ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಹೆಚ್ಚಿಸಿಕೊಳ್ಳಲು ಸಲಹೆ

Last Updated 24 ಮಾರ್ಚ್ 2011, 7:05 IST
ಅಕ್ಷರ ಗಾತ್ರ

ಮಂಡ್ಯ: ಗತದಿನಗಳ ಸತ್ಯ, ಸುಂದರ, ಸಮಗ್ರ ರೂಪ ತಿಳಿಸುವುದೇ ಇತಿಹಾಸ. ನಿತ್ಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇತಿಹಾಸದ ಅಧ್ಯಾಪಕರು ತಮ್ಮ ಜ್ಞಾನವನ್ನು ವಿಸ್ತಾರ ಪಡಿಸಿಕೊಳ್ಳುವ ಮೂಲಕ ಪ್ರಸ್ತುತರಾಗಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ವಿ.ಶ್ರೀನಿವಾಸ್ ಸಲಹೆ ಮಾಡಿದರು.

ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ, ಸರ್ಕಾರಿ ಮಹಾವಿದ್ಯಾಲಯದ ಇತಿಹಾಸ ವಿಭಾಗ, ಕರ್ನಾಟಕ ಸಂಘ ಜಂಟಿಯಾಗಿ ಬುಧವಾರ ಆಯೋಜಿಸಿದ್ದ ‘ಆಧುನಿಕ ಪೂರ್ವ ಮತ್ತು ಆಧುನಿಕ ಯುಗದ ಇತಿಹಾಸಕ್ಕೆ  ಮಂಡ್ಯ ಜಿಲ್ಲೆಯ ಕೊಡುಗೆಗಳು’ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ವೈಚಾರಿಕ ದೃಷ್ಟಿಕೋನದ ಸಂಶೋಧನೆ ಕಡಿಮೆಯಾಗಿದೆ. ಇತಿಹಾಸ ಅಧ್ಯಯನದ ಚಟುವಟಿಕೆಗಳು ಕಡಿಮೆ ಆಗಿವೆ. ಸಂಶೋಧನೆ, ಅಧ್ಯಯನ ಮತ್ತು ಬೋಧನೆಗೂ ಪರಸ್ಪರ ಸಂಬಂಧವಿದ್ದು, ಬೆಳವಣಿಗೆಗಳ ವೇಗ ದೃಷ್ಟಿಯಿಂದ ನಿರಂತರ ಅಧ್ಯಯನ ಇಂದು ಅಗತ್ಯವಷ್ಟೇ ಅಲ್ಲ, ಅನಿವಾರ್ಯ ಕೂಡಾ ಎಂದರು.

ಕಾಲಘಟ್ಟದಲ್ಲಿ ಇತಿಹಾಸ ದಾಖಲಾಗುವಾಗ ವಿಕೃತವಾಗುವ ಸಂಭವವು ಇದೆ. ಇದಕ್ಕೆ ಸರಿಯಾದ ನಿರೂಪಣೆ ಇಲ್ಲದಿರುವುದು ಒಂದುಕಾರಣವಾದರೆ, ಉದ್ದೇಶ ಪೂರ್ವಕವಾಗಿ ವಿಕೃತಗೊಳಿಸುವುದು ಇನ್ನೊಂದು ಕಾರಣವಾಗಲಿದೆ ಎಂದರು.

ಯಾವುದೇ ಕಟ್ಟುಪಾಡುಗಳಿಲ್ಲದೇ ಚರಿತ್ರೆಯ ವ್ಯಾಖ್ಯಾನ ಆಗಬೇಕಿದೆಎಂದು ಪ್ರತಿಪಾದಿಸಿದ ಅವರು, ಚಾರಿತ್ರಿಕ ಅಂಶಗಳ ಕ್ರೋಢೀಕರಣದ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಕೆಲಸವು ಆಗಬೇಕು. ಮಖ್ಯವಾಗಿ ಸ್ಥಳೀಯ ಇತಿಹಾಸ ಗಳ ಅಧ್ಯಯನಕ್ಕೆ ಒತ್ತು ನೀಡಬೇಕು ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ  ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ಅವರು, ಇತಿಹಾಸ ಪ್ರಾಧ್ಯಾಪಕರು ಸ್ಥಳೀಯ ಇತಿಹಾಸವನ್ನು ದಾಖಲಿಸುವ ಕೆಲಸದಲ್ಲಿ ತೊಡಗಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದು ಹೆಚ್ಚಿನ ಪ್ರಾಧ್ಯಾಪಕರ ಕಾರ್ಯ ಕೇವಲ ಬೋಧನೆಗಷ್ಟೇ ಸೀಮಿತವಾಗಿದೆ. ಕೆಲವರದು ವಾಕ್ ಸಾಮರ್ಥ್ಯ ಇದ್ದರೂ ವಿಷಯ ಸಾಮರ್ಥ್ಯ ಇಲ್ಲವಾಗಿದೆ ಎಂದು ಹೇಳಿದರು.
ಸರ್ಕಾರಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಡಿ.ಕೃಷ್ಣೇಗೌಡ, ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆಯ ನಿರ್ದೇಶಕ ಡಾ. ಆರ್.ಗೋಪಾಲ್ ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT