ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿ ಜಾಹೀರಾತಿಗೆ ಟ್ರಾಯ್ `ಕತ್ತರಿ'!

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಟಿವಿ ಕಾರ್ಯಕ್ರಮಗಳ ಮಧ್ಯೆ ಪ್ರಸಾರವಾಗುವ ಜಾಹೀರಾತುಗಳಿಂದ ರೋಸಿ ಹೋದವರು ಇನ್ನು ಮುಂದೆ ಒಂದಷ್ಟು ನಿರಾಳತೆ ಅನುಭವಿಸಬಹುದು...

ಅಕ್ಟೋಬರ್ ತಿಂಗಳಿನಿಂದ ನಿಗದಿತ ಅವಧಿಯಷ್ಟೇ ಜಾಹೀರಾತು ಪ್ರಸಾರಕ್ಕೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ದೇಶನ ನೀಡಿದೆ.

ಪ್ರತಿ ಗಂಟೆಯ ಅವಧಿಯಲ್ಲಿ 12 ನಿಮಿಷಗಳಷ್ಟು ಮಾತ್ರ ಜಾಹೀರಾತು ಅಥವಾ ಕಾರ್ಯಕ್ರಮಗಳ ಪ್ರೋಮೊ ಪ್ರಸಾರ ಮಾಡಬೇಕು ಎಂದು ಸೂಚಿಸಿದೆ.

`ಟ್ರಾಯ್'ನ ಈ ಕಾಯ್ದೆಯು ವೀಕ್ಷಕರಿಗೆ ಖುಷಿ ನೀಡಬಹುದು. ಆದರೆ ಜಾಹೀರಾತು ಹಾಗೂ ಮಾಧ್ಯಮ ಕಂಪೆನಿಗಳು ಇದನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸುತ್ತಿವೆ. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ ಕೆಲವು ಪ್ರಸಾರ ನಿರ್ವಾಹಕರು, ಈಗ ಈ ಕಾಯ್ದೆಯನ್ನು ಹಂತಹಂತವಾಗಿ ಜಾರಿ ಮಾಡಲು ಸಮ್ಮತಿ ಸೂಚಿಸಿದ್ದಾರೆ.

`ಈ ಕಾಯ್ದೆ ಎಂಟು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ ಈವರೆಗೆ ಜಾರಿಯಾಗಿರಲಿಲ್ಲ. ಈಗ ಸಮಯ ಸನ್ನಿಹಿತವಾಗಿದೆ ಎಂದು ಭಾವಿಸಿದ ಟ್ರಾಯ್, ಕಾಯ್ದೆ ಅನುಷ್ಠಾನ ಮಾಡಿದೆ' ಎಂದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೆಡರೇಶನ್‌ನ ಮಹಾ ಕಾರ್ಯದರ್ಶಿ ಶೈಲೇಶ್ ಷಾ ಅವರು ಪ್ರತಿಕ್ರಿಯೆ ನೀಡಿದ್ದಾರೆ

ಕಾಯ್ದೆ ಜಾರಿಯಿಂದ ಜಾಹೀರಾತುದಾರರು, ಏಜೆನ್ಸಿಗಳು ಹಾಗೂ ಚಾನೆಲ್‌ಗಳಿಗೆ ಆರ್ಥಿಕ ನಷ್ಟವಾಗಲಿದೆ. ಆದರೆ ಎಲ್ಲರೂ ಒಟ್ಟಾಗಿ ಚರ್ಚಿಸಿ, ಆದಾಯ ವೃದ್ಧಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಲು ಇದು ಸಕಾಲ ಎಂದು ಅವರು ಹೇಳಿದರು.

`ಪ್ರತಿ ಗಂಟೆಗೆ ಕೇವಲ 12 ನಿಮಿಷಗಳಷ್ಟು ಜಾಹೀರಾತು ಪ್ರಸಾರ ಮಾಡುವುದರಿಂದ ದರ ನಿಗದಿ ಮೇಲೆ ಪರಿಣಾಮ ಬೀರಬಹುದೇ' ಎಂಬ ಪ್ರಶ್ನೆಗೆ, `ಮಾರುಕಟ್ಟೆಯನ್ನು ಆಧರಿಸಿ ಯಾವಾಗಲೂ ಜಾಹೀರಾತು ದರಗಳು ನಿಗದಿಯಾಗುತ್ತವೆ. ಮುಂದೆಯೂ ಇದೇ ರೀತಿ ಇರಲಿದೆ' ಎಂದು ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT