ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊತೆಗೂಡಿ ಆಡಲು ಒತ್ತಾಯಿಸಬೇಡಿ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉಭಯ ಆಟಗಾರರಿಗೆ ಆಸಕ್ತಿ ಇಲ್ಲವೆಂದರೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಜೊತೆಗೂಡಿ ಆಡಲು ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರನ್ನು ಒತ್ತಾಯಿಸಬೇಡಿ ಎಂದು ಟೆನಿಸ್ ದಂತಕತೆ ಅಮೃತ್‌ರಾಜ್ ಅಭಿಪ್ರಾಯಪಟ್ಟಿದ್ದಾರೆ.

ಡಬಲ್ಸ್‌ನಲ್ಲಿ ಜೊತೆಗೂಡಿ ಆಡದಿರಲು 2011ರ ಅಂತ್ಯದಲ್ಲಿ ಪೇಸ್-ಭೂಪತಿ ತೀರ್ಮಾನಿಸಿದ್ದರು. ಹಾಗಾಗಿ ಅವರು ಈ ವರ್ಷ ಬೇರೆ ಆಟಗಾರರ ಜೊತೆಗೂಡಿ ಆಡುತ್ತಿದ್ದಾರೆ. ಭೂಪತಿ ತಮ್ಮ ದೇಶದವರೇ ಆದ ರೋಹನ್ ಬೋಪಣ್ಣ ಜೊತೆ ಹಾಗೂ ಪೇಸ್ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಅವರ ಜೊತೆಗೂಡಿ ಆಡುತ್ತಿದ್ದಾರೆ.

`ಅವರೇಕೇ ಒಟ್ಟುಗೂಡಿ ಆಡಲು ಹಿಂಜರಿಯುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಆಸಕ್ತಿ ಇಲ್ಲದಿದ್ದರೂ ಆಡಿ ಎಂದು ಒತ್ತಾಯ ಮಾಡುವುದು ಸರಿಯಲ್ಲ. ಹಾಗಾಗಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆ ಆಟಗಾರರಿಗೆ ಬಿಡಬೇಕು~ ಎಂದು ಅಮೃತ್‌ರಾಜ್ ಹೇಳಿದ್ದಾರೆ.

ಭೂಪತಿ ಹಾಗೂ ಬೋಪಣ್ಣ ಜೋಡಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಅವರು ಈಗಷ್ಟೆ ಜೊತೆಗೂಡಿ ಆಡಲು ಶುರು ಮಾಡಿದ್ದಾರೆ. ಹಾಗಾಗಿ ತಕ್ಷಣವೇ ಸಕಾರಾತ್ಮಕ ಫಲಿತಾಂಶ ಬರಬೇಕು ಎಂದು ನಿರೀಕ್ಷಿಸುವುದು ತಪ್ಪು. ಹೊಂದಿಕೊಳ್ಳಲು ಇನ್ನೂ ಸಮಯಬೇಕು. ಆದರೆ ಅವರು ಪ್ರತಿಭಾವಂತ ಆಟಗಾರರು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT