ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿ ಜಾತ್ರೆ, ಸತ್ಯಶೋಧನೆ ಲೋಕಾರ್ಪಣೆ

Last Updated 2 ಅಕ್ಟೋಬರ್ 2012, 4:15 IST
ಅಕ್ಷರ ಗಾತ್ರ

ಕಂಪ್ಲಿ: ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಭಾನುವಾರ ಜರುಗಿದ `ಸಾಹಿತ್ಯ ಸಿರಿ ಪ್ರತಿಷ್ಠಾನ~ ಉದ್ಘಾಟನೆ ಸಮಾರಂಭದಲ್ಲಿ  `ಜೋಗಿ ಜಾತ್ರೆ~ ಮತ್ತು `ಸತ್ಯ ಶೋಧನೆ~ ಕಾದಂಬರಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಎಮ್ಮಿಗನೂರು ಹಂಪಿ ಸಾವಿರ ದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಎರಡು ಕಾದಂಬರಿಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಭವಿಷ್ಯದ ಸ್ವಸ್ಥ ಸಮಾಜಕ್ಕೆ ಸಾಹಿತ್ಯ ಅಗತ್ಯ ಎಂದರು.

ಹಂಪಿ ಕನ್ನಡ ವಿ.ವಿ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಜೋಗಿ ಜಾತ್ರೆ ಕಾದಂಬರಿ ಕುರಿತು ವಿಮರ್ಶಿಸಿದರು. ಸ್ಮಯೋರ್ ವ್ಯಾಸಪುರಿ ಕಾಲೇಜ್ ಉಪನ್ಯಾಸಕ ಎಸ್.ಬಿ. ಚಂದ್ರಶೇಖರ ಸತ್ಯ ಶೋಧನೆ ಕಾದಂಬರಿ ಕುರಿತು ವಿಮರ್ಶಿಸಿದರು.

`ಜೋಗಿ ಜಾತ್ರೆ~ ಲೇಖಕ ರುಕ್ಮಣ ಬಾಬುರಾಜ್ ಶ್ರೀಖಂಡೆ ಮತ್ತು `ಸತ್ಯಶೋಧನೆ~ ಲೇಖಕ ಕೆ.ಎಂ. ಶರಣಬಸವ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕಲ್ಮಠ ಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರೇಹಡಗಲಿ ಹಾಲಪ್ಪಯ್ಯ ಸ್ವಾಮೀಜಿ, ಸಾಹಿತ್ಯ ಸಿರಿ ಪ್ರತಿಷ್ಠಾನ ಅಧ್ಯಕ್ಷ ಜಿ. ಪ್ರಕಾಶ, ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಅಧ್ಯಕ್ಷ ಜವಳಿ ಚನ್ನಬಸಪ್ಪ, ಅಖಿಲ ಕರ್ನಾಟಕ ಬಯಲಾಟ ಪರಿಷತ್ತು ಮಾಜಿ ಅಧ್ಯಕ್ಷ ಬಳ್ಳಾರಿ ಕಲ್ಲಪ್ಪ, ಪುರಸಭೆ ಸದಸ್ಯ ಕೆ.ಎಂ. ಹೇಮಯ್ಯ ಸ್ವಾಮಿ, ಪಿಎಸ್‌ಐ ಎನ್. ಆನಂದ, ಮಾಜಿ ಶಾಸಕ ಎಚ್.ಡಿ. ಬಸವರಾಜ, ಟಿಎಪಿಸಿಎಂಎಸ್ ಅಧ್ಯಕ್ಷ ಅಗಳಿ ಪಂಪಾಪತಿ, ಸಮಾಜ ಸೇವಕ ಪಂಥರ್ ಜಯಂತ್, ಭ್ರಷ್ಟಾಚಾರ ನಿರ್ಮೂಲನ ವೇದಿಕೆ ರಾಜ್ಯ ಅಧ್ಯಕ್ಷ ಸಲೀಂಬೇಗ್, ಪ್ರತಿಷ್ಠಾನ ಉಪಾಧ್ಯಕ್ಷ ಬಂಗಿದೊಡ್ಡ ಮಂಜುನಾಥ, ಕಾರ್ಯದರ್ಶಿ ಅಂಬಿಗರ ಮಂಜುನಾಥ, ಎಸ್.ಜಿ. ಚಿತ್ರಗಾರ, ಎಸ್. ಶಾಮಸುಂದರರಾವ್, ಬಿ. ಸಯ್ಯದ್ ಹುಸೇನ್, ಮಹ್ಮದ್ ಹನೀಫ್, ಎ. ಶಂಕರ್, ಬಿ. ರಾಜು ಇತರರು ಹಾಜರಿದ್ದರು. ರಾಮಸಾಗರ ಗ್ರಾ.ಪಂ ಮಾಜಿ ಅಧ್ಯಕ್ಷ ಬಿ. ನಾರಾಯಣಪ್ಪ ಸಾಹಿತ್ಯ ಸಿರಿ ಪ್ರತಿಷ್ಠಾನಕ್ಕೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT