ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಶರತ್, ಶಾಮಿನಿಗೆ ಸೋಲು

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಅಚಂತ ಶರತ್ ಕಮಲ್ ಹಾಗೂ ಕೆ. ಶಾಮಿನಿ ಹಾಂಕಾಂಗ್‌ನಲ್ಲಿ ನಡೆದ 26ನೇ ಏಷ್ಯನ್ ಕಪ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ `ಪ್ಲೇ ಆಫ್' ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.

ಕ್ವೀನ್ ಎಲಿಜಬೆತ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಶರತ್ ಕಮಲ್ 11-13, 11-7, 11-5, 1-11, 8-11, 7-11ರಲ್ಲಿ ಆತಿಥೇಯ ರಾಷ್ಟ್ರದ ಟಾಂಗ್ ಪೆಂಗ್ ಎದುರು ಸೋಲು ಕಂಡರು. ಗುಂಪು ಹಂತದ ಪಂದ್ಯದಲ್ಲಿ ಭಾರತದ ಆಟಗಾರ 4-1ರಲ್ಲಿ ಇರಾನ್‌ನ ಅಲಮಿಯಾನ್ ನಿಮಾ ಎದುರು ಸುಲಭ ಗೆಲುವು ಪಡೆದು `ಪ್ಲೇ ಆಫ್' ಹಂತ ಪ್ರವೇಶಿಸಿದ್ದರು.

ಮಹಿಳಾ ವಿಭಾಗದ ಗುಂಪು ಹಂತದ ಮೊದಲ ಪಂದ್ಯದಲ್ಲಿ ಶಾಮಿನಿ 11-6, 11-7, 11-7, 11-87ರಲ್ಲಿ ಕತಾರ್‌ನ ಮಹಮ್ಮದ್ ಆಯಿ ಎದುರು ಗೆಲುವು ಸಾಧಿಸಿದ್ದರು. ಆದರೆ, ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದರು.

ಥಾಯ್ಲೆಂಡ್‌ನ ನಂತನಾ ಕೊಮ್‌ವಾಂಗ್ 11-9, 11-6, 11-6, 9-11, 11-5ರಲ್ಲಿ ಭಾರತದ ಆಟಗಾರ್ತಿಗೆ ಸೋಲುಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT