ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಮ್‌ಫೀಲ್ಡ್ಸ್ ಆಭರಣ ಪ್ರದರ್ಶನ

Last Updated 16 ಏಪ್ರಿಲ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ಜೆಮ್‌ಫೀಲ್ಡ್ಸ್ ಕಂಪೆನಿಯು ವಿವಿಧ ಬಣ್ಣದ ಹರಳುಗಳಿಂದ ತಯಾರಿಸಿದ ಆಭರಣಗಳ ಪ್ರದರ್ಶನವನ್ನು ಮಂಗಳವಾರ ನಗರದಲ್ಲಿ ಆಯೋಜಿಸಿತ್ತು. ರೂಪದರ್ಶಿಗಳು ವಿವಿಧ ವಿನ್ಯಾಸದ ಪಚ್ಚೆ ಮತ್ತು ಹರಳುಗಳಿಂದ ತಯಾರಿಸಿದ ಆಭರಣಗಳನ್ನು ಧರಿಸಿ, ಪ್ರದರ್ಶಿಸಿದರು.

ಪ್ರದರ್ಶನದ ಬಗ್ಗೆ ವಿವರ ನೀಡಿದ ಜೆಮ್‌ಫೀಲ್ಡ್ಸ್ ಪ್ರಾದೇಶಿಕ ಮಾರುಕಟ್ಟೆ ನಿರ್ದೇಶಕ ರೂಪಕ್ ಸೇನ್, `ಜೆಮ್‌ಫೀಲ್ಡ್ಸ್ ಕಂಪೆನಿಯು ವಿಶಿಷ್ಟ ಬಣ್ಣದ ಹರಳು ಮತ್ತು ಪಚ್ಚೆಗಳಿಂದ ಆಭರಣಗಳನ್ನು ತಯಾರಿಸುತ್ತಿದೆ. ಪಚ್ಚೆಗಳು ವಜ್ರಗಳಿಗಿಂತ ಅಪರೂಪವಾಗಿವೆ. ಇದರಿಂದ ಭಾರತದಲ್ಲಿ ಬಣ್ಣದ ಹರಳು ಮತ್ತು ಪಚ್ಚೆಗಳ ಬೇಡಿಕೆ ನಾಲ್ಕು ವರ್ಷಗಳಲ್ಲಿ ವರ್ಷಕ್ಕೆ ಶೇ 50 ರಷ್ಟು ಹೆಚ್ಚಾಗಿದೆ' ಎಂದು ವಿವರಿಸಿದರು.

`ಭಾರತದಲ್ಲಿ ಇಂದು ಪಚ್ಚೆ, ಹರಳುಗಳಿಂದ ತಯಾರಿಸಿದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತೀಯ ಮಾರುಕಟ್ಟೆಗೆ ನೀಲಮಣಿಗಳ ಆಭರಣಗಳನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸಲಾಗುವುದು' ಎಂದರು. `ಕಂಪೆನಿಯು ವಿಶ್ವದ ಮುಂಚೂಣಿಯ ಅಂತರರಾಷ್ಟ್ರೀಯ ವಿನ್ಯಾಸಕರೊಂದಿಗೆ ಸಹಯೋಗವನ್ನು ಹೊಂದಿದೆ. ಈ ಸಹಯೋಗದಿಂದ ಹರಳುಗಳ ಸೌಂದರ್ಯ, ಅದರ ಛಾಯೆಗಳು, ಆಕಾರಗಳು ಗಾತ್ರಗಳು ಕೂಡ ಬದಲಾಗಲಿವೆ.

ನಿಖರವಾಗಿ ಕತ್ತರಿಸಿ, ಕಲ್ಲುಸಕ್ಕರೆಯಂತೆ ಕಾಣುವ ಹೊಳಪಿನ ಝಾಂಬಿಯಾದ ಹಸುರು ಪಚ್ಚೆಯಿಂದ, ಮೊಝಾಂಬಿಕ್‌ನ ಪಚ್ಚೆಗಳಿಂದ ಆಭರಣಗಳನ್ನು ತಯಾರಿಸಲಾಗಿದೆ' ಎಂದು ಹೇಳಿದರು.

`ಝಾಂಬಿಯಾದಲ್ಲಿ ಪಚ್ಚೆ ಮತ್ತು ಪದ್ಮರಾಗಗಳ ಕಾರ್ಯ ನಿರ್ವಹಣೆಯ ನಂತರ ಕಂಪೆನಿಯು ಈಗ ನೀಲಮಣಿಗಳನ್ನು ಮೊಝಾಂಬಿಕ್‌ನಲ್ಲಿ ಸಂಸ್ಕರಣೆ ಮಾಡುತ್ತಿದೆ. ಮೊಝಾಂಬಿಕ್ ಜಾಗತಿಕವಾಗಿ ಅತಿದೊಡ್ಡ ಪಚ್ಚೆ ಉತ್ಪಾದನೆ ಮತ್ತು ಪೂರೈಕೆ ಮಾಡುವ ದೇಶವಾಗಿದೆ' ಎಂದರು.

`ಹಾಲಿವುಡ್ ನಟಿ ಮಿಲಾ ಕುನೀಸ್ ಜಾಗತಿಕ ರಾಯಭಾರಿ ಆಗಿದ್ದಾರೆ. ವಿಶ್ವದ ಅತ್ಯಂತ ಮುಂಚೂಣಿಯ ಬಣ್ಣದ ಹರಳುಗಳ ಉತ್ಪಾದಕವಾಗಿರುವ ಕಂಪೆನಿಯು ಝಾಂಬಿಯಾ, ಮೊಝಾಂಬಿಕ್, ಮಡಗಾಸ್ಕರ್, ಭಾರತ, ಬ್ರಿಟನ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕಾರ್ಯ ನಿರ್ವಹಣೆಯನ್ನು ಹೊಂದಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT