ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನೊಳಗೆ ಅಗ್ನಿ ಆಕಸ್ಮಿಕ: 350ಕ್ಕೂ ಹೆಚ್ಚು ಕೈದಿಗಳ ಸಾವು

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತೆಗುಸಿಗಲ್ಪ, ಹೊಂಡುರಾಸ್ (ಎಪಿ):  ಹೊಂಡುರಾಸ್‌ನ ಜೈಲೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಒಳಗೆ ಸಿಲುಕಿಕೊಂಡಿದ್ದವರಲ್ಲಿ ಸುಮಾರು 350ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿದ್ದಾರೆಂದು ಅಧಿಕೃತವಾಗಿ ತಿಳಿದು ಬಂದಿದೆ.

ಜೈಲಿನೊಳಗೆ  852 ಕೈದಿಗಳಿದ್ದು, ಬಹುತೇಕ ಮಂದಿ ಸತ್ತಿದ್ದಾರೆಂದು ಶಂಕಿಸಲಾಗಿದೆ ಎಂದಿರುವ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಲೂಸಿ ಮರ್ದಾರ್ `ಬದುಕುಳಿದವರಲ್ಲಿ ಹೆಚ್ಚು ಮಂದಿ ತೀವ್ರ ಸುಟ್ಟಗಾಯಗಳಿಂದಾಗಿ ಆಸ್ಪತ್ರೆಯಲ್ಲಿದ್ದಾರೆ~ ಎಂದಿದ್ದಾರೆ.

ನೂರಕ್ಕೂ ಹೆಚ್ಚು ಮಂದಿ ತಾವಿರುವ ಸೆಲ್‌ನೊಳಗೇ ಸುಟ್ಟು ಕರಕಲಾಗಿದ್ದಾರೆ. ಜೈಲಿನೊಳಗೆ ಬೆಂಕಿ ಹರಡುತ್ತಿದ್ದಂತೆಯೇ ಸೆಲ್‌ನೊಳಗಿರುವವರನ್ನು ಹೊರಬಿಡಲು ಕೆಲವರು ಯತ್ನಿಸಿದರಾದರೂ,  ಸಂಬಂಧಪಟ್ಟ ಸಿಬ್ಬಂದಿ ವರ್ಗ ಜೀವ ಉಳಿಸಿಕೊಳ್ಳಲು ಹೊರಗೆ ಓಡಿದ್ದರಿಂದ ಸೆಲ್‌ಗಳ ಕೀಲಿಕೈ ಸಿಗಲೇ ಇಲ್ಲ ಎನ್ನಲಾಗಿದೆ.

ಬೆಂಕಿ ಆಕಸ್ಮಿಕಕ್ಕೆ ಶಾರ್ಟ್ ಸರ್ಕೀಟ್ ಕಾರಣವಿರಬಹುದೇ ಅಥವಾ ದುಷ್ಕರ್ಮಿಗಳ ಕೃತ್ಯ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಜೈಲಿನ ಸುತ್ತಲೂ ಮತ್ತು ಸಮೀಪದ ಆಸ್ಪತ್ರೆಯ ಬಳಿ ಕೈದಿಗಳ ಸಾವಿರಾರು ಬಂಧುಗಳು ಕಿಕ್ಕಿರಿದು ಗೋಳಾಡುತ್ತಿದ್ದುದು ಮನಕಲಕುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT