ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋತಿಷ್ಯ ವಾಸ್ತು

Last Updated 24 ಜನವರಿ 2012, 19:30 IST
ಅಕ್ಷರ ಗಾತ್ರ

ಕಡ್ಲೇಣಿ ಶಿವಪ್ಪ, ಹೂವಿನ ಹಡಗಲಿ: ಮನೆಯ ನಕ್ಷೆ ಕಳಿಸಿದ್ದೆೀನೆ. ವಾಸ್ತು ದೋಷವಿದ್ದರೆ ತಿಳಿಸಿ.

ಉತ್ತರ: ಮನೆಯ ಪೂರ್ವದಲ್ಲಿ ಬಯಲು ಜಾಗ ಇದೆ. ಆದರೆ ಉತ್ತರಕ್ಕೆ ಖಾಲಿ ಸ್ಥಳವಿಲ್ಲ. ಯಮನ ಸ್ಥಾನವಾದ ದಕ್ಷಿಣ ಮತ್ತು ಶನಿಯ ಸ್ಥಾನವಾದ ಪಶ್ಚಿಮದದಲ್ಲಿ ಹೆಚ್ಚು ಖಾಲಿ ಸ್ಥಳವಿರುವುದು ಅಶುಭಕರ. ಆದ್ದರಿಂದ ದಕ್ಷಿಣ ಮತ್ತು ಪಶ್ಚಿಮಕ್ಕೆ ಬೇಲಿ ನಿರ್ಮಿಸಿ ಅಥವಾ ಮಣ್ಣು ಹಾಕಿ ಎತ್ತರಿಸಿ ಹೂಗಿಡಗಳನ್ನು ಬೆಳೆಯಿರಿ. ಅಲ್ಲದೇ ಮನೆಯ ಉತ್ತರ ಗೋಡೆಗೆ ಅಷ್ಟದಿಗ್ಬಂಧನ ಯಂತ್ರ, ವಾಸ್ತು ಯಂತ್ರ ಮತ್ತು ಶ್ರೀಚಕ್ರ ಯಂತ್ರಗಳನ್ನು ಪೂಜಿಸಿ ಸ್ಥಾಪಿಸಿ.

ಮನೆಯ ಮುಖ್ಯದ್ವಾರವು ದಕ್ಷಿಣದಲ್ಲಿದ್ದು, ವೃಷಭ, ಕನ್ಯಾ, ಮಕರ ರಾಶಿಯವರಿಗೆ ಶುಭಕರ. ಇದು ನೀಚ ಶುಕ್ರನ ಸ್ಥಾನದಲ್ಲಿದೆ. ಇದನ್ನು ಪೂರ್ವಕ್ಕೆ ಸರಿಸಿ ಅಡುಗೆಮನೆ ಪಕ್ಕದಲ್ಲಿ ಉಚ್ಛಬುಧನ ಸ್ಥಾನದಲ್ಲಿ ಬರುವಂತೆ ನೋಡಿಕೊಳ್ಳಿ. ಮನೆಯ ಈಶಾನ್ಯದಲ್ಲಿ ಸ್ನಾನಗೃಹವಿದೆ. ಇದು ದೇವಮೂಲೆಯಾಗಿದ್ದು ಇಲ್ಲಿ ಶೌಚಮಾಡಬಾರದು.ಉಳಿದಂತೆ ನಿಮ್ಮ ನಕ್ಷೆ ವಾಸ್ತು ಪ್ರಕಾರ ಸರಿಯಾಗಿದ್ದು, ಪಶ್ಚಿಮದ ಮೊದಲನೆ ಕೋಣೆಯನ್ನು ಯಜಮಾನರ ಕೋಣೆಯಾಗಿ, ನಂತರದ ಕೋಣೆಯನ್ನು ಹೆಣ್ಣುಮಕ್ಕಳು ಉಪಯೋಗಿಸುವುದು ಶುಭಕರ.

ಮಹಮ್ಮದ್ ಇಮ್ತಿಯಾಜ್, ದಾವಣಗೆರೆ: ಮನೆಯ ನಕ್ಷೆ ಕಳಿಸಿದ್ದೇನೆ. ವಾಸ್ತು ದೋಷವಿದ್ದರೆ ತಿಳಿಸಿ.

ಉತ್ತರ: ಇವರು ಕಳಿಸಿದ ನಕ್ಷೆಯಂತೆ ಮನೆಯ ಮುಖ್ಯದ್ವಾರ ದಕ್ಷಿಣಕ್ಕೆ ರವಿಯ ಸ್ಥಾನದಲ್ಲಿದೆ. ಇದು ಶುಭಕರ. ಆದರೆ ಇದು ವೃಷಭ, ಕನ್ಯಾ, ಮಕರ ರಾಶಿಯವರಿಗೆ ಮಾತ್ರ ಸರಿ ಬರುತ್ತದೆ. ಆದರೆ ಮನೆಗೆ ಪಿಶಾಚ ವೀಧಿ ಸಾಧ್ಯವಿಲ್ಲದ ಕಾರಣ ಮನೆಯ ಉತ್ತರ ಗೋಡೆಗೆ ವಾಸ್ತುಯಂತ್ರ, ಅಷ್ಟದಿಗ್ಬಂಧನ ಯಂತ್ರ ಮತ್ತು ಮತ್ಸ್ಯ ಯಂತ್ರಗಳನ್ನು ಪೂಜಿಸಿ ಸ್ಥಾಪಿಸಿ.

ಮನೆಗೆ 5 ಬಾಗಿಲು ತೋರಿಸಿದ್ದೀರಿ. ಇದು ತೀರಾ ಅಶುಭಕರ. ಆದ್ದರಿಂದ 4 ಅಥವಾ 6 ಬಾಗಿಲು ಆಗುವಂತೆ ನೋಡಿಕೊಳ್ಳಿ. ವಾಯುವ್ಯದಲ್ಲಿ ಇರುವ ಶೌಚಾಲಯದ ಶೌಚ ತೊಟ್ಟಿ ಉತ್ತರ ಅಥವಾ ದಕ್ಷಿಣಕ್ಕೆ ಮುಖವಾಗಿರಲಿ. ಮೇಲ್ಮನೆಯಲ್ಲಿಯೂ ಇದೇ ನಿಯಮ ಅನುಸರಿಸುವುದು ಅವಶ್ಯಕ. ಮೆಟ್ಟಿಲು ದಕ್ಷಿಣದಿಂದ ಇರಲಿ. ನೀರಿನ ಮೇಲ್ತೊಟ್ಟಿ ನೈರುತ್ಯದಲ್ಲಿರಲಿ. ನೆಲತೊಟ್ಟಿ ಈಶಾನ್ಯದಲ್ಲಿರಲಿ. ಉಳಿದಂತೆ ನಿಮ್ಮ ನಕ್ಷೆಯಲ್ಲಿ ಹೆಚ್ಚಿನ ಸೂಚನೆಗಳು ಸಾಧ್ಯವಿಲ್ಲವಾಗಿ, ಯಂತ್ರಗಳನ್ನು ಹೇಳಲಾಗಿದೆ.

ಶಿಲ್ಪ ಮೈಸೂರು: ಜನನ 28-1-1990, ಸಮಯ 6-15 ಬೆಳಿಗ್ಗೆ.
ಪ್ರಶ್ನೆ: ಎಂ.ಕಾಂ ಓದಿದ್ದೆೀನೆ. ಸರಕಾರಿ ಉದ್ಯೋಗ, ಮದುವೆ ಬಗ್ಗೆ ತಿಳಿಸಿ.

ಉತ್ತರ: ಇವರದು ಮಕರ ಲಗ್ನ, ಧನಿಷ್ಠ ನಕ್ಷತ್ರ, ಮಕರ ರಾಶಿ. ಇವರ ಲಗ್ನದಲ್ಲಿ ಅಷ್ಟಮಾಧಿಪತಿ ರವಿ, ಶನಿ, ಅವಯೋಗಿ ವಕ್ರಿ ಶುಕ್ರ ಸ್ಥಿತರಿದ್ದಾರೆ. ಈ ಸ್ಥಾನವನ್ನು  ಕೇತು ವೀಕ್ಷಿಸುತ್ತಾರೆ. ಇವರ ಲಗ್ನಾಧಿಪತಿ ಶನಿ ಭಾವದಲ್ಲಿ ಲಗ್ನ ಸ್ಥಿತರಿದ್ದು, ಶುಕ್ರ ನಕ್ಷತ್ರದಲ್ಲಿದ್ದು, ಸಹಯೋಗಿ ಯಾಗಿದ್ದಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪತಿ ಪೀಡಿತರಾಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ತುಲಾರಾಶಿಯಾಗಿದ್ದು ಇಲ್ಲಿ ಗುಳಿಕ ಸ್ಥಿತರಿದ್ದಾರೆ. ಈ ಸ್ಥಾನವನ್ನು ವ್ಯಯಾಧಿಪತಿ ವಕ್ರೀ ಗುರು ವೀಕ್ಷಿಸುತ್ತಾರೆ. ದಶಮಾಧಿಪತಿ ಶುಕ್ರರು ವಕ್ರೀ ಆಗಿ, ಅವಯೋಗಿಯಾಗಿ, ಪುಷ್ಕರನವಾಂಶದಲ್ಲಿದ್ದಾರೆ. ಇವರು ವೈರಿ ಅಷ್ಟಮಾಧಿಪತಿ ರವಿ ನಕ್ಷತ್ರದಲ್ಲಿ ಗುರು ನವಾಂಶದಲ್ಲಿ ದಗ್ಧರಾಶಿ ಸ್ಥಿತರಿದ್ದು, ವರ್ಗೋತ್ತಮರಾಗಿದ್ದಾರೆ.  ಇವು ಇವರ ಉದ್ಯೋಗದಲ್ಲಿ ಅಡೆತಡೆಗಳಿಗೆ ಕಾರಣವಾಗಿದೆ. 

 ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ತುಲಾ ಆಗಿದ್ದುಕರ್ಮಾಂಶದಲ್ಲಿದೆ. ಇಲ್ಲಿ ಕೇತು ಸ್ಥಿತರಿದ್ದುಲಗ್ನಾಧಿಪತಿ, ಜನ್ಮ ದಶಮಾಧಿಪತಿ ಶುಕ್ರರು ನೀಚಾಂಶದಲ್ಲಿ ವ್ಯಯಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಸ್ಥಿತರಿದ್ದಾರೆ. ಸರಕಾರಿ ಉದ್ಯೋಗ ಕಾರಕ ರವಿ ಚತುರ್ಥ ಸ್ಥಿತರಿದ್ದಾರೆ.

ಇವರ ಸ್ಪರ್ಧಾತ್ಮಕ ಪರೀಕ್ಷಾ ಸ್ಥಾನ ಷಷ್ಟವು ಮಿಥುನವಾಗಿದ್ದು ಇಲ್ಲಿ ವಕ್ರೀ ಗುರು ಸ್ಥಿತರಿದ್ದಾರೆ. ಷಷ್ಟಾಧಿಪತಿ ಬುಧರು ಶುಕ್ರ ನಕ್ಷತ್ರದಲ್ಲಿ, ದಗ್ಧರಾಶಿಯಲ್ಲಿ ವ್ಯಯಸ್ಥಿತರಿದ್ದಾರೆ. 

ಆದ್ದರಿಂದ ಸೋಲಿನಿಂದ ಧೃತಿಗೆಡದೆ ಮರಳಿ ಯತ್ನವ ಮಾಡಿದರೆ ಯಶಸ್ಸು ನಿಮ್ಮದಾಗುವುದು. 2014-15ರಲ್ಲಿ ಪ್ರಯತ್ನಿಸಿದರೆ ಸರಕಾರಿ ಉದ್ಯೋಗವೂ ಸಿಗುವುದು.
ಇವರ ಕಳತ್ರಸ್ಥಾನ ಸಪ್ತಮವು ಕರ್ಕಾಟಕ ರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ.
 
ಈ ಸ್ಥಾನವನ್ನು ಅಷ್ಟಮಾಧಿಪತಿ ರವಿ, ಮತ್ತು ಕುಜರು  ವೀಕ್ಷಿಸುತ್ತಾರೆ. ಸಪ್ತಮಾಧಿಪತಿ ಚಂದ್ರರು ಕುಟುಂಬಸ್ಥಾನದಲ್ಲಿ,ವೈರಿ ಕ್ಷೇತ್ರದಲ್ಲಿ ಕುಜ ನಕ್ಷತ್ರದಲ್ಲಿ ರಾಹು ಒಡನೆ ಸ್ಥಿತರಿದ್ದಾರೆ. ಕಳತ್ರಕಾರಕ ಶುಕ್ರರು ವಕ್ರೀ, ಅವಯೋಗಿಯಾಗಿ ದಗ್ಧರಾಶಿ ಸ್ಥಿತರಿದ್ದಾರೆ.

ಇವು ಮದುವೆಯಲ್ಲಿ ವಿಘ್ನಗಳಿಗೆ ಕಾರಣವಾಗಿದೆ. ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಕುಂಭವಾಗಿದ್ದು ಕುಟುಂಬಾಂಶದಲ್ಲಿದೆ. ಲಗ್ನಾಧಿಪತಿ ಶನಿ ದಶಮ ಸ್ಥಿತರಿದ್ದಾರೆ. ಕಾರಕ ಶುಕ್ರರು ಲಾಭ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭಸ್ಥಿತರಿದ್ದು ದಾಂಪತ್ಯದಲ್ಲಿ ಸಂಕಷ್ಟಗಳ ಸೂಚಕವಾಗಿದೆ. 2012 ಅಥವಾ 2014-15ರಲ್ಲಿ ಇವರ ಮದುವೆಯೂ ನೆರವೇರುವುದು. ಇವರಿಗೆ ಈಗ ಗುರುದಶಾ ಗುರು ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ದಶಮಶನಿ, ಚತುರ್ಥಗುರು ಇದ್ದಾರೆ. ಇವು ಶುಭಕರವಲ್ಲ.

ಪರಿಹಾರ: ಝೆರ್ಕಾನ್ ಹರಳು ಧರಿಸಿ. ಕುಲದೇವತಾ, ಗ್ರಾಮದೇವತೆಗೆ, ವಿನಾಯಕ ಶಾಂತಿ ಹೋಮ ಮಾಡಿಸಿ. ಆದಿತ್ಯ ಹೃದಯ ಕವಚ ಪಠಿಸಿ. ಮದುವೆ ಆದಮೇಲೆ ಪಾರ್ವತಿ ಕಲ್ಯಾಣ, ಸ್ವರ್ಣಗೌರಿ ವ್ರತ ಮಾಡಿಸಿ.

ಡಿ. ಮಂಜುಳಾಬಾಯಿ, ಭದ್ರಾವತಿ:  ಜನನ 2-10-1972, ಸಮಯ 7-56 ರಾತ್ರಿ.
ಪ್ರಶ್ನೆ: ಬಿಕಾಂ, ಓದಿದ್ದೆೀನೆ. ಉದ್ಯೋಗ, ಆರೋಗ್ಯ, ಮನೆಕಟ್ಟುವ ಯೋಗವಿದೆಯೆ ತಿಳಿಸಿ.

ಉತ್ತರ: ಇವರದು ಮೇಷಲಗ್ನ, ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿ. ಇವರ ಲಗ್ನದಲ್ಲಿ ಯಾವ ಗ್ರಹರೂ ಇಲ್ಲ. ಲಗ್ನವನ್ನು ದಗ್ಧರಾಶಿಯಿಂದ ಗುರು, ಅವಯೋಗಿ ರಾಹು ಮತ್ತು ಲಗ್ನಾಧಿಪತಿ ಕುಜರು ವೀಕ್ಷಿಸುತ್ತಾರೆ. ಲಗ್ನಾಧಿಪತಿ ಕುಜರು ಷಷ್ಟದಲ್ಲಿ ಪುಷ್ಕರ ನವಾಂಶದಲ್ಲಿ, ರವಿ ನಕ್ಷತ್ರದಲ್ಲಿ,  ಸಹಯೋಗಿಯಾಗಿ ರವಿ ಮತ್ತು ಬುಧರೊಡನೆ ಸ್ಥಿತರಿದ್ದಾರೆ. ಯಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಸ್ವಲ್ಪ ಪೀಡಿತರಾಗಿದ್ದಾರೆ.

ಇವರ ಉದ್ಯೋಗ ಸೂಚಕ ದಶಮವು ಮಕರ ರಾಶಿಯಾಗಿದ್ದು ಈ ಭಾವದಲ್ಲಿ ರಾಹು ಅವಯೋಗಿಯಾದ್ದಾರೆ. ಈ ಸ್ಥಾನವನ್ನು ಚಂದ್ರ ವೀಕ್ಷಿಸುತ್ತಾರೆ. ದಶಮಾಧಿಪತಿ ಶನಿ ತೃತೀಯದಲ್ಲಿ ಕುಜ ನಕ್ಷತ್ರ ಸ್ಥಿತರಿದ್ದಾರೆ.

ಇವರ ಉದ್ಯೋಗ ಸೂಚಕ ದಶಾಂಶ ಕುಂಡಲಿಯ ಲಗ್ನವು ಕನ್ಯಾವಾಗಿದ್ದು ಷಷ್ಟಾಂಶದಲ್ಲಿದೆ. ಲಗ್ನದಲ್ಲಿ ಅವಯೋಗಿ ರಾಹು, ನೀಚ ಶುಕ್ರ ಮತ್ತು ಚಂದ್ರರು ಸ್ಥಿತರಿದ್ದಾರೆ.
ಲಗ್ನಾಧಿಪತಿ ಬುಧರು ಪಂಚಮಸ್ಥಿತರಿದ್ದಾರೆ. ಜನ್ಮ ದಶಮಾಧಿಪತಿ ಶನಿ ಧನಸ್ಥಾನದಲ್ಲಿ ಉಚ್ಛರಾಗಿ ನೀಚಾಂಶ ಸ್ಥಿತ ರವಿಯೊಡನೆ ಸ್ಥಿತರಿದ್ದಾರೆ. ಜನ್ಮ ಲಗ್ನಾಧಿಪತಿ ಕುಜರು ನೀಚಾಂಶದಲ್ಲಿ ಲಾಭ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದರೂ ಪೀಡಿತರಾಗಿದ್ದಾರೆ. ಇದರಿಂದ ಪಂಚಮ ಶನಿ ಮುಗಿದ ಮೇಲೆ ಅಂದರೆ 2017ರ ನಂತರ ಉದ್ಯೋಗದಲ್ಲಿ ಪ್ರಗತಿ ಕಾಣುವುದು.

ಇವರ ಆರೋಗ್ಯ ಸೂಚಕ ಷಷ್ಟವು ಕನ್ಯಾರಾಶಿಯಾಗಿದ್ದು, ಇಲ್ಲಿ ಷಷ್ಟಾಧಿಪತಿ ಬುಧರು ಉಚ್ಛರಾಗಿ ಕುಜ ನಕ್ಷತ್ರದಲ್ಲಿ ವ್ಯಯಾಧಿಪತಿ ರವಿ ಅಷ್ಟಮಾಧಿಪತಿ ವೈರಿ ಕುಜರೊಡನೆ ಸ್ಥಿತರಿದ್ದಾರೆ. ಯಾವ ಶುಭ     ಸಂಬಂಧವೂ ಇಲ್ಲ. ಇವರ ಷಷ್ಟಾಂಶ ಕುಂಡಲಿಯಲ್ಲಿಯೂ ಕೂಡ ಗ್ರಹರು ಶುಭಾಶುಭಸ್ಥಿತರಿದ್ದು ಲಗ್ನಾಧಿಪತಿ ಚಂದ್ರರು ದುಃಸ್ಥಾನ ಸ್ಥಿತರಿದ್ದಾರೆ. ಇವು ಇವರ ಆರೋಗ್ಯದ ಕಿರಿಕಿರಿಗೆ ಕಾರಣವಾಗಿದ್ದು ಯೋಗ, ಸೂರ್ಯ ನಮಸ್ಕಾರ,  ಧ್ಯಾನ ಮತ್ತು ಆಯುರ್ವೇದ ಔಷಧಿಗಳಿಂದ ಇವರಿಗೆ ಗುಣ ಕಾಣುವುದು.

ಇವರ ಗೃಹಯೋಗಸ್ಥಾನ ಚತುರ್ಥವು ಕರ್ಕಾಟಕವಾಗಿದ್ದು ಇಲ್ಲಿ ಚತುರ್ಥಾಧಿಪತಿ ಚಂದ್ರರು ಯೋಗಿ ಕೇತು ಒಡನೆ ಸ್ಥಿತರಿದ್ದಾರೆ. ಇವರನ್ನು ಲಾಭಾಧಿಪತಿ ಶನಿ ವೀಕ್ಷಿಸುತ್ತಾರೆ. ಕಾರಕ ಕುಜರು ಷಷ್ಟದಲ್ಲಿ ಸಹಯೋಗಿಯಾಗಿ ಪುಷ್ಕರನವಾಂಶದಲ್ಲಿ ರವಿ ನಕ್ಷತ್ರದಲ್ಲಿ, ವೈರಿ ಕ್ಷೇತ್ರದಲ್ಲಿ, ರವಿ ಮತ್ತು ಬುಧರೊಡನೆ ಸ್ಥಿತರಿದ್ದಾರೆ. ಇದರಿಂದ ನಿಧಾನವಾದರೂ, ಅಡೆತಡೆಗಳಿದ್ದರೂ ಇವರಿಗೆ ಗೃಹಯೋಗ ಸೂಚಿತವಾಗುತ್ತದೆ.

ಇವರಿಗೆ ಈಗ ರವಿದಶಾ ಚಂದ್ರ ಭುಕ್ತಿ, ಗೋಚಾರದಲ್ಲಿ ಅರ್ಧಾಷ್ಟಮಶನಿ, ದಶಮ ಗುರು ಇದ್ದಾರೆ. ಇವು ಶುಭಕರವಲ್ಲ. ಆದ್ದರಿಂದ ತಾಳ್ಮೆಯಿಂದ ಕಾದರೆ ಶುಭದಿನಗಳನ್ನು ನೋಡುವಿರಿ.

ಪರಿಹಾರ: ಮಾಣಿಕ್ಯ ಧರಿಸಿ. ಗ್ರಾಮಾದೇವತೆಗೆ ಶಾಂತಿ ಮಾಡಿಸಿ. ಶಿವಾಷ್ಟೋತ್ತರ ಪಠಿಸಿ. ಸಾಯಿಬಾಬಾರನ್ನು ಪೂಜಿಸಿ.

ರಾಘವೇಂದ್ರ, ದೊಡ್ಡಬಳ್ಳಾಪುರ:   ಜನನ 22-4-1987, ಸಮಯ 6-30 ಬೆಳಿಗ್ಗೆ.
ಪ್ರಶ್ನೆ: ಬಿಕಾಂ ಓದಿದ್ದೆೀನೆ. ಮುಂದಿನ ಓದು, ಉದ್ಯೋಗದ ಬಗ್ಗೆ ತಿಳಿಸಿ.

ಉತ್ತರ: ಇವರದು ಮೇಷ ಲಗ್ನ, ಶ್ರವಣ ನಕ್ಷತ್ರ ಮಕರ ರಾಶಿ. ಇವರ ಲಗ್ನದಲ್ಲಿ ಯೋಗಿ, ಉಚ್ಛರವಿ ಕೇತು ನಕ್ಷತ್ರ ಸ್ಥಿತರಿದ್ದಾರೆ. ಯಾವ ಶುಭ      ಸಂಬಂಧವೂ ಇಲ್ಲ. ಲಗ್ನಾಧಿಪತಿ ಕುಜರು ಧನ ಸ್ಥಾನದಲ್ಲಿ ಚಂದ್ರ ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಕೇತು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪತಿ ಪೀಡಿತರಾಗಿದ್ದಾರೆ.

ಇವರ ಉನ್ನತ ವಿದ್ಯಾಸೂಚಕ, ವಿದ್ಯಾ ಬುದ್ಧಿಸ್ಥಾನ ಪಂಚಮವು ಸಿಂಹರಾಶಿಯಾಗಿದೆ. ಇದು ದಗ್ಧರಾಶಿಯಾಗಿದ್ದು ಇಲ್ಲಿ ಯಾವ ಗ್ರಹರೂ ಇಲ್ಲ. ಈ ಸ್ಥಾನವನ್ನು ಕುಜ ಮತ್ತು ಅವಯೋಗಿ ವಕ್ರೀ ಶನಿ ವೀಕ್ಷಿಸುತ್ತಾರೆ. ಪಂಚಮಾಧಿಪತಿ ರವಿ ಉಚ್ಛರಾಗಿ, ಯೋಗಿಯಾಗಿ ಲಗ್ನ ಸ್ಥಿತರಿದ್ದಾರೆ. ಆದರೆ ವಿದ್ಯಾಕಾರಕ ಬುಧರು ನೀಚರಾಗಿ ವ್ಯಯಸ್ಥಾನದಲ್ಲಿ ಗುರು, ರಾಹು, ಶುಕ್ರರೊಡನೆ ಸ್ಥಿತರಿದ್ದಾರೆ. ಇವು ಉನ್ನತ ವಿದ್ಯೆಗೆ ಪೂರಕವಲ್ಲ. ಆದರೆ ಬ್ಯಾಂಕ್ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಯತ್ನಿಸುವುದು ಉತ್ತಮ.

ಇವರ ಉದ್ಯೋಗ ಸ್ಥಾನ ದಶಮವು ಮಕರ ರಾಶಿಯಾಗಿದ್ದು ಇಲ್ಲಿ ಚಂದ್ರರು ಸ್ವನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ಗುಳಿಕ, ಅವಯೋಗಿ ವಕ್ರಿ ಶನಿ ಮತ್ತು ಕೇತು ವೀಕ್ಷಿಸುತ್ತಾರೆ.

ದಶಮಾಧಿಪತಿ ವಕ್ರೀ, ಅವಯೋಗಿ ಶನಿ ಬುಧ ನಕ್ಷತ್ರದಲ್ಲಿ ದಗ್ಧರಾಶಿ ಸ್ಥಿತರಿದ್ದಾರೆ.  ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಸಿಂಹವಾಗಿದ್ದು, ಲಗ್ನಾಧಿಪತಿ ಲಾಭದಲ್ಲಿ ಕುಜ, ಬುಧರೊಡನೆ ಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದಾರೆ. ಹೆಚ್ಚಿನ ಪ್ರಯತ್ನದಿಂದ 2012-13 ರಲ್ಲಿ ಸರಕಾರಿ ಉದ್ಯೋಗ ಸಾಧ್ಯವಾಗುವುದು.

ಇವರಿಗೆ ಈಗ ರಾಹುದಶಾ ಚಂದ್ರ ಭುಕ್ತಿ ನಡೆಯುತ್ತಿದ್ದು, ಗೋಚಾರದಲ್ಲಿ ದಶಮಶನಿ, ಚತುರ್ಥಗುರು ಇದ್ದಾರೆ. ಇವು ಶುಭಕರವಲ್ಲ. 2013ರಲ್ಲಿ ಗುರು ದಶಾದಲ್ಲಿ ಉದ್ಯೋಗ ಸಾಧ್ಯವಾಗುವುದು.

ಪರಿಹಾರ: ಕನಕ ಪುಷ್ಯರಾಗ ಧರಿಸಿ. ಗ್ರಾಮದೇವತಾ ಶಾಂತಿ ಮಾಡಿಸಿ. ಕಾಳಿಕಾ ಅಷ್ಟೋತ್ತರ ಪಠಿಸಿ. ಭೈರವೇಶ್ವರರನ್ನು ಪೂಜಿಸಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT