ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ವಿವಿ ಸ್ಥಾಪನೆಯಾಗಲಿ: ಖುರೇಶಿ

Last Updated 2 ಡಿಸೆಂಬರ್ 2013, 6:29 IST
ಅಕ್ಷರ ಗಾತ್ರ

ಸುರಪುರ: ಬ್ರಿಟಿಷರಿಗೆ ಸಿಂಹ­ಸ್ವಪ್ನ­ವಾಗಿದ್ದ ಟಿಪ್ಪುಸುಲ್ತಾನ್‌ ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಮಹಾನ್‌ ಪುರುಷ. ಇಂಥ ಮಹಾನ್‌ ಪುರುಷನ ಸ್ಮಣಾರ್ಥವಾಗಿ ರಾಜ್ಯದಲ್ಲಿ ಟಿಪ್ಪು­ಸುಲ್ತಾನ್‌ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಕೂಡಲೆ ಮುಂದಾ­ಗಬೇಕು ಎಂದು ಟಿಪ್ಪುಸುಲ್ತಾನ್‌ ಸಂಘಟನೆ ರಾಜ್ಯಾಧ್ಯಕ್ಷ ಸರ್ದಾರ್‌ ಹಮೀದ ಖುರೇಶಿ ಆಗ್ರಹಿಸಿದರು.

ಇಲ್ಲಿಯ ಗರುಡಾದ್ರಿ ಕಲಾಮಂದಿರ­ದಲ್ಲಿ ಟಿಪ್ಪುಸುಲ್ತಾನ್‌ ಸೇವಾ ಸಂಘ ಹಾಗೂ ಮುಸ್ಲಿಂ ಯುವಕ ಸಂಘ ಭಾನುವಾರ ಏರ್ಪಡಿಸಿದ್ದ ಟಿಪ್ಪು­ಸುಲ್ತಾನ್‌ರ 264ನೇ ಜಯಂತಿ ಆಚ­ರಣೆಯಲ್ಲಿ ಅವರು ಮಾತನಾಡಿದರು.

ಟಿಪ್ಪು ಹಿಂದುಗಳನ್ನು ಮತಾಂತರ ಮಾಡಿದ ಎಂದು ಕೆಲ ಇತಿಹಾಸಕಾರರು ಮತ್ತು ಮತಾಂದವರು ತಪ್ಪು ಪ್ರಚಾರ ಮಾಡಿ ಹಿಂದು ಮುಸ್ಲಿಂರಲ್ಲಿ ವಿಷ ಬೀಜ ಬಿತ್ತಿದ್ದಾರೆ. ಟಿಪ್ಪು ಪರಧರ್ಮ ಸಹಿಷ್ಣುವಾಗಿದ್ದ ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ಕಂಡಿ­ದ್ದಾನೆ. ಆತನ ಆಡಳಿತದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿತ್ತು ಎನ್ನುವುದಕ್ಕೆ ಸಾಕಷ್ಟು ದಾಖಲೆಗಳು ಲಭ್ಯವಾಗಿವೆ. ಮುಂಬರುವ ದಿನಗಳಲ್ಲಿ ಟಪ್ಪು ಜಯಂತಿಯನ್ನು ಸರ್ಕಾರ ಆಚರಣೆ ಮಾಡಿ ರಜೆ ಘೋಷಿಸಬೇಕು ಮತ್ತು ಟಪ್ಪು ಸುಲ್ತಾನ ಹೆರಿನಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ನೀಡಬೇಕು, ಪ್ರಾಧಿಕಾರ ರಚನೆ ಮಾಡಬೇಕು ಎಂದರು.

ಸಾನಿಧ್ಯ ವಹಿಸಿದ್ದ ಮಳಖೇಡದ ಸಜ್ಜಾದ ನಸ್ರನ್ ಸೈಯದ್‌ ಶಹಾ ಮೊಹ್ಮದ ಮುಸ್ತಾಫ್ ಖಾದ್ರಿ ಮಾತನಾಡಿ. ಟಿಪ್ಪು ಕೇವಲ ಮುಸ್ಲಿಂ ಜನಾಂಗಕ್ಕೆ ಮಾತ್ರ ಅರಸನಾಗಿರಲಿಲ್ಲ. ಟಿಪ್ಪು ಈ ನಾಡಿನ ಸರ್ವ ಜನಾಂಗದ ಆಸ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಟಿಪ್ಪುಸುಲ್ತಾನ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಟಿಪ್ಪು ಸುಲ್ತಾನ್‌ ಪ್ರಚಾರ ಸಮಿತಿ ರಾಜ್ಯ ಘಟಕ ಅಧ್ಯಕ್ಷ ತಲಕಾಡಿನ ಚಿಕ್ಕರಂಗೇಗೌಡ, ಸಂಘಟನೆಯ ರಾಜ್ಯ ಕಾರ್ಯದರ್ಶಿ ದಾವುದ್ ಇಕ್ಬಾಲ್ಸಾಬ, ರಾಜಾ ವೆಂಕಟಪ್ಪ ನಾಯಕ ತಾತಾ, ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಮಹ್ಮದಸಲೀಂ, ಬಿಸಿಎನ್ ದೇಶ­ಮುಖ್, ಡಾ.ಶಫೀ ಉಜ್ಜಮಾ, ಕಿಶೋ­ರ­ಚಂದ ಜೈನ್, ಎಸ್.ಬಿ. ಕಟ್ಟಿಮನಿ, ಪಿಐ. ಅಸ್ಲಾಂಬಾಷಾ, ಅಪ್ಸರಹುಸೇನ ದಲಾಲಇತರರು ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಟಿಪ್ಪುಸುಲ್ತಾನ ವೃತ್ತದಿಂದ ಪಟ್ಟಣದ ಮುಖ್ಯರಸ್ತೆಗಳಲ್ಲಿ ಟಿಪ್ಪುಸುಲ್ತಾನ್ ಭಾವಚಿತ್ರ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT