ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಅಧ್ಯಕ್ಷರಾಗಿ ಗುಂಡುರಾವ್

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪದಾಧಿಕಾರಿಗಳಿಲ್ಲದೇ ಆರು ವರ್ಷಗಳಿಂದ ಪರದಾಡುತ್ತಿದ್ದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆಯ (ಕೆಟಿಟಿಎ) ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಭಾನುವಾರ ನಡೆದ ಕೆಟಿಟಿಎ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿದ್ದು, ಶಾಸಕ ದಿನೇಶ್ ಗುಂಡುರಾವ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಟಿಟಿ ಸಂಸ್ಥೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಕಳೆದ ವರ್ಷದ ಫೆಬ್ರುವರಿ 12 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಚುನಾವಣೆಯ ದಿನ ನಡೆದ `ನಾಟಕೀಯ' ಬೆಳವಣಿಗೆ ಹಿನ್ನೆಲೆಯಲ್ಲಿ ಚುನಾವಣೆಯನ್ನು ರದ್ದು ಮಾಡಲಾಗಿತ್ತು. ಜಿಲ್ಲಾ ಪದಾಧಿಕಾರಿಗಳ ಮತ ಚಲಾವಣೆ ವಿಷಯದಲ್ಲಿ ಉಂಟಾದ ಗೊಂದಲ ಇದಕ್ಕೆ ಕಾರಣವಾಗಿತ್ತು. 2007ರಲ್ಲಿ  ಕೆಟಿಟಿಎ ಮಧ್ಯಂತರ ಸಮಿತಿ (ಅಡ್ ಹಾಕ್) ರಚಿಸಲಾಗಿತ್ತು. ಅದಾದ ನಂತರ ಈಗ ಮೊದಲ ಸಲ ಸೂಸೂತ್ರವಾಗಿ ಚುನಾವಣೆ ನಡೆಯಿತು.

ಸಿವಿಎಲ್ ನಾಗೇಂದ್ರ, ಜಿಎನ್ ಸತ್ಯನಾರಾಯಣ, ಎಚ್.ಡಿ. ರಮೇಶ್ ಶಾಸ್ತ್ರಿ, ಡಿ.ಬಿ. ರಮೇಶ್, ಗುನಾಲನ್, ಎಸ್. ಸುಧಾಕರನ್ ಮತ್ತು ಹರೀಷ್ ಪುತ್ತೂರನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಡಳಿತ ವಿಭಾಗದ ಗೌರವ ಕಾರ್ಯದರ್ಶಿಯಾಗಿ ಕೆ.ಎಸ್. ವಸಂತ್ ಕುಮಾರ್ ಆಯ್ಕೆಯಾದರು.

ಪದಾಧಿಕಾರಿಗಳು ವಿವರ: ದಿನೇಶ್ ಗುಂಡುರಾವ್ (ಅಧ್ಯಕ್ಷರು), ಸಿವಿಎಲ್ ನಾಗೇಂದ್ರ, ಜಿ.ಎನ್. ಸತ್ಯನಾರಾಯಣ, ಎಚ್.ಡಿ. ರಮೇಶ್ ಶಾಸ್ತ್ರಿ, ಡಿ.ಬಿ. ರಮೇಶ್, ಗುನಾಲನ್, ಎಸ್. ಸುಧಾಕರನ್ ಮತ್ತು ಹರೀಷ್ ಪುತ್ತೂರನ್ (ಉಪಾಧ್ಯಕ್ಷರು), ಕೆ.ಎಸ್. ವಸಂತ್ ಕುಮಾರ್ (ಗೌರವ ಕಾರ್ಯದರ್ಶಿ, ಆಡಳಿತ), ಆರ್. ನಂದನ್ (ಗೌರವ ಕಾರ್ಯದರ್ಶಿ, ತಾಂತ್ರಿಕ), ಟಿ.ಜಿ. ಉಪಾಧ್ಯ ಹಾಗೂ ಟಿ.ಎಸ್. ರಾಮಕುಮಾರ್ (ಗೌರವ ಜಂಟಿ ಕಾರ್ಯದರ್ಶಿ), ಬೋನಾ ಥಾಮಸ್ ಜಾನ್ (ಗೌರವ ಖಚಾಂಚಿ), ಡಾ. ಪಿ. ದಯಾನಂದ್ ಪೈ (ರಾಜ್ಯ ಟಿಟಿ ಸಂಸ್ಥೆಯ ಪೋಷಕ) ಮತ್ತು ನಿವೃತ್ತ ಐಎಎಸ್ ಅಧಿಕಾರಿ ಜೆ. ಅಲೆಕ್ಸಾಂಡರ್ (ಚೇರ್‌ಮನ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT