ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಜಾತಿ ಸಂಕೇತವಲ್ಲ

Last Updated 6 ಫೆಬ್ರುವರಿ 2012, 9:25 IST
ಅಕ್ಷರ ಗಾತ್ರ

ಮಹಾಲಿಂಗಪುರ: ಕೃಷಿ ಕಾಯಕದಿಂದ ಮಾತ್ರ ವಿಶ್ವಕ್ಕೆ ಶಾಂತಿ ಲಭಿಸಲು ಸಾಧ್ಯ ಎಂದು  ಕೂಡಲಸಂಗಮದ  ಬಸವ ಮೃತ್ಯುಂಜಯ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ರನ್ನಬೆಳಗಲಿಯ ಸಿದ್ಧಾರೂಢ ಹಾಗೂ ಶಂಭುಲಿಂಗ ಸ್ವಾಮೀಜಿ  ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಜರುಗಿದ “ವ್ಯವಸಾಯ ಮಾಡ್ವಂಗೆ ದುರ್ಭಿಕ್ಷೆಡೆ ಯುಂಟೆ?” ವಿಷಯ ಕುರಿತಾದ ಕೃಷಿ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಪ್ಪರಗಿ ಸುಕ್ಷೇತ್ರದ ಪ್ರಭು ಬೆನ್ನಾಳೆ ಮಹಾರಾಜರು ಮಾತನಾಡಿ, ಜ್ಞಾನ ಜಾತಿಯ ಸಂಕೇತವಲ್ಲ. ಅದು ಜ್ಯೋತಿಯ ಸಂಕೇತ ಎಂದ  ಹೇಳಿದರು.

ಬೆಡಿಕಿಹಾಳದ ಸಾವಯವ ಕೃಷಿ ತಜ್ಞ ಸುರೇಶ ದೇಸಾಯಿ, ಬೆಳಗಾವಿಯ ಶಾಸ್ವತ ಯೋಗಿಕ ಕೃಷಿ ತಜ್ಞೆ ಮಾತೋಶ್ರಿ ಶಾಂತಾ, ಧಾರವಾಡದ ನಿವೃತ್ತ ಕೃಷಿ ತಜ್ಞ ಡಾ.ವಿಜಯಕುಮಾರ ಗಿಡ್ಡನವರ, ಹಾವೇರಿಯ ಶಿವನಾಗಯ್ಯ ಹಿರೇಮಠ, ಮಧುರಖಂಂಡಿಯ ಸಾವಯವ ಕೃಷಿ ತಜ್ಞ ಶಂಕರ ಜೋಂಗ ನವರ ಮಾತನಾಡಿದರು.

ನಿಪ್ಪಾಣಿಯ ಕೃಷಿ ಅಧಿಕಾರಿ ಎಸ್.ಎಂ.ಸಂಘಾವೆ, ಶೇಖರ ಪರಪ್ಪನವರ, ಮಾಜಿ ಶಾಸಕ ಬಿ.ಜಿ. ಜಮಖಂಡಿ, ರನ್ನ ಬೆಳಗಲಿಯ ಗ್ರಾ.ಪಂ. ಸದಸ್ಯರಾದ ಲಕ್ಷಣ ಶಿರೋಳ, ಗಂಗಪ್ಪ ಅಮಾತಿ, ಶಿವಪ್ಪ ಅಮಾತಿ, ಯಮನಪ್ಪ ಕಣಬೂರ, ಯಮನಪ್ಪ ದೊಡಮನಿ ವೇದಿಕೆಯಲ್ಲಿದ್ದರು.

 ಧರೆಪ್ಪ ಸಾಂಗಲೀಕರ ಸ್ವಾಗತಿಸಿದರು. ಬಸವ ರಾಜ ಪುರಾಣಿಕ ಮಾಲಾರ್ಪಣೆ ಮಾಡಿ ದರು. ಸಿದ್ದರಾಮ ಶಿವಯೋಗಿಗಳು ಕೃಷಿ ತಜ್ಞರನ್ನು ಸನ್ಮಾನಿಸಿದರು.
ದೇವೇಂದ್ರ ಬಿಸ್ವಾಗರ, ಪ್ರೊ.ಮೌನೇಶ ಬಡಿಗೇರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT