ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿ ಹೈದರಾಬಾದ್ ರಣಜಿ ತಂಡದ ಕೋಚ್

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅನುಭವಿ ಆಟಗಾರ ಸುನಿಲ್ ಜೋಶಿ ಹೈದರಾಬಾದ್ ರಣಜಿ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಅವರು ಒಂದು ವರ್ಷದ ಅವಧಿಗೆ (2011-12ರ ಋತು) ಹೈದರಾಬಾದ್ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣ ಕರ್ನಾಟಕ ರಣಜಿ ತಂಡದ ಆಟಗಾರನಾಗಿ ಅವರ ವೃತ್ತಿಜೀವನಕ್ಕೆ ತೆರೆಬಿದ್ದಿದೆ.

ಜೋಶಿ ಹೈದರಾಬಾದ್ ತಂಡದ ಕೋಚ್ ಹುದ್ದೆ ಅಲಂಕರಿಸುವರು ಎಂಬ ಸುದ್ದಿ ರಹಸ್ಯವಾಗಿ ಉಳಿದಿರಲಿಲ್ಲ. ರಣಜಿ ತಂಡದ ಕೋಚ್ ಆಗುವರು ಎಂಬುದನ್ನು ಎಚ್‌ಸಿಎ ಈ ಹಿಂದೆಯೇ ಖಚಿತಪಡಿಸಿತ್ತು. `ಪ್ರಜಾವಾಣಿ~ ಈ ಕುರಿತು ವರದಿ ಪ್ರಕಟಿಸಿತ್ತು. ಮಾತ್ರವಲ್ಲ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೆಲ ದಿನಗಳ ಹಿಂದೆ ಪ್ರಕಟಿಸಿದ ರಣಜಿ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜೋಶಿ ಅವರ ಹೆಸರು ಇರಲಿಲ್ಲ.

ಜೋಶಿ ತಮ್ಮ ನಿರ್ಧಾರವನ್ನು ಕೆಎಸ್‌ಸಿಎಗೆ ತಿಳಿಸಿದ್ದಾರೆ. ಹೈದರಾಬಾದ್ ತಂಡ ಇದೀಗ ರಣಜಿಯಲ್ಲಿ `ಪ್ಲೇಟ್ ವಿಭಾಗ~ ದಲ್ಲಿ ಆಡುತ್ತಿದೆ. ಈ ತಂಡವನ್ನು ಸೂಪರ್ ಲೀಗ್ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ಜೋಶಿ ಮುಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT