ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಜಗನ್ ಬಿಡುಗಡೆ

Last Updated 24 ಸೆಪ್ಟೆಂಬರ್ 2013, 11:25 IST
ಅಕ್ಷರ ಗಾತ್ರ

ಹೈದರಾಬಾದ್‌: () (ಪಿಟಿಐ ): ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸುಮಾರು 16 ತಿಂಗಳಿಂದ ಜೈಲಿನಲ್ಲಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮತ್ತು ಕಡಪ ಸಂಸದ ಜಗನ್‌ಮೋಹನ್‌ ರೆಡ್ಡಿ ಮಂಗಳವಾರ ಚಂಚಲಗುಡ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಎರಡು ಲಕ್ಷ ರೂಪಾಯಿ ಮೊತ್ತದ ಎರಡು ಪ್ರತ್ಯೇಕ ಭದ್ರತಾ ಠೇವಣಿ ಮತ್ತು ನ್ಯಾಯಾಲಯದ ಪೂರ್ವಾ­ನುಮತಿ ಇಲ್ಲದೇ ನಗರ ತೊರೆಯದಂತೆ ಷರತ್ತು ವಿಧಿಸಿ ನಿನ್ನೆ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ದುರ್ಗಾ ಪ್ರಸಾದ್‌ ರಾವ್‌ ಅವರು ಜಾಮೀನು ಮಂಜೂರು ಮಾಡಿದ್ದರು.

ವೈ.ಎಸ್‌. ರಾಜಶೇಖರ್‌ ರೆಡ್ಡಿ ಅವರು  2004ರಿಂದ 2009ರ ವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ­ದಲ್ಲಿ ಎಂಟು ಖಾಸಗಿ ಕಂಪೆನಿಗಳಿಗೆ ಜಗನ್‌ ಲಾಭ ಮಾಡಿಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಆ ಕಂಪೆನಿಗಳು ಜಗನ್‌ ಒಡೆತನದ ಉದ್ಯಮದಲ್ಲಿ ಹೂಡಿಕೆ ಮಾಡಿದ್ದವು. ಹೀಗೆ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪ ಜಗನ್‌ ವಿರುದ್ಧ ಇತ್ತು.

ವೈಎಸ್‌ಆರ್‌ ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆ: ಜೈಲಿನ  ಎದುರು ನೆರೆದಿದ್ದ ಸಾವಿರಾರು ಕಾರ್ಯಕರ್ತರು ಜಗನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಜಗನ್‌ಮೋಹನ್‌ ರೆಡ್ಡಿ   ಬಿಡುಗೆಡ ವಿಷಯ ತಿಳಿಯುತ್ತಿದ್ದಂತೆಯೇ ಸೀಮಾಂಧ್ರದ 13 ಜಿಲ್ಲೆಗಳು, ಹೈದರಾಬಾದ್‌ನಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌  ಪಕ್ಷದ ಮುಖ್ಯ ಕಚೇರಿ  ಮತ್ತು ಜಗನ್‌ ಅವರ ಮನೆಯ ಮುಂದೆ ಪಕ್ಷದ ಕಾರ್ಯಕರ್ತರು ಸಂಭ್ರಮಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT