ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದ ನಿಜವಾದ ಪರೀಕ್ಷೆ ಆಗಲಿ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸರ್ಕಾರಿ ಪದವಿ ಕಾಲೇಜುಗಳ 2,900ಕ್ಕೂ ಹೆಚ್ಚು ಹುದ್ದೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ನೇಮಕ ಮಾಡಿಕೊಳ್ಳುವ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಪ್ರಕಟಿಸಿದ್ದಾರೆ. ಈ  ನಿರ್ಧಾರ ಅತ್ಯಂತ ಸ್ವಾಗತಾರ್ಹ. ಈ ನಿರ್ಧಾರದ ಮೂಲಕ, ಅಧ್ಯಾಪಕರ ನೇಮಕಾತಿ ಸಂದರ್ಭದಲ್ಲಿ ಎದುರಾಗುವ ಭ್ರಷ್ಟಾಚಾರದ ಜೊತೆಜೊತೆಗೆ ವಿಶ್ವವಿದ್ಯಾಲಯಗಳ ಅಂಕಗಳ ತರತಮಗಳ ರಾಜಕಾರಣಕ್ಕೂ ಕೊನೆ ಹೇಳಬಹುದಾಗಿದೆ.

ಅದೇ ವೇಳೆಗೆ, ಈ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಕೇವಲ ಯಾಂತ್ರಿಕ ನೆನಪಿನ ಆಧಾರದಲ್ಲಿ ಉತ್ತರಿಸಬಹುದಾದ ಒಂದು ಅಂಕದ ಪ್ರಶ್ನೆಗಳನ್ನು ಮಾತ್ರ ಒಳಗೊಳ್ಳದೆ, ವಿದ್ಯಾರ್ಥಿಗಳು ಆಯಾ ವಿಷಯದಲ್ಲಿ ಗಳಿಸಿರುವ ಜ್ಞಾನದ ನಿಜವಾದ ಪರೀಕ್ಷೆಯಾಗುವಂತಾಗಬೇಕು.

ಈ ಪರೀಕ್ಷೆ ಸಾಮಾಜಿಕ ನ್ಯಾಯದ ಖಚಿತ ಅಳತೆಗೋಲನ್ನು ಒಳಗೊಂಡು ಪ್ರತಿಭೆಯನ್ನು ಗುರುತಿಸುವ ದಿಕ್ಕಿನಲ್ಲಿ ಪಾರದರ್ಶಕವಾಗಿ ನಡೆದರೆ, ಎಲ್ಲ ಜಾತಿ, ವರ್ಗಗಳ ನಿಜವಾದ ಪ್ರತಿಭಾವಂತರಿಗೆ ನ್ಯಾಯ ದೊರಕುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT