ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆನರ್ಮ್ ಜಾರಿ:ಸಚಿವ ಜಗದೀಶ ಶೆಟ್ಟರ ವಿಶ್ವಾಸ

Last Updated 6 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಕೇಂದ್ರ ಸರ್ಕಾರದ `ಜವಹರ ಲಾಲ್ ನೆಹರು ನಗರ ಪುನರುಜ್ಜೀವನ ಯೋಜನೆ~ (ಜೆನರ್ಮ್)ಯನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿಕೊಳ್ಳ ಲಾಗಿದೆ. ಇದಕ್ಕೆ ಅನುಮೋದನೆ ದೊರೆತರೆ ಅವಳಿ ನಗರವನ್ನು ಇಡೀ ದೇಶದಲ್ಲಿಯೇ ಮಾದರಿ ನಗರವನ್ನಾಗಿ ಮಾಡಲಾಗುವುದು~ ಎಂದು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಜಗದೀಶ ಶೆಟ್ಟರ ನುಡಿದರು.

ನಗರದ ವಾರ್ಡ್ ನಂ.52ರಲ್ಲಿ ರೂ 1.25 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾ ಡಿದ ಅವರು, `ಜೆನರ್ಮ್ ವ್ಯಾಪ್ತಿಗೆ ಅವಳಿ ನಗರವನ್ನು ತರಬೇಕೆಂದು ಹಿಂದಿನ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಜೈಪಾಲ ರೆಡ್ಡಿ ಹಾಗೂ ಪ್ರಸ್ತುತ ಆ ಖಾತೆ ನಿರ್ವಹಿಸುತ್ತಿರುವ ಕಮಲ್‌ನಾಥ್ ಅವರನ್ನು ಸಂಸದ ಪ್ರಹ್ಲಾದ ಜೋಶಿ ಭೇಟಿಯಾಗಿ ಮನವಿ ಮಾಡಿದ್ದಾರೆ. ಬರುವ ಬಜೆಟ್‌ನಲ್ಲಿಯೇ ಅವಳಿನಗರ ವನ್ನು ಜೆನರ್ಮ್ ವ್ಯಾಪ್ತಿಯಲ್ಲಿ ತಂದು ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ~ ಎಂದು ಹೇಳಿದರು.

`ಈಗಾಗಲೇ ರಾಜ್ಯ ಸರ್ಕಾರ ನೀಡಿದ 200 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಳಸಿಕೊಂಡು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳ ಲಾಗಿದೆ. ಕೆರೆಗಳ ಅಭಿವೃದ್ಧಿ, ಉದ್ಯಾನ ವನ ನಿರ್ಮಾಣ, ಮುಖ್ಯ ರಸ್ತೆ, ಒಳರಸ್ತೆ ಗಳ ನಿರ್ಮಾಣ ಕಾಮಗಾರಿ ಕೈಗೊಳ್ಳ ಲಾಗಿದೆ. ಜನರು ಯಾವುದನ್ನೂ ಕೇಳಬಾ ರದ ರೀತಿಯಲ್ಲಿ ವಾರ್ಡ್‌ಗಳಲ್ಲಿ ಅಭಿ ವೃದ್ಧಿ ಕಾರ್ಯಗಳು ನಡೆಯುತ್ತಿವೆ~ ಎಂದು ತಿಳಿಸಿದರು.

ವಿಶ್ವಬ್ಯಾಂಕ್‌ಗೆ ಪ್ರಸ್ತಾವನೆ: ಹು-ಧಾ ಅವಳಿ ನಗರ, ಗುಲ್ಬರ್ಗ ಹಾಗೂ ಬೆಳ ಗಾವಿ ನಗರಗಳಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಲ ನೀಡುವಂತೆ ಕೋರಿ ವಿಶ್ವಬ್ಯಾಂಕ್‌ಗೆ ಪ್ರಸ್ತಾವನೆ ಸಲ್ಲಿಸ ಲಾಗಿದೆ ಎಂದು ಅವರು ನುಡಿದರು.

ಪ್ರಹ್ಲಾದ ಜೋಶಿ ಮಾತನಾಡಿ, `ಮಹಾನಗರ ಪಾಲಿಕೆಯು ಇತ್ತೀಚೆಗೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ ಕ್ರಮಕ್ಕೆ ಹಲವರು ವಿರೋಧ ವ್ಯಕ್ತಪಡಿ ಸಿದ್ದಾರೆ. ಆದರೆ ಕರ ಹೆಚ್ಚಳ ಮಾಡುವು ದನ್ನು ಕೇಂದ್ರ ಸರ್ಕಾರವೇ ಕಡ್ಡಾಯ ಮಾಡಿದೆ.
 
ಅಲ್ಲದೇ ಮೊದಲು ಪ್ರತಿ ವಾರ್ಡ್‌ನಲ್ಲಿ ಕೆಲವೇ ಲಕ್ಷ ರೂಪಾಯಿ ಗಳ ಕಾಮಗಾರಿ ನಡೆಯುತ್ತಿದ್ದವು. ಆದರೆ ಈಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ಸಹಜವಾಗಿ ಯೇ ಪಾಲಿಕೆ ತೆರಿಗೆ ಪ್ರಮಾಣ ಹೆಚ್ಚಿಸಿದೆ. ಪ್ರತಿದಿನವೂ ಸರ್ಕಾರ ಹಣ ನೀಡಲು ಸಾಧ್ಯವಿಲ್ಲ.
 
ಪಾಲಿಕೆಯೇ ಸಂಪನ್ಮೂಲ ಗಳನ್ನು ಸೃಷ್ಟಿ ಮಾಡಿಕೊಳ್ಳಬೇಕಿದ್ದು, ಈ ಹೆಚ್ಚಳ ಸ್ವಾಭಾವಿಕವಾದುದು~ ಎಂದು ಪಾಲಿಕೆ ಕ್ರಮವನ್ನು ಬಲವಾಗಿ ಸಮರ್ಥಿ ಸಿಕೊಂಡರು. `ಒಂದು ವೇಳೆ ಪ್ರತಿಭಟನೆ ಮಾಡಲೇ ಬೇಕಾಗಿದ್ದಲ್ಲಿ, ಪಾಲಿಕೆಯ ಆಡಳಿತದ ವಿರುದ್ಧ ಮಾಡುವ ಬದಲು ಕೇಂದ್ರ ಸರ್ಕಾರದ ವಿರುದ್ಧ ಮಾಡ ಬೇಕು~ ಎಂದು ಹೇಳಿದರು.

ಶಾಸಕ ವೀರಭದ್ರಪ್ಪ ಹಾಲಹರವಿ, ಮೇಯರ್ ಪೂರ್ಣಾ ಪಾಟೀಲ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಸುಧೀರ ಸರಾಫ, ಸತೀಶ ಶೇಜವಾಡಕರ, ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಂಕ್ರಪ್ಪ ಛಬ್ಬಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT