ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳದರಾಶಿ ಜನ್ಮ ಶತಮಾನೋತ್ಸವ

Last Updated 9 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ: ಗುರುವಾರ ಮತ್ತು ಶುಕ್ರವಾರ ಡಾ.ಕೆ. ಜೋಳದರಾಶಿ ದೊಡ್ಡನಗೌಡರ ಜನ್ಮಶತಮಾನೋತ್ಸವ ಅಂಗವಾಗಿ ವಿಚಾರ ಸಂಕಿರಣ, ಗಮಕ, ಗಾಯನ, ನಾಟಕೋತ್ಸವ.

ರಂಗಭೂಮಿ, ಗಮಕ, ಸಮಾಜಸೇವೆ, ಸಾಹಿತ್ಯ ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದ ಶರಣ ಕವಿ ದೊಡ್ಡನಗೌಡರು. ಜೋಳದರಾಶಿಯಲ್ಲಿ ಜನಿಸಿ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿದ್ದರೂ ಸ್ವಂತ ಆಸಕ್ತಿಯಿಂದ ಪ್ರಾಚೀನ ಕಾವ್ಯಗಳನ್ನು ಕರಗತಮಾಡಿಕೊಂಡು ಗಮಕದ ಮೂಲಕ ಅಪಾರ ರಸಿಕ ಶ್ರೋತೃಗಳಿಗೆ ಕಾವ್ಯರಸ ಉಣಬಡಿಸಿದವರು.

‘ಶೂನ್ಯ ಸಂಪಾದನೆ’ಯಂಥ ತಾತ್ವಿಕ ಕೃತಿಯನ್ನು ತಿಳಿಯಾದ ಶೈಲಿಯಲ್ಲಿ ಸೊಗಸಾಗಿ ಎಂಥವರಿಗೂ ತಿಳಿಯುವಂತೆ ವಾಚನ- ಪ್ರವಚನ ಮಾಡಿದ ಪ್ರಯೋಗಶೀಲ. ಬಳ್ಳಾರಿ ರಾಘವರ ಶಿಷ್ಯತ್ವ ವಹಿಸಿ ಕನ್ನಡ, ತೆಲುಗು ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿದ್ದ ಈ ಹಿರಿ ಜೀವ ಬದುಕಿನ ನಾಟಕ ಮುಗಿಸಿದ್ದು 1994 ಮೇ 10ರಂದು.

ಗುರುವಾರ ಬೆಳಿಗ್ಗೆ 10ಕ್ಕೆ ಕೋ.ಚೆನ್ನಬಸಪ್ಪ ಅವರಿಂದ ಉದ್ಘಾಟನೆ. ಅಧ್ಯಕ್ಷತೆ: ಪ್ರೊ.ಎಂ.ಎಚ್.ಕೃಷ್ಣಯ್ಯ, ಅತಿಥಿಗಳು: ಜಯಾ ರಾಜಶೇಖರ್. ಅರವಿಂದ ಜತ್ತಿ, ನರಸಿಂಹಲು ವಡವಾಟಿ ಹಾಗೂ ಡಾ.ಬಿ.ವಿ.ರಾಜಾರಾಂ.

11.30ಕ್ಕೆ ಮೊದಲ ಗೋಷ್ಠಿ: ಪ್ರೊ. ನಾಗಭೂಷಣ ಸ್ವಾಮಿ (ಬಯಲಗಳಿಕೆಯ ಬೆಳಕು), ಗುರುಮೂರ್ತಿ ಪೆಂಡಕೂರು (ನಂದೇ ನಾ ಓದಿದೆ), ಚಂದ್ರಶೇಖರ ರೆಡ್ಡಿ (ಅನುವಾದ ಸಾಹಿತ್ಯ), ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ (ಕಾವ್ಯ ಮತ್ತು ವಚನಗಳು). ರಂಗಗೀತೆಗಳ ಗಾಯನ: ಸುಭದ್ರಮ್ಮ ಮನ್ಸೂರ.

ಮಧ್ಯಾಹ್ನ 2.30 ಎರಡನೇ ಗೋಷ್ಠಿ: ಡಾ.ಬಸವರಾಜ ಮಲಶೆಟ್ಟಿ (ಕನ್ನಡ ರಂಗಭೂಮಿ), ಡಾ.ಆರ್. ಶೇಷಶಾಸ್ತ್ರಿ (ತೆಲುಗು ರಂಗಭೂಮಿ), ಜಿ.ಹನುಮಚ್ಛಾಸ್ತ್ರಿ (ನಾ ಕಂಡ ದೊಡ್ಡನಗೌಡ), ಬೆಳಗಲ್ಲು ವೀರಣ್ಣ (ಗುರುಶಿಷ್ಯರ ಸಂಬಂಧ).

ಸಂಜೆ 6ಕ್ಕೆ ತೆಲುಗು ನಾಟಕ ‘ಕ್ರಾಂತಿಪುರುಷ ಬಸವಣ್ಣ’ (ಬಹುಪಾತ್ರದಲ್ಲಿ: ಚಂದ್ರಶೇಖರರೆಡ್ಡಿ ಗುತ್ತಿ) ಮತ್ತು ನೆಲ್ಲೂರು ರಾಮಕೃಷ್ಣ ನಾಟ್ಯ ಮಂಡಲಿಯಿಂದ ‘ಭಕ್ತ ರಾಮದಾಸು’ (ರಚನೆ: ಧರ್ಮವರಪು ಗೋಪಾಲಚಾರ್ಯಲು. ನಿರ್ದೇಶನ. ಪಿ. ರಾಮಸುಬ್ಬರೆಡ್ಡಿ) ಪ್ರದರ್ಶನ. ಉದ್ಘಾಟನೆ: ಕುಪ್ಪಂ ದ್ರಾವಿಡ ವಿವಿ ಕುಲಪತಿ ಡಾ. ಕಡಪ ರಮಣಯ್ಯ. ಅತಿಥಿ: ಡಾ.ಎ.ರಾಧಾಕೃಷ್ಣರಾಜು.

ಶುಕ್ರವಾರ ಬೆಳಿಗ್ಗೆ 10.30ಕ್ಕೆ ಗಮಕ ವಾಚನ: ಜಯಾ ರಾಜಶೇಖರ್, ಲಕ್ಷ್ಮಣ್ ಚೌಧರಿ, ಎಂ.ಆರ್. ಸತ್ಯನಾರಾಯಣ, ರಾಜಾರಾಮಮೂರ್ತಿ. ಅಧ್ಯಕ್ಷತೆ: ನರಸಿಂಹಲು ವಡವಾಟಿ.

2.30ಕ್ಕೆ ರಂಗಸಂವಾದ. ಅತಿಥಿಗಳು: ಕೆ. ಪೊಂಪನ ಗೌಡ, ಕೆ.ಚೆನ್ನಪ್ಪ, ಸಿ.ವಿ.ಶ್ರೀನಿವಾಸಯ್ಯ, ಅಧ್ಯಕ್ಷತೆ: ಡಾ.ಬಿ.ವಿ. ರಾಜಾರಾಂ. ನಂತರ ಯಾಜಿ ಅಕಾಡೆಮಿ ತಂಡದಿಂದ ‘ಸಾಯದವನ ಸಮಾಧಿ’ (ರಚನೆ: ಡಾ.ಜೋಳದರಾಶಿ ದೊಡ್ಡನಗೌಡ, ನಿ: ಗಣೇಶ ಯಾಜಿ) ನಾಟಕ.

ಸಂಜೆ 6ಕ್ಕೆ ಬಳ್ಳಾರಿಯ ಅಭಿನಯ ಕಲಾಕೇಂದ್ರ ತಂಡದಿಂದ ‘ಶಿವನಾಣೆ’ (ರಚನೆ: ಜೋಳದರಾಶಿ ದೊಡ್ಡನಗೌಡ. ನಿ: ಕೆ. ಜಗದೀಶ), ಸಾಕಾರ ತಂಡದಿಂದ ‘ಅಭಯ’ (ನಿ:ಗಣೇಶ ಯಾಜಿ) ನಾಟಕ ಪ್ರದರ್ಶನ. ಅತಿಥಿಗಳು: ಮನು ಬಳಿಗಾರ್, ಹೆಚ್.ಟಿ. ಸೋಮಶೇಖರ ರೆಡ್ಡಿ . ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆಸಿ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT