ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿ ಸೋಗಿನಲ್ಲಿ ಪಂಗನಾಮ

Last Updated 12 ಸೆಪ್ಟೆಂಬರ್ 2013, 20:05 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಯೊಬ್ಬ  ಜ್ಯೋತಿಷಿಯ ಸೋಗಿನಲ್ಲಿ ಉಪನ್ಯಾ ಸಕಿಯಿಂದ ` 16.40 ಲಕ್ಷ ಹಣ ಹಾಗೂ ಚಿನ್ನಾಭರಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಹಲಸೂರುಗೇಟ್‌ ಪೊಲೀಸರು ರಾಜಾಜಿನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಮಂಜುನಾಥ್‌ (19) ಎಂಬಾತನನ್ನು ಬಂಧಿಸಿದ್ದಾರೆ. ಮೂಲತಃ ಬಾಗಲ ಕೋಟೆ ಜಿಲ್ಲೆಯ ಆತ ನಗರದ ತಾಂತ್ರಿಕ ಶಿಕ್ಷಣ ಸಂಸ್ಥೆಯೊಂದರ ಉಪನ್ಯಾಸಕಿ ಲಕ್ಷ್ಮಿ (ಹೆಸರು ಬದಲಿಸಿದೆ) ಎಂಬುವರಿಗೆ ವಂಚಿಸಿದ್ದ.

‘ಪ್ರಸಿದ್ಧ ಜ್ಯೋತಿಷಿಯಾದ ತನಗೆ ಜನರ ಸಮಸ್ಯೆಗಳನ್ನು ಪರಿಹರಿಸುವ ದಿವ್ಯಶಕ್ತಿ ಸಿದ್ಧಿಸಿದೆ’ ಎಂದು ಮಂಜು ನಾಥ್‌ ಪತ್ರಿಕೆಯೊಂದರಲ್ಲಿ ಜಾಹೀರಾತು ಕೊಟ್ಟಿದ್ದ. ಕಾಲೇಜಿನಲ್ಲಿ ನಾಲ್ಕು ವರ್ಷಗ ಳಿಂದ ವೇತನ ಬಡ್ತಿ ಸಿಗದೆ ಬೇಸರ ಗೊಂಡಿದ್ದ ಲಕ್ಷ್ಮಿ, ಆ ಜಾಹೀರಾತನ್ನು ನೋಡಿ ಆತನ ಮೊಬೈಲ್‌ಗೆ ಏಪ್ರಿಲ್‌ನಲ್ಲಿ ಕರೆ ಮಾಡಿದ್ದರು.

ಆಗ ಆರೋಪಿ, ‘ನಿಮ್ಮ 12 ವರ್ಷದ ಮಗನನ್ನು ಮಾಟ ಮಂತ್ರದ ಮೂಲಕ ಕೊಲೆ ಮಾಡಲು ನೆರೆಹೊರೆಯವರು ಸಂಚು ರೂಪಿಸಿದ್ದಾರೆ. ಆತನನ್ನು ಪ್ರಾಣಾಪಾಯದಿಂದ ಪಾರು ಮಾಡಲು  ಮತ್ತು ವೇತನ ಬಡ್ತಿ ಸಿಗುವಂತೆ ಮಾಡಲು ` 25 ಲಕ್ಷ ವೆಚ್ಚದಲ್ಲಿ ಪೂಜೆ ಮಾಡಬೇಕು. ಹಣ ಕೊಟ್ಟರೆ ಪೂಜೆ ಮಾಡಿ ಸಮಸ್ಯೆ ಬಗೆಹರಿಸುತ್ತೇನೆ. ಹಣ ಪಡೆದುಕೊಳ್ಳಲು ತನ್ನ ಸಹಾಯಕನನ್ನು ಕಳುಹಿಸುತ್ತೇನೆ’ ಎಂದು ಲಕ್ಷ್ಮಿ ಅವರಿಗೆ ಸುಳ್ಳು ಹೇಳಿದ್ದ.

ಅಲ್ಲದೇ, ‘ಕಣ್ಣಿಗೆ ಕಾಣಿಸದ ವ್ಯಕ್ತಿಯಾದ ತಾನು ತುಮಕೂರಿನ ಮಠ ವೊಂದರಲ್ಲಿ 180 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೇನೆ. ಪೂಜೆಗೆ ನೀಡುವ ಹಣವನ್ನು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ’ ಎಂದು ಅವರನ್ನು ನಂಬಿಸಿದ್ದ.

ಆ ನಂತರ ಯುವಕನೊಬ್ಬ ಆರೋಪಿಯ ಸಹಾಯಕನೆಂದು ಹೇಳಿಕೊಂಡು ಲಕ್ಷ್ಮಿ ಅವರನ್ನು ಮೇ ಮತ್ತು ಜೂನ್‌ ತಿಂಗಳಿನಲ್ಲಿ ಭೇಟಿಯಾಗಿ ನಾಲ್ಕು ಕಂತುಗಳಲ್ಲಿ ` 16.40 ಲಕ್ಷ ಹಣ, 145 ಗ್ರಾಂ ಚಿನ್ನಾಭರಣ ಹಾಗೂ ಎರಡು ಕೆ.ಜಿ ಬೆಳ್ಳಿ ವಸ್ತುಗಳನ್ನು ಪಡೆದುಕೊಂಡು ಹೋಗಿದ್ದ.

ಬಳಿಕ ಲಕ್ಷ್ಮಿ ಅವರು ಆರೋಪಿಯನ್ನು ಮೊಬೈಲ್‌ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಇದರಿಂದ ಅನುಮಾನಗೊಂಡ ಅವರು ಠಾಣೆಗೆ ದೂರು ನೀಡಿದರು. ಮಂಜು ನಾಥ್‌ನ ಮೊಬೈಲ್ ಸಂಖ್ಯೆ ಮತ್ತು ಕರೆಗಳ ಮಾಹಿತಿ ಆಧರಿಸಿ ತನಿಖೆ ಕೈಗೊಂ ಡಾಗ ಆತ ಅಗ್ರಹಾರ ದಾಸರಹಳ್ಳಿಯಲ್ಲಿ ಇರುವುದು ಗೊತ್ತಾಯಿತು. ನಂತರ ಆತನ ಮನೆಯನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯೇ ಜ್ಯೋತಿಷಿಯ ಸೋಗಿ ನಲ್ಲಿ ಲಕ್ಷ್ಮಿ ಅವರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದ ಮತ್ತು ಆತನೇ ಸಹಾಯ ಕನಂತೆ ಬಂದು ಅವರಿಂದ ಹಣ ಪಡೆದು ಕೊಂಡು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮದ್ಯವ್ಯಸನಿಯಾದ ಆತ ಮೋಜಿನ ಜೀವನ ನಡೆಸಲು ಬೇಕಿದ್ದ ಹಣ ಸಂಪಾ ದನೆಗಾಗಿ ಈ ಕೃತ್ಯ ಎಸಗಿದ್ದಾಗಿ ವಿಚಾ ರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಮಂಜು ನಾಥ್‌ ಐಷಾರಾಮಿ ಜೀವನ ನಡೆಸು ತ್ತಿದ್ದರಿಂದ ಪೋಷಕರು ಅನುಮಾನ ಗೊಂಡು ವಿಚಾರಿಸಿದಾಗ ಆತ ‘ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ
ಹಣ ಬಂದಿದೆ’ ಎಂದು ಅವರಿಗೆ ಸುಳ್ಳು ಹೇಳಿ ನಂಬಿಸಿದ್ದ. ಬಂಧಿತನ ತಂದೆ ಮತ್ತು ಚಿಕ್ಕಪ್ಪ ಜ್ಯೋತಿಷಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT