ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಟಿಸಿಎಸ್' ಶೇ15.5ರಷ್ಟು ಪ್ರಗತಿ

1ನೇ ತ್ರೈಮಾಸಿಕ ಲಾಭ ರೂ.3,831 ಕೋಟಿ
Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ದೇಶದ ಸಾಫ್ಟ್‌ವೇರ್ ರಫ್ತು ಕ್ಷೇತ್ರದ ಅತಿದೊಡ್ಡ ಕಂಪೆನಿ `ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್'(ಟಿಸಿಎಸ್), ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ.3,831 ಕೋಟಿ ನಿವ್ವಳ ಲಾಭ ಗಳಿಸಿದೆ.

2012-13ನೇ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿನ ನಿವ್ವಳ ಲಾಭ ರೂ.3,318 ಕೋಟಿಗೆ ಹೋಲಿಸಿದರೆ ಈ ಬಾರಿಯ ಲಾಭ ಗಳಿಕೆ ಪ್ರಮಾಣದಲ್ಲಿ ಶೇ 15.5ರಷ್ಟು ಹೆಚ್ಚಳವಾಗಿದೆ.

ಏಪ್ರಿಲ್-ಜೂನ್ ಅವಧಿಯಲ್ಲಿ ಕಂಪೆನಿಯ ಕ್ರೋಡೀಕೃತ ಆದಾಯ ರೂ.17,987 ಕೋಟಿಗೆ (ಶೇ 21ರಷ್ಟು) ಹೆಚ್ಚಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ.14,869 ಕೋಟಿ ಆದಾಯವಾಗಿತ್ತು. ನಿರ್ವಹಣಾ ಲಾಭ ಪ್ರಮಾಣದಲ್ಲಿಯೂ ಶೇ 26.9ರಷ್ಟು ಹೆಚ್ಚಳವಾಗಿದೆ ಎಂದು `ಮುಂಬೈ ಷೇರು ವಿನಿಮಯ ಕೇಂದ್ರ'ಕ್ಕೆ(ಬಿಎಸ್‌ಇ) ಟಿಸಿಎಸ್ ವಿವರ ವರದಿ ಸಲ್ಲಿಸಿದೆ.

ಯೂರೋಪ್ ವಲಯದಲ್ಲಿ `ಟಿಸಿಎಸ್' ಬಂಡವಾಳ ಹೂಡಿಕೆ ಮುಂದುವರಿದಿದೆ. ಹಾಗಾಗಿ ಹೊಸ ಗ್ರಾಹಕರು ಲಭಿಸುವ ಪ್ರಮಾಣವೂ ಹೆಚ್ಚಿದೆ. 10 ಕೋಟಿ ಡಾಲರ್‌ಗೂ ಅಧಿಕ ಮೌಲ್ಯದ ಎರಡು ಕಂಪೆನಿಗಳು ಮೊದಲ ತ್ರೈಮಾಸಿಕ ಅವಧಿಯಲ್ಲಿ `ಟಿಸಿಎಸ್'ಗೆ ಹೊಸ ಗ್ರಾಹಕರಾಗಿ ದೊರಕಿವೆ. ಇದೇ ವೇಳೆ ಹೊಸದಾಗಿ 10,611 ಸಿಬ್ಬಂದಿಗಳ ನೇಮಕವಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎನ್.ಚಂದ್ರಶೇಖರನ್ ವಿವರ ನೀಡಿದ್ದಾರೆ.

ಷೇರು ಕುಸಿತ
ಕಂಪೆನಿ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿದ್ದರೂ ಷೇರುಪೇಟೆಯಲ್ಲಿ ಗುರುವಾರದ ವಹಿವಾಟಿನಲ್ಲಿ `ಟಿಸಿಎಸ್' ಷೇರುಗಳು ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದಲ್ಲಿ ಶೇ 0.82ರಷ್ಟು, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದಲ್ಲಿ ಶೇ 1.19ರಷ್ಟು ಮೌಲ್ಯ ಕಳೆದುಕೊಂಡವು.

ದಿನದ ಕೊನೆಗೆ ಟಿಸಿಎಸ್ ಷೇರು `ಬಿಎಸ್‌ಇ'ಯಲ್ಲಿ ರೂ.1,660.15ರಲ್ಲಿ, `ಎನ್‌ಎಸ್‌ಇ'ಯಲ್ಲಿ ರೂ.1,658.50ರಲ್ಲಿ ವಹಿವಾಟು ನಡೆಸಿದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT