ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಪಿ ಸಂಸದನ ಮನೆಗೆ ಐಟಿ ದಾಳಿ

Last Updated 4 ಫೆಬ್ರುವರಿ 2011, 17:35 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ತೆಲುಗುದೇಶಂ ಪಕ್ಷದ (ಟಿಡಿಪಿ) ಸಂಸದ ನಾಮ ನಾಗೇಶ್ವರ ರಾವ್ ಇವರಿಗೆ ಸೇರಿದ ವಿವಿಧ ರಾಜ್ಯಗಳಲ್ಲಿರುವ ಮನೆಗಳು, ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.

ಬೆಂಗಳೂರು, ಚೆನ್ನೈ, ಮುಂಬೈ,  ನವದೆಹಲಿ ಹಾಗೂ ಹೈದರಾಬಾದ್ ನಗರಗಳಲ್ಲಿ ಇರುವ ನಾಗೇಶ್ವರ ರಾವ್ ಅವರ ಮಾಲೀಕತ್ವದ ಮನೆಗಳು, ಕಂಪೆನಿಗಳ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು ವಿವಿಧ ದಾಖಲೆ ಪತ್ರಗಳಿಗಾಗಿ ಶೋಧನೆ ನಡೆಸಿದರು.

ಆಂಧ್ರಪ್ರದೇಶದ ಕಮ್ಮಂ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ರಾವ್ ಅವರಿಗೆ ಸೇರಿದ ‘ಮಧುಕನ್ ಗ್ರೂಪ್ ಆಫ್ ಕಂಪೆನಿಸ್’, ಇದರ ಅಂಗ ಸಂಸ್ಥೆ  ‘ಮಧುಕನ್ ಇನ್‌ಫ್ರಾ’ ಉದ್ಯಮಗಳೂ ಇವೆ. ಎಲ್ಲಿಯೂ ಶೋಧನೆ ನಡೆಸಲಾಗಿದೆ. ಸಂಸದ ರಾವ್ 173 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದು, ಲೋಕಸಭೆಯ ಹಾಲಿ ಸಂಸದರಲ್ಲಿಯೇ  ಹೆಚ್ಚು ಶ್ರೀಮಂತರಾಗಿದ್ದಾರೆ. ಭಾರಿ ಮೊತ್ತದ ತೆರಿಗೆ ಪಾವತಿಸದ ಕಾರಣ ನಾಗೇಶ್ವರ ರಾವ್ ಅವರ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT