು. ಅವರ ಸೇವೆ ಸ್ಮರಿಸಿ ತಮ್ಮ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.

ಹಣ, ಹೆಂಡ, ಜಾತಿ ರಾಜಕೀಯದ ವಿರುದ್ಧ ಜೆಡಿಯು ಹೋರಾಟ ನಡೆಸುತ್ತದೆ. ಕೇವಲ ಹಣವಂತರು ಮಾತ್ರ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂಬುದು ಶುದ್ಧ ಸುಳ್ಳು. ತಮ್ಮ ಪಕ್ಷದಿಂದ ರಾಜ್ಯದ ಎಲ್ಲೆಡೆ 127 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಯುವಕರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜೆಡಿಯು ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.

ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆಜಿಎಲ್ ರವಿ, ಮುಖಂಡ ನಟರಾಜು, ಜಯದೇವ್, ಪಂಚಾಕ್ಷರಯ್ಯ, ಅಭ್ಯರ್ಥಿ ಗೋಪಾಲ, ತಾಲ್ಲೂಕು ಅಧ್ಯಕ್ಷ ಗೋಪಾಲ ಇತರರು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಮತ ಚಲಾಯಿಸಿ
ಮಧುಗಿರಿ: ಸ್ಥಳೀಯರಲ್ಲದವರಿಗೆ ಮತ ಚಲಾಯಿಸಿದ್ದರ ಫಲವಾಗಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ಸ್ಥಳೀಯ ವ್ಯಕ್ತಿಗೆ ಮತ ಚಲಾಯಿಸಿ ಎಂದು ರಾಜ್ಯ ಸಂಯುಕ್ತ ಜನತಾದಳದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಮನವಿ ಮಾಡಿದರು.

ಸೋಮವಾರ ಸಂಯುಕ್ತ ಜನತಾದಳದ ಅಭ್ಯರ್ಥಿ ಹೊಸ ಇಟಕಲೋಟಿಯ ಎಲ್.ರಾಮಾಂಜಯ್ಯ ಪರವಾಗಿ ಮತ ಪ್ರಚಾರವನ್ನು ಮಿಡಿಗೇಶಿ ಗ್ರಾಮದಲ್ಲಿ ನಡೆಸಿ ಮಾತನಾಡಿದ ಅವರು, ಈವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಜನತೆಯನ್ನು ನಿರ್ಲಕ್ಷಿಸಿ, ಸ್ವಾರ್ಥ ರಾಜಕಾರಣಿಗಳಾಗಿ ಮೆರೆದಿದ್ದಾರೆಂದು ಆರೋಪಿಸಿದರು. ಸಂಯುಕ್ತ ಜನತಾದಳ ಸ್ಥಳೀಯ ಅಭ್ಯರ್ಥಿ ಗೆಲ್ಲಿಸುವಂತೆ ವಿನಂತಿಸಿದರು.
ಅಭ್ಯರ್ಥಿ ಎಲ್.ರಾಮಾಂಜಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT