ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿಗಳ ರೇಖೆ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಚಿತ್ರಕಲೆಯಲ್ಲಿ ನಾನಾ ಪ್ರಕಾರಗಳಿವೆ. ಹಾಗಾಗಿ ಕಲಾ ಪ್ರಕಾರಗಳು ಸಹ ವರ್ಣಗಳಷ್ಟೇ ವೈವಿಧ್ಯಮಯ. ರೇಖಾಚಿತ್ರ ಕಲೆ ಸಹ ಒಂದು ಆಕರ್ಷಕ ಕಲೆ. ಖ್ಯಾತ ಕಲಾವಿದರಾದ ರಾಘವೇಂದ್ರ ಜಿ. ಚಿತ್ರಗಾರ್ ಮತ್ತು ಯು.ಅಶೋಕ್ ಅವರು ರಚಿಸಿರುವ ರೇಖಾಚಿತ್ರಗಳು ಕಲಾ ರಸಿಕರಲ್ಲಿ ಬೆರಗು ಹುಟ್ಟಿಸುವಂತಿವೆ.

ಹೊಯ್ಸಳರ ಕಾಲದಲ್ಲಿ ಮೈದಳೆದ ಬೇಲೂರು- ಹಳೆಬೀಡು ವಾಸ್ತುಶಿಲ್ಪ ಜಗತ್ಪ್ರಸಿದ್ಧಿ ಪಡೆದಿದೆ. ಕಲ್ಲಿನಲ್ಲಿ ರೂಪುಗೊಂಡಿರುವ ಶಿಲಾ ಬಾಲಿಕೆಯರ ಸೌಂದರ್ಯ ಕಲಾರಸಿಕರ ನಿದ್ದೆಗೆಡಿಸಿವೆ. ಇಂತಹ ಅಪರೂಪದ ಶಿಲ್ಪ ಸೌಂದರ್ಯವನ್ನು ರೇಖಾಚಿತ್ರದಲ್ಲಿ ಸೆರೆಹಿಡಿದಿರುವ ಹೆಗ್ಗಳಿಕೆ ರಾಘವೇಂದ್ರ ಅವರಿಗೆ ಸಲ್ಲುತ್ತದೆ.

ಶಿಲ್ಪದಲ್ಲಿರುವ ಸೂಕ್ಷ್ಮ ಕೆತ್ತನೆಗಳೆಲ್ಲವನ್ನೂ ರೇಖೆಯಲ್ಲಿ ಪಡಿಯಚ್ಚುಗೊಳಿಸಿರುವ ಇವರ ಕಲಾ ನೈಪುಣ್ಯತೆಗೆ ತಲೆಬಾಗಲೇ ಬೇಕು. ಬಿಳಿ ಹಾಳೆಯ ಮೇಲೆ ಮೈದಳೆದಿರುವ ಈ ಶ್ವೇತವರ್ಣದ ಸುಂದರಿಯರು ನೋಡುಗರಲ್ಲಿ ಮೋಹ ಹುಟ್ಟಿಸುತ್ತಾರೆ. ಶಿಲ್ಷ ಸುಂದರಿಯರಷ್ಟೇ ಅಲ್ಲದೇ ದೇವಾನುದೇವತೆಗಳು ಇವರ ರೇಖೆಯಲ್ಲಿ ಮೂಡಿಬಂದಿದ್ದಾರೆ. ಇವರು ಚಿತ್ರಿಸಿರುವ ನಾಟ್ಯಶಿವ ಕಲಾಕೃತಿಯು ಕೈಯಲ್ಲಿ ಡಮರುಗ ಮತ್ತು ತ್ರಿಶೂಲವನ್ನು ಹಿಡಿದು ದುಷ್ಟ ಸಂಹಾರ ಭಂಗಿಯಲ್ಲಿ ನಿಂತಿರುವ ಚಿತ್ರಣ ಸುಂದರವಾಗಿದೆ. ಹೆಂಗಳೆಯರಿಗೆ ಬಲುಪ್ರಿಯನಾದ ಮೋಹನ ಮುರಳಿಯ ಕೃಷ್ಣನನ್ನು ಸಹ ಮೋಹಕವಾಗಿ ಚಿತ್ರಿಸಿದ್ದಾರೆ.

ಕಲಾವಿದ ಅಶೋಕ್ ಅವರು ಆಯ್ದುಕೊಂಡಿರುವುದು ಗ್ರಾಮೀಣ ಸಂಸ್ಕೃತಿಯನ್ನು. ಇವರ ರೇಖಾಚಿತ್ರಗಳಲ್ಲಿ ಹಳ್ಳಿಯ ಸೊಗಡು ಡಾಳಾಗಿ ಕಾಣುತ್ತದೆ. ತಾವು ನೋಡಿದ ಗ್ರಾಮ್ಯ ಚಿತ್ರಣವನ್ನು ರೇಖೆಯಲ್ಲಿ ಗೀಚಿದ್ದಾರೆ. ಹಳ್ಳಿಯ  ಮನೆಗಳು, ಸುಂದರ ಪರಿಸರ, ಬೀದಿ... ಹೀಗೆ ವಿವಿಧ ವಿಷಯಗಳಿಗೆ ರೇಖಾರೂಪ ನೀಡಿದ್ದಾರೆ.

ಕಲಾವಿದ ಜೋಡಿಯ ಈ ಸುಂದರ ರೇಖಾಕೃತಿಗಳ ಪ್ರದರ್ಶನ ಕುಮಾರಕೃಪ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರದವರೆಗೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT