ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ಗಲಭೆ ಪ್ರಕರಣ: ನಿಷೇಧಾಜ್ಞೆ ಸಡಿಲಿಸಲು ಮನವಿ

Last Updated 20 ಡಿಸೆಂಬರ್ 2013, 5:16 IST
ಅಕ್ಷರ ಗಾತ್ರ

ಸಿಂದಗಿ: ನಗರದಲ್ಲಿ ಡಿಸೆಂಬರ್ 17 ರಂದು ನಡೆದ ಟಿಪ್ಪು ಸುಲ್ತಾನ್ ಜಯಂತಿ ಗಲಭೆ ಪ್ರಕರಣದ ಹಿನ್ನೆಲೆ ಯಲ್ಲಿ ಜಾರಿಗೆ ತಂದಿರುವ ನಿಷೇಧಾಜ್ಞೆ ಯನ್ನು ಸಡಿಲು ಗೊಳಿಸುವಂತೆ ಒತ್ತಾ ಯಿಸಿ ಗುರುವಾರ ಸಿಂದಗಿಯ ನಾಗರಿಕರು ಪೊಲೀಸ್ ಹಿರಿಯ ಅಧಿಕಾರಿಗೆ ಮನವಿ  ಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಯುವ ಧುರೀಣ ಅಶೋಕ ಮನಗೂಳಿ, ವರ್ತಕರ ಸಂಘದ ಅಧ್ಯಕ್ಷ ಅಶೋಕ ವಾರದ ಗಲಭೆಗೆ ಸಂಬಂಧ ಪಟ್ಟಂತೆ ನಿಷೇಧಾಜ್ಞೆ ಜಾರಿಗೆ ತಂದಿರು ವುದಕ್ಕೆ ನಮ್ಮೆಲ್ಲರ ಬೆಂಬಲವಿದೆ. ಆದರೆ ನಿಷೇಧಾಜ್ಞೆಯ ಅಂಶಗಳನ್ನು ಅಂದರೆ ನಾಲ್ಕು ಜನ ಒಟ್ಟಾಗಿ ತಿರುಗಾಡ ಬಾರದು, ಸಭೆ, ಸಮಾರಂಭ ನಡೆಸಬಾ ರದು, ಮೆರವಣಿಗೆ ನಡೆಸಕೂಡದು ಇಂಥವುಗಳನ್ನು ಕಟ್ಟುನಿಟ್ಟಾಗಿ ಅನುಸರಿ ಸಿಕೊಳ್ಳಬೇಕೆ ವಿನಾ ಎಲ್ಲ ಅಂಗಡಿಗಳನ್ನು ಮುಚ್ಚಿಸಿ ವ್ಯಾಪಾರ–ವ್ಯವಹಾರ ಸ್ಥಗಿತ ಗೊಳಿಸುವ ಮೂಲಕ ಜನಜೀವನ ಅಸ್ತವ್ಯಸ್ತಗೊಳಿಸುವುದು ಸರಿಯಲ್ಲ.

ಈ ಎರಡು ದಿನಗಳಿಂದ ನಗರದ ಜನತೆಗೆ ಅಪಾರ ತೊಂದರೆಯಾಗಿದೆ. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಆಗುತ್ತಿಲ್ಲ. ಹೀಗಾಗಿ ರೈತರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಕೂಡಲೇ ನಿಷೇಧಾಜ್ಞೆ ಸಡಿಲು ಗೊಳಿಸಿ ನಾಗರಿಕರು ಸಹಜ ಸ್ಥಿತಿಗೆ ಬರಲು ಅವಕಾಶ ಕಲ್ಪಸಿಕೊಡಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಹಿರೇಕುರುಬರ, ವಕ್ತಾರ ಸಿದ್ದಣ್ಣ ಚೌಧರಿ, ಕೃಷಿ ಮಾರುಕಟ್ಟೆ ಸಮಿತಿ ವರ್ತಕರ ಸಂಘದ ಅಧ್ಯಕ್ಷ ಉಮೇಶ ಜೋಗೂರ, ಷಣ್ಮುಖಪ್ಪ ಸಂಗಮ, ವಿಶ್ವನಾಥ ಲೋಣಿ, ಕೆಜೆಪಿ ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಕಿರಣರಾಜ್,

ಪುರ ಸಭೆ ಸದಸ್ಯ ಷಣ್ಮುಖ ಕುರಡೆ, ಕಾಂಗ್ರೆಸ್ ಧುರೀಣ ಮಲ್ಲು ಗತ್ತರಗಿ, ಝುಲ್ಪಿಕರ ಅಂಗಡಿ, ಬಸವರಾಜ ಯರನಾಳ, ಗೊಲ್ಲಾಳಪ್ಪಗೌಡ ಪಾಟೀಲ ಗೋಲ ಗೇರಿ, ಬಾನು ನಾಟೀಕಾರ, ರಾಜಣ್ಣ ನಾರಾಯಣಕರ, ಮಲಕನಗೌಡ ಪಾಟೀಲ, ಚನ್ನು ಪಟ್ಟಣಶೆಟ್ಟಿ, ಮೌಲಾ ಸಾಬ ಬಾಗವಾನ, ಜಿಲಾನಿ ನಾಟೀ ಕಾರ, ರಿಯಾಜ ಬಮ್ಮನಜೋಗಿ, ಅಬ್ದುಲಸಾಬ, ಅಕ್ಬರ ಹಾಜರಿದ್ದರು.
ಇಂಡಿ ಉಪವಿಭಾಗ ಡಿ.ವೈ.ಎಸ್.ಪಿ ಡಾ.ಶಿವಕುಮಾರ ಗುಣಾರೆ ಮನವಿ ಪತ್ರ ಸ್ವೀಕರಿಸಿದರು. ಸಿಂದಗಿ ಸಿ.ಪಿ.ಐ ಗಂಗಾಧರ ಮಠ ಉಪಸ್ಥಿತರಿದ್ದರು.

15 ಜನರ ಬಂಧನ: ಮೆರವಣಿಗೆ ಯಲ್ಲಿ ಕಲ್ಲು ತೂರಾಟಕ್ಕೆ ಸಂಬಂಧಿಸಿ ದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT