ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿಗೆ ಬೆಂಕಿ ಹಚ್ಚಿ 200 ಕೈದಿಗಳು ಪರಾರಿ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಮೆಡನ್ (ಇಂಡೋನೇಷ್ಯಾ) (ಎಎಫ್‌ಪಿ) : ಇಂಡೋನೇಷ್ಯಾದ ಜೈಲಿನಿಂದ  ಸುಮಾರು 200 ಕೈದಿಗಳು ಪರಾರಿಯಾದ ಘಟನೆ  ನಡೆದಿದೆ.

13 ಜನ ಭಯೋತ್ಪಾದಕರು ಸೇರಿದಂತೆ ನೂರಾರು ಕೈದಿಗಳು ತಮ್ಮ ನಡುವೆಯೇ ಜಗಳ ಕಾದು ಜೈಲಿಗೆ ಬೆಂಕಿ ಹಚ್ಚಿ, ಭದ್ರತಾ ಸಿಬ್ಬಂದಿಯ ಮೇಲೆ ಬಾಟಲಿಗಳನ್ನು ಎಸೆದು ಪರಾರಿಯಾಗಿದ್ದಾರೆ.

ಇಂಡೋನೇಷ್ಯಾದ ಮೆಡನ್ ನಗರದ ಸುಮಾತ್ರಾ ದ್ವೀಪದಲ್ಲಿರುವ ಜೈಲಿನಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿದ್ದ ಒಟ್ಟು 2,600 ಕೈದಿಗಳಿದ್ದರು. ಘಟನೆಯಲ್ಲಿ ಒಟ್ಟು 200 ಕೈದಿಗಳು ಪರಾರಿ ಯಾಗಿದ್ದಾರೆ. ಉಳಿದವರು ತಪ್ಪಿಸಿಕೊಳ್ಳದಂತೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT