ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಜವಾನ್ ಜೈ ಕಿಸಾನ್

Last Updated 16 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ನಂತರ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಯಾವುದಾದರೂ ಹುದ್ದೆಗೆ ಸೇರಿಕೊಳ್ಳುತ್ತಾರೆ. ಆದರೆ ಬೇಸಾಯದಲ್ಲಿ ತೊಡಗಿಕೊಳ್ಳುವರು ಬಹಳ ವಿರಳ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ನಿವಾಸಿ ಕುತ್ಯಾಳ ಭಾಸ್ಕರ ಗೌಡರು ಇದಕ್ಕೆ ಅಪವಾದ.

 ಪಿ.ಯು.ಸಿ,ವರೆಗೆ ಓದಿರುವ ಗೌಡರು 1980ರಲ್ಲಿ ಭಾರತಿಯ ಸೇನೆಗೆ ಸೇರಿದರು. ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಕೌಟಂಬಿಕ ಸಮಸ್ಯೆಗಳ ಕಾರಣದಿಂದ ಸ್ವಯಂ ನಿವೃತ್ತಿ ಪಡೆದರು. ಕೈಯಲ್ಲಿ ಬಂದೂಕು ಹಿಡಿದು ದೇಶದ ರಕ್ಷಣೆ ಮಾಡಿದ್ದ ಗೌಡರು ಈಗ ಅದೇ ಕೈಗಳಲ್ಲಿ ಗುದ್ದಲಿ, ಸೆಲಿಕೆ ಹಿಡಿದು ತೋಟದಲ್ಲಿ ದುಡಿಯುತ್ತ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರಗತಿ ಪರ ರೈತ ಎಂಬ ಹೆಸರನ್ನೂ ಪಡೆದಿದ್ದಾರೆ.

ಗೌಡರು ಸುಳ್ಯ ಸಮೀಪದ ಸೋಣಂಗೇರಿಯವರು. ಅವರು ಬೆಳ್ಳಾರೆ ಗ್ರಾಮದಲ್ಲಿ ಐದು ಎಕರೆ ಒಣ ಭೂಮಿಯನ್ನು ಖರೀದಿಸಿದರು. ಅದನ್ನು ತೋಟವಾಗಿ ಪರಿವರ್ತಿಸಿದರು. ತೋಟದಲ್ಲಿ ಈಗ ಮಿಶ್ರ ಬೆಳೆಗಳದ್ದೇ ಕಾರುಬಾರು. 800 ಫಸಲು ನೀಡುವ ಅಡಿಕೆ ಮರಗಳಿವೆ. ನಾಲ್ಕು ವರ್ಷಗಳ ಹಿಂದೆ ನಾಟಿ ಮಾಡಿದ 700 ರಬ್ಬರ್ ಗಿಡಗಳು,500 ಬಾಳೆಗಳು, 50 ತೆಂಗಿನ ಮರಗಳಿವೆ.
 
ಜತೆಗೆ ಕಬ್ಬು ಬೆಳೆಯುತ್ತಾರೆ. ವರ್ಷಕ್ಕೆ ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯವಿದೆ. ‘ಮೊದಲು ರಾಸಾಯನಿಕ ಗೊಬ್ಬರ ಬಳಸುತ್ತಿದ್ದೆ, ಈಗ ಸಾವಯವ ಕೃಷಿ ಮಾಡುತ್ತಿದ್ದೇನೆ. ಮುಂದೆಯೂ ಅದನ್ನು ಮುಂದುವರಿಸುತ್ತೇನೆ. ಸಾವಯವ ಬೇಸಾಯ ಪದ್ಧತಿ ಅನುಸರಿಸಲು ಆರಂಭಿಸಿದ ನಂತರ ತೋಟದ ಬೆಳೆಗಳಿಗೆ ರೋಗಗಳ ಬಾಧೆ ಕಡಿಮೆಯಾಗಿದೆ. ಹೆಚ್ಚು ಇಳುವರಿ  ಸಿಗುತ್ತಿದೆ ಎಂದು ಗೌಡರು ಹೆಮ್ಮೆಯಿಂದ ಹೇಳುತ್ತಾರೆ. ಕೊಟ್ಟಿಗೆ ಗೊಬ್ಬರಕ್ಕೆ ಮತ್ತು ಮನೆ ಬಳಕೆಯ ಹಾಲಿಗಾಗಿ ಅವರು ಎರಡು ಹಸುಗಳನ್ನು ಸಾಕಿದ್ದಾರೆ.

ಗೌಡರು ಕಾರ್ಗಿಲ್ ಕಾರ್ಯಚರಣೆಯಲ್ಲೂ ಹೋರಾಡಿದ್ದವರು. ಈಗ ಅವರು ಮಾದರಿ ರೈತ. ಜೈ ಜವಾನ್ ಜೈ ಕಿಸಾನ್ ಎಂಬ ಮಾತಿಗೆ ಅವರು ಉತ್ತಮ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT