ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ನಾರ್ತ್ ಫ್ರಂಟಿಯರ್ ಶುಭಾರಂಭ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಧಾರವಾಡ: ನಾರ್ತ್ ಫ್ರಂಟಿಯರ್ ರೈಲ್ವೆ ತಂಡ ಗುರುವಾರ ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ಅಖಿಲ ಭಾರತ ರೈಲ್ವೆ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ 3-0ಯಿಂದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ರೈಲ್ವೆ ತಂಡದ ವಿರುದ್ಧ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿತು.

ನಾರ್ತ್ ಫ್ರಂಟಿಯರ್‌ನ ಎ. ಅಧಿಕಾರಿ 11-4, 11-6, 11-9ರಿಂದ ಕೆ.ಸುಧಾಕರ್ ವಿರುದ್ಧವೂ; ಎ. ದಾಸ್ 11-8, 10-12, 11-6, 11-8ರಿಂದ ಎನ್. ಸೆಂಥಿಲ್ ಮೇಲೂ; ಆರ್. ಸರ್ಕಾರ್ 11-2, 11-1, 11-7ರಿಂದ ಆರ್. ಜಯಪ್ರಭು ರಾಮ್ ವಿರುದ್ಧವೂ ಗೆಲುವು ಪಡೆದರು.

ಮತ್ತೊಂದು ಪಂದ್ಯದಲ್ಲಿ ಸೆಂಟ್ರಲ್ ರೈಲ್ವೆ 3-0ಯಿಂದ ಪೂರ್ವ ಕರಾವಳಿ ರೈಲ್ವೆ ತಂಡವನ್ನು ಪರಾಭವಗೊಳಿಸಿತು. ಅಮನ್ ಬಲಗು 11-5, 11-2, 11-9ರಿಂದ ಪ್ರೀತಮ್ ಘೋಷ್ ಅವರನ್ನು; ಓಂಕಾರ್ ತಾಲ್ಲೂಕ್‌ದಾರ್ 11-7, 11-6, 11-5ರಿಂದ ತೌಫಿಕ್ ಅಹ್ಮದ್ ಅವರನ್ನು; ಮಾತಂಡ ಬನಿವಾಲೆ 11-8, 11-8, 11-9ರಿಂದ ಬಿ. ಸಂಜೀವ್ ಅವರನ್ನು ಸೋಲಿಸಿದರು.

ಮಹಿಳಾ ವಿಭಾಗದಲ್ಲಿ ಪಶ್ಚಿಮ ರೈಲ್ವೆ ತಂಡ 3-0ಯಿಂದ ಸೆಂಟ್ರಲ್ ರೈಲ್ವೆ ತಂಡದ ಮೇಲೂ; ಆಗ್ನೇಯ ರೈಲ್ವೆ 3-0ಯಿಂದ ಮೆಟ್ರೊ ರೈಲ್ವೆ ವಿರುದ್ಧವೂ ಗೆಲುವು ಪಡೆದವು. ಹಿರಿಯರ ವಿಭಾಗದಲ್ಲಿ ಆತಿಥೇಯ ನೈಋತ್ಯ ರೈಲ್ವೆ `ಎ~ ತಂಡ 3-1ರಿಂದ ಸೆಂಟ್ರಲ್ ರೈಲ್ವೆ ತಂಡವನ್ನು; ಪೂರ್ವ ರೈಲ್ವೆ 3-0ಯಿಂದ ನೈಋತ್ಯ ರೈಲ್ವೆ `ಬಿ~ ತಂಡವನ್ನು; ಸೆಂಟ್ರಲ್ ರೈಲ್ವೆ 3-1ರಿಂದ ಪೂರ್ವ ರೈಲ್ವೆ ತಂಡವನ್ನು; ನೈಋತ್ಯ ರೈಲ್ವೆ `ಎ~ ತಂಡ 3-0ಯಿಂದ ನೈಋತ್ಯ ರೈಲ್ವೆ `ಬಿ~ ತಂಡವನ್ನು ಪರಾಭವಗೊಳಿಸಿದವು.

ನೈಋತ್ಯ ರೈಲ್ವೆ ಕ್ರೀಡಾ ಸಂಘದ ಅಧ್ಯಕ್ಷ ವಶಿಷ್ಟ ಜೋಹ್ರಿ ಬೆಳಿಗ್ಗೆ ಚಾಂಪಿಯನ್‌ಷಿಪ್‌ಗೆ ಚಾಲನೆ ನೀಡಿದರು. ರೈಲ್ವೆ ಇಲಾಖೆಯ ಹಿರಿಯ ಕ್ರೀಡಾಪಟುಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT