ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಪಿ ಕುರಿತ ಊಹಾಪೋಹಗಳನ್ನು ನಿಲ್ಲಿಸಿ

Last Updated 19 ಏಪ್ರಿಲ್ 2013, 9:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಹಗರಣಕ್ಕೆ ಸಂಬಂಧಿಸಿದ ಜೆಪಿಸಿ ವರದಿಯ ಕರಡಿನ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಹಾಗೂ ಇತರೆ ವಿರೋಧಪಕ್ಷಗಳಿಗೆ ಶುಕ್ರವಾರ ಮನವಿ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಮಾಧ್ಯಮಗಳು ಸೇರಿದಂತೆ ವಿರೋಧ ಪಕ್ಷಗಳು ಇನ್ನೂ ಅಂತಿಮಗೊಳ್ಳದ ವರದಿ ಕುರಿತಂತೆ ಊಹಾಪೋಹಗಳನ್ನು ಹರಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.

`ಜೆಸಿಪಿ ವರದಿ ಅಂತಿಮಗೊಳಿಸಲು ಇನ್ನು ಕಾಲಾವಕಾಶವಿದೆ. ಒಂದೊಮ್ಮೆ  ಜೆಸಿಪಿ ಸಭೆ ಸೇರಿ ವರದಿ ಅಂತಿಮಗೊಳಿಸಿದರೆ ಆಗ ಅದನ್ನು ಸಂಸತ್‌ನಲ್ಲಿ ಮಂಡಿಸಬೇಕು. ಆಗ ನಾವೆಲ್ಲರೂ ಅವರು ವರದಿಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಕಾರಣವಾದ ಸಂಗತಿಗಳನ್ನು ತಿಳಿಯಲು ವರದಿ ಕುರಿತಂತೆ ಚರ್ಚೆ ನಡೆಸಬೇಕು. ಈ ಕ್ಷಣದಲ್ಲಿ ನಮಗೇನು ಗೊತ್ತಿಲ್ಲ'ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ತಿಳಿಸಿದರು.

`ವರದಿ ಕುರಿತಂತೆ ಸಂಸತ್‌ನ ಉಭಯ ಸದನಗಳಲ್ಲಿ ಹಾಗೂ ಸಂಸತ್‌ನ ಹೊರಗೆ ಸರಿಯಾದ ಚರ್ಚೆ ನಡೆಯುವವರೆಗೆ ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಊಹಾಪೋಹಗಳನ್ನು ನಿಲ್ಲಿಸಿ ಸಂಯಮದಿಂದ ಕಾಯಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ' ಎಂದು ಸಿಬಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT