ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ-20: ಕೆಎಸ್‌ಎಸ್, ಮಹೇಶ್ ಕಾಲೇಜಿಗೆ ಜಯ

Last Updated 14 ಡಿಸೆಂಬರ್ 2012, 10:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೋಹಿತ್‌ರ ಆಲ್‌ರೌಂಡ್ ಆಟದ (55 ಮತ್ತು 32ಕ್ಕೆ 2) ನೆರವು ಪಡೆದ ಕೆಎಸ್‌ಎಸ್ ಕಾಲೇಜು ತಂಡ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ `ಆಕ್ಸ್ ಫರ್ಡ್ ಕಪ್ ಟಿ-20' ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಚೇತನಾ ಪಿಯು ಕಾಲೇಜು ವಿರುದ್ಧ 45 ರನ್ ಅಂತರದ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಎಸ್‌ಎಸ್ ತಂಡದ ಪರ ಆರಂಭಿಕ ಆಟಗಾರರಾದ ವಿ. ಸತೀಶ್ ಹಾಗೂ ಕೆ. ರಾಕೇಶ್ ಉತ್ತಮ ಆರಂಭ ಒದಗಿಸಿದರು. ಬಳಿಕ ಕ್ರೀಸ್‌ನಲ್ಲಿ ನಿಂತ ರೋಹಿತ್ ಅರ್ಧಶತಕ (55) ಬಾರಿಸುವ ಮೂಲಕ ಸ್ಕೋರ್ ಹೆಚ್ಚಿಸಿದರು. ಅಂತಿಮವಾಗಿ ಕೆಎಸ್‌ಎಸ್ ತಂಡ 9 ವಿಕೆಟ್ ನಷ್ಟಕ್ಕೆ 186 ರನ್‌ಗಳ ಭಾರಿ ಮೊತ್ತ ದಾಖಲಿಸಿತು.

ಗುರಿಯ ಬೆನ್ನುಹತ್ತಿದ ಚೇತನಾ ಕಾಲೇಜು ಆರಂಭದಲ್ಲೇ ಮುಗ್ಗರಿಸಿತು. ಎನ್. ಸಂಕೇತ್ ಕೇವಲ 7 ರನ್‌ಗೆ ನಿರ್ಗಮಿಸಿದರು. ಎಚ್. ಪ್ರತಾಪ್ ಜಿ. ಆತೀಶ್ ಹಾಗೂ ಪ್ರತೀಕ್ ಎರಡಂಕಿಯ ಸ್ಕೋರ್ ಗಳಿಸುವ ಮೂಲಕ ಗೆಲುವಿಗೆ ಯತ್ನಿಸಿದರಾದರೂ ಫಲ ನೀಡಲಿಲ್ಲ. ಅಂತಿಮವಾಗಿ ಚೇತನಾ ಕಾಲೇಜು ತಂಡ 141 ರನ್‌ಗೆ ಸರ್ವಪತನಗೊಂಡಿತು. ಕೆಎಸ್‌ಎಸ್ ಪರ ಪಿ. ಸಂದೀಪ್ 23ಕ್ಕೆ 4 ಹಾಗೂ ರೋಹಿತ್ 32ಕ್ಕೆ 2 ವಿಕೆಟ್ ಉರುಳಿಸಿದರು. ಎಲ್. ಅನಿಲ್, ಎನ್. ಗಣೇಶ್ ಹಾಗೂ ಎ. ಸುನೀಲ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಮಹೇಶ್ ಕಾಲೇಜಿಗೆ ಗೆಲುವು
ಮತ್ತೊಂದು ಪಂದ್ಯದಲ್ಲಿ ಮಹೇಶ್ ಪಿಯು ಕಾಲೇಜು ತಂಡ ಜೈನ್ ಕಾಲೇಜು ತಂಡವನ್ನು 9 ವಿಕೆಟ್ ಅಂತರದಿಂದ ಮಣಿಸಿತು.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಜೈನ್ ಕಾಲೇಜು ಪರ ನಾರಾಯಣ್ (20) ಹಾಗೂ ಕೆ. ರೋಹನ್ (17) ಹೊರತುಪಡಿಸಿ ಉಳಿದವರು ಎರಡಂಕಿ ತಲುಪಲಿಲ್ಲ. ಪರಿಣಾಮ 16.1 ಓವರ್‌ಗಳಲ್ಲಿ 84 ರನ್‌ಗಳಿಗೆ ಕುಸಿಯಿತು. ಎದುರಾಳಿ ತಂಡದ ಪರ ಕೆ.ಎಸ್. ಸೂರಜ್, ವಂಶಿ, ಅಮನ್ ಹಾಗೂ ಪಿ. ಪವನ್ ತಲಾ ಎರಡು ವಿಕೆಟ್ ಉರುಳಿಸಿದರು.

ಸುಲಭ ಗುರಿಯತ್ತ ಮುನ್ನಡೆದ ಮಹೇಶ್ ಕಾಲೇಜು ಪರ ಆರಂಭಿಕ ಸಚಿನ್ ಹೆಗ್ಡೆ 14 ರನ್ ಬಾರಿಸಿ ನಿರ್ಗಮಿಸಿದರೆ, ಮತ್ತೊಬ್ಬ ಆರಂಭಿಕ ಸಚಿನ್ ಹಿರೇಮಠ (33) ಹಾಗೂ ಪವನ್ ಪಾಟೀಲ್ (19) ಅಜೇಯ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 9.5 ಓವರ್‌ಗಳಲ್ಲಿ ತಂಡ ಗೆಲುವು ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್
ಕೆಎಸ್‌ಎಸ್ ಕಾಲೇಜು, ಹುಬ್ಬಳ್ಳಿ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 186 (ರೋಹಿತ್ 55, ವಿ. ಸತೀಶ್ 42, ಕೆ. ರಾಕೇಶ್ 36. ಪ್ರತೀಕ್ 18ಕ್ಕೆ 3, ಜಿ. ಪುನೀತ್ 28ಕ್ಕೆ 3)
ಚೇತನಾ ಪಿಯು ಕಾಲೇಜು: 19.4 ಓವರ್‌ಗಳಲ್ಲಿ 141 (ಎಚ್. ಪ್ರತಾಪ್ 34, ಪ್ರತೀಕ್ 16. ಸಂದೀಪ್ 23ಕ್ಕೆ 4, ರೋಹಿತ್ 32ಕ್ಕೆ 2), ಪಂದ್ಯ ಪುರುಷ: ಪ್ರತೀಕ್
ಜೈನ್ ಕಾಲೇಜು: 16.1 ಓವರ್‌ಗಳಲ್ಲಿ 84 (ನಾರಾಯಣ್ 20, ಕೆ. ರೋಹನ್ 17, ಅಮನ್ 6ಕ್ಕೆ 2, ಪಿ. ಪವನ್ 10ಕ್ಕೆ 2).
ಮಹೇಶ್ ಕಾಲೇಜು: 9.5 ಓವರ್‌ಗಳಲ್ಲಿ 1 ವಿಕೆಟ್‌ಗೆ 88 (ಸಚಿನ್ ಹೆಗ್ಡೆ 14, ಸಚಿನ್ ಹಿರೇಮಠ 33, ಪವನ್ ಪಾಟೀಲ್ 19. ಸಚಿನ್ 11ಕ್ಕೆ 1) ಪಂದ್ಯ ಪುರುಷ: ಸಚಿನ್ ಹಿರೇಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT